Breaking News

ತಲೆಮರೆಸಿಕೊಂಡ ರೇಪ್‌ ಆರೋಪಿಗೆ ಠಾಣೆಯ ಮಾಹಿತಿ ರವಾನೆ – ಕಾನ್ಸ್‌ಟೇಬಲ್ ಸಸ್ಪೆಂಡ್‌

Spread the love

ಚಿಕ್ಕಮಗಳೂರು: ತಲೆಮರೆಸಿಕೊಂಡಿರುವ ಅತ್ಯಾಚಾರ ಆರೋಪಿ ಜೊತೆ ನಿರಂತರ ಸಂಪರ್ಕದಲ್ಲಿದ್ದುಕೊಂಡು ಸೂಕ್ಷ್ಮ ಮಾಹಿತಿ ರವಾನಿಸುತ್ತಿದ್ದ ಎನ್‌.ಆರ್‌ ಪುರ ಠಾಣೆಯ ಕಾನ್ಸ್‌ಟೇಬಲ್‌ ಒಬ್ಬನನ್ನು ಎಸ್‌ಪಿ ಜಿತೇಂದ್ರ ಕುಮಾರ್ ದಯ್ಮಾ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಎನ್.ಆರ್.ಪುರ ಠಾಣೆಯ ಕಾಂತೇಶ್ ಅಮಾನತಾದ ಪೇದೆ. ಅತ್ಯಾಚಾರ ಪ್ರಕರಣದ ಆರೋಪಿ ಸತೀಶ್ ಪಾತ್ರಿ ಕುಟುಂಬದ ಜೊತೆ ಕಾಂತೇಶ್‌ ನಿರಂತರ ಸಂಪರ್ಕದಲ್ಲಿದ್ದ. ಕಳೆದ ಒಂದು ತಿಂಗಳಿನಿಂದ ತಲೆಮರೆಸಿಕೊಂಡಿರುವ ಆರೋಪಿ ಸತೀಶ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಆದರೆ ಆರೋಪಿಗೆ ಠಾಣೆಯ ಸಂಪೂರ್ಣ ಮಾಹಿತಿಯನ್ನು ಕಾಂತೇಶ್ ನೀಡುತ್ತಿದ್ದ ಎಂದು ತಿಳಿದುಬಂದಿದೆ. 

ಭೂತ ಬಿಡಿಸುವ ನೆಪದಲ್ಲಿ ಅಪ್ರಾಪ್ತ ಬಾಲಕಿಗೆ ಕೋಳಿ ರಕ್ತ ಕುಡಿಯುವಂತೆ ಸತೀಶ್ ಹಿಂಸೆ ನೀಡಿದ್ದ. ವಿಡಿಯೋ ವೈರಲ್ ಬೆನ್ನಲ್ಲೇ ಆತನ ವಿರುದ್ಧ ದೂರು ದಾಖಲಾಗಿತ್ತು. ದೂರು ದಾಖಲಾದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದ.


Spread the love

About Laxminews 24x7

Check Also

ನೀರಿನ ಸಂಪಿನಲ್ಲಿ ಬಿದ್ದು 6 ವರ್ಷದ ಬಾಲಕ ಸಾವು

Spread the loveಹುಬ್ಬಳ್ಳಿ: ನೀರಿನ ಸಂಪಿನಲ್ಲಿ ಬಿದ್ದು 6 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯಲ್ಲಿ  ನಡೆದಿದೆ. ಹುಬ್ಬಳ್ಳಿ ಉಣಕಲ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ