Breaking News

ಸಿಎಂ ಆಗಲು ಡಿಕೆಶಿಯಿಂದಲೇ ಸ್ಟಿಂಗ್ ಆಪರೇಷನ್: ಹೆಚ್‌ಡಿಕೆ ಬಾಂಬ್

Spread the love

ಬೆಂಗಳೂರು: ಹೈಕಮಾಂಡ್‌ಗೆ ಸ್ಟಿಂಗ್ ಆಪರೇಷನ್  ವೀಡಿಯೋ ಕೊಟ್ಟು ಡಿಕೆಶಿ  ಸಿಎಂ ಆಗಿದ್ದಾರೆ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ  ಹೊಸ ಬಾಂಬ್ ಸಿಡಿಸಿದ್ದಾರೆ.

ಸಚಿವ ಸಂಪುಟ ಸಭೆಯಲ್ಲಿ ಡಿಕೆಶಿ ಸಚಿವರಿಗೆ ಎಚ್ಚರಿಕೆ ಕೊಟ್ಟ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಎಚ್ಚರಿಕೆ ಕೊಟ್ಟಿದ್ದಾರೆ ಅಂತೆ. ಸಿಎಂ ಆಗೋಕೆ ಕಾರಣ ಹೈಕಮಾಂಡ್‌ಗೆ ಸ್ಟಿಂಗ್ ಆಪರೇಷನ್ ವೀಡಿಯೋ ಕೊಟ್ಟು ಸಿಎಂ ಆಗಿದ್ದಾರೆ ಅಂತ ಕಾಂಗ್ರೆಸ್‌ನವರು ಹೇಳುತ್ತಾರೆ. ಈ ಸಿಎಂಗೆ ಸ್ಟಿಂಗ್ ಆಪರೇಷನ್ ಮಾಡೋದೆ ಕೆಲಸನಾ? ಮಂತ್ರಿಗಳ ಮೇಲೆ ವಿಶ್ವಾಸ ಇಲ್ವಾ ಎಂದು ಕಿಡಿಕಾರಿದರು.

ಕ್ಯಾಬಿನೆಟ್‌ನಲ್ಲಿ ಕೂತು ಮಾತಾಡೋದಾ? ಎಲ್ಲಾದ್ರು ಉಂಟಾ? ನನಗೆ ಮಾಹಿತಿ ಬರುತ್ತಿದೆ ಅಂತ ಹೇಳುತ್ತಿದ್ದಾರೆ. ಸಚಿವರ ಸ್ಟಿಂಗ್ ಮಾಡಿ ಡಿಕೆಶಿ ಅವರ ಕಪಿಮುಷ್ಠಿಯಲ್ಲಿ ಇಟ್ಟಿಕೊಳ್ಳಲು ನೋಡುತ್ತಿದ್ದಾರೆ. ಕುಮಾರಸ್ವಾಮಿ ಮಾಡುತ್ತಿದ್ದಾರೆ ಅಂದರೆ ಸರ್ಕಾರ ಕ್ರಮ ತೆಗೆದುಕೊಳ್ಳಲಿ. ರಾಜಣ್ಣ ಕಥೆ ಏನು ಆಯ್ತು? ಯಾರು ಮಾಡಿಸಿದ್ದು? ಇನ್ನು 40 ಜನದ್ದು ಇದೆ ಅಂತ ಸದನದಲ್ಲಿ ಹೇಳಿದ್ದರು. ರೇವಣ್ಣ ಮಗನದ್ದು ಒಂದು ಹೆಣ್ಣು ಮಗಳನ್ನ ಕರೆಸಿಯೇ ಸಾಕಾಗಿದ್ದು ಅಂತ ಡಿಕೆಶಿ ಮಾತಾಡಿದ್ದು ಅಲ್ಲವಾ ಎಂದು ಆರೋಪಿಸಿದರು.

ಪ್ರಮುಖ ನಾಯಕರ ವಿಡಿಯೋ ಓಡಾಡುತ್ತಿತ್ತು. ಈಗ ಅದೇನೋ ನಿಲ್ಲಿಸಿದ್ದಾರೆ. ಕಾಂಗ್ರೆಸ್‌ನವರೇ ಇದು ಹೇಳಿರೋದು. ಯಾಕೆ ಈ ವಿಷಯ ಹೇಳಿದ್ರು ಅಂತ ಸಿಎಂನ ಕೇಳಿ. ಯಾರು ಸಚಿವರು ಅಂತ ಸಿಎಂ ಹೇಳಿದ್ದಾರೆ. ಯಾರೋ ಹಿಂದೆ ವೀಡಿಯೋಗೆ ಸ್ಟೇ ತಂದಿದ್ದಾರೆ. ಮೊನ್ನೆ ಯಾರೋ ನೇಪಾಳ ಅದು ಇದು ಅಂದರು. ಅವರನ್ನು ಕೇಳಿದರೆ ಈ ಸ್ಟಿಂಗ್ ಬಗ್ಗೆ ಹೇಳುತ್ತಾರೆ ಅನಿಸುತ್ತದೆ. ನನ್ನ ಕಾಲದಲ್ಲಿ ಇಂತಹ ಚರ್ಚೆ ಆಗಿರಲಿಲ್ಲ. ಅಭಿವೃದ್ಧಿ ವಿಷಯ ಬಿಟ್ಟರೆ ಇಂತಹ ವಿಷಯ ಚರ್ಚೆ ಆಗುತ್ತಿರಲಿಲ್ಲ. ಇದು ಇತ್ತೀಚೆಗೆ ಶುರುವಾಗಿರೋದು. ಸಿದ್ದರಾಮಯ್ಯ ಎರಡು ಬಾರಿ ಸಿಎಂ ಆದ ಮೇಲೆ ಅದೇನೋ ಎರಡೂವರೆ ವರ್ಷ ಅಂತ ನಡೀತು. ಆ ಎರಡೂವರೆ ವರ್ಷ ಇಂಪ್ಲಿಮೆಂಟ್ ಮಾಡಲು ಅವರ ಹಳೆಯ ಕಸುಬುನ್ನ ಉಪಯೋಗ ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.


Spread the love

About Laxminews 24x7

Check Also

ನೀರಿನ ಸಂಪಿನಲ್ಲಿ ಬಿದ್ದು 6 ವರ್ಷದ ಬಾಲಕ ಸಾವು

Spread the loveಹುಬ್ಬಳ್ಳಿ: ನೀರಿನ ಸಂಪಿನಲ್ಲಿ ಬಿದ್ದು 6 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯಲ್ಲಿ  ನಡೆದಿದೆ. ಹುಬ್ಬಳ್ಳಿ ಉಣಕಲ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ