Breaking News

ಭಾವಿ ಪತಿಯನ್ನ ಪರಿಚಯಿಸಿದ ಬಿಗ್‌ಬಾಸ್‌ ಖ್ಯಾತಿಯ ಸ್ಪಂದನಾ ಸೋಮಣ್ಣ

Spread the love

ಬಿಗ್‌ಬಾಸ್ ಖ್ಯಾತಿಯ ನಟಿ ಸ್ಪಂದನಾ ಸೋಮಣ್ಣ  ತಮ್ಮ ಮದುವೆ ವಿಚಾರದಲ್ಲಿದ್ದ ಎಲ್ಲಾ ಸಸ್ಪೆನ್ಸ್‌ಗೆ ಕೊನೆಗೂ ತೆರೆ ಎಳೆದಿದ್ದಾರೆ. ತಮ್ಮ ಭಾವಿ ಪತಿಯನ್ನ ರಿವೀಲ್‌ ಮಾಡಿರುವ ನಟಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.

ಇತ್ತೀಚೆಗೆ ಪ್ಯಾರೀಸ್‌ನ ಐಫೆಲ್ ಟವರ್ ಮುಂದೆ ಹುಡುಗನೊಬ್ಬನ ಕೈಹಿಡಿದು ನಡೆಯುತ್ತಿರುವ ಫೋಟೋ ಹಂಚಿಕೊಂಡಿದ್ದ ಸ್ಪಂದನಾ, ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದ್ದರು.

ಆ ಫೋಟೋದಲ್ಲಿದ್ದ ಹುಡುಗ ಯಾರು ಅನ್ನೋ ಪ್ರಶ್ನೆ ಎಲ್ಲರಲ್ಲೂ ಇತ್ತು. ಆದರೆ, ಕೊನೆಗೂ ಈ ಎಲ್ಲ ಪ್ರಶ್ನೆಗಳಿಗೆ ನಟಿ ತೆರೆ ಎಳೆದಿದ್ದಾರೆ.

ಹೇಳಿದಂತೆಯೇ ಇದೀಗ ಸ್ಪಂದನಾ ಸೋಮಣ್ಣ ತಮ್ಮ ಭಾವಿ ಪತಿಯನ್ನು ಅಧಿಕೃತವಾಗಿ ಪರಿಚಯಿಸಿದ್ದಾರೆ. ವರುಣ್ ಮುನಿರಾಜು ಅವರು ಸ್ಪಂದನಾ ಅವರಿಗೆ ಪ್ರಪೋಸ್‌ ಮಾಡಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಅಷ್ಟೇ ಅಲ್ಲ, ತಮ್ಮಿಬ್ಬರ ನಡುವಿನ ಪ್ರೀತಿ ಕೂಡ ಹೊಸದೇನಲ್ಲ ಅನ್ನೋದನ್ನು ಸ್ಪಂದನಾ ರಿವೀಲ್ ಮಾಡಿದ್ದಾರೆ.

ವರುಣ್ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿರುವ ಸ್ಪಂದನಾ, ತಮ್ಮ ಪ್ರೇಮಕಥೆಯ ಬಗ್ಗೆ ಕ್ಯಾಪ್ಷನ್‌ನಲ್ಲಿ ಬರೆದುಕೊಂಡಿದ್ದಾರೆ.

“ನಮ್ಮಿಬ್ಬರ ಬಳಿ ಯಾವುದೇ ಕೆಲಸವಿಲ್ಲದೆ, ಕೈಯಲ್ಲಿ ಹಣವಿಲ್ಲದೆ, ಭವಿಷ್ಯ ಎಲ್ಲಿ ಕರೆದುಕೊಂಡು ಹೋಗುತ್ತದೆ ಎಂಬುದರ ಅರಿವಿಲ್ಲದೆ ಜೀವನದ ದಾರಿ ಹುಡುಕುತ್ತಿದ್ದ ಆರಂಭಿಕ ದಿನಗಳಲ್ಲೇ ನಾವು ಸಿಕ್ಕಿದ್ದು ನನಗೆ ಇಂದಿಗೂ ನೆನಪಿದೆ. ಆದರೂ ನಾವಿಬ್ಬರೂ ಒಬ್ಬರಿಗೊಬ್ಬರು ಸಾಥ್ ನೀಡಿದೆವು” ಎಂದು ಬರೆದುಕೊಂಡಿದ್ದಾರೆ.

ತಾವು ತಮ್ಮ ಮೇಲೆಯೇ ಭರವಸೆ ಕಳೆದುಕೊಂಡಾಗಲೂ ವರುಣ್ ಜೊತೆಯಾಗಿದ್ದರು ಎಂದು ಸ್ಪಂದನಾ ಹೇಳಿದ್ದಾರೆ. ತಮ್ಮ ಆಡಿಷನ್‌ಗಳಿಗೆ ಜೊತೆಯಾಗಿ ಬಂದು, ಹೊಸ ಪ್ರಯತ್ನಗಳನ್ನು ಮಾಡಲು ಪ್ರೋತ್ಸಾಹಿಸುತ್ತಿದ್ದರು. ಪ್ರತಿಯೊಂದು ಹೆಜ್ಜೆಯಲ್ಲೂ ತಮ್ಮನ್ನು ನಂಬಿದ್ದರು ಎಂದು ಬರೆದುಕೊಂಡಿದ್ದಾರೆ.

 

“ಇಷ್ಟು ವರ್ಷಗಳಲ್ಲಿ ನೀನೇ ನನ್ನ ಶಕ್ತಿ ಮತ್ತು ಅತಿ ದೊಡ್ಡ ಬೆಂಬಲಿಗನಾಗಿ ನಿಂತೆ. ನಾವು ಹಂಚಿಕೊಂಡ ಅನುಭವಗಳು ಹಾಗೂ ಬೆಳೆದು ಬಂದ ಹಾದಿಯ ನಂತರ, ನಿನ್ನನ್ನು ನನ್ನ ‘ಗಂಡ’ ಹಾಗೂ ನೀನು ನನ್ನನ್ನು ‘ಹೆಂಡತಿ’ ಎಂದು ಕರೆಯುವ ಕ್ಷಣ ಬರುತ್ತಿರುವುದಕ್ಕೆ ನನಗೆ ಅಪಾರ ಸಂತೋಷವಾಗುತ್ತಿದೆ” ಎಂದು ಸ್ಪಂದನಾ ಬರೆದುಕೊಂಡಿದ್ದಾರೆ.

“ನನ್ನ ಜೀವನದಲ್ಲಿ ನಾನು ಹೇಳಿದ ಅತ್ಯಂತ ಸುಲಭವಾದ ‘YES’ ಇದು. ನನಗಾಗಿ ಸದಾ ಜೊತೆಯಾಗಿ ನಿಂತಿದ್ದಕ್ಕೆ, ನನ್ನನ್ನು ನಂಬಿದ್ದಕ್ಕೆ ಹಾಗೂ ನನ್ನನ್ನೇ ಆಯ್ಕೆ ಮಾಡಿಕೊಂಡಿದ್ದಕ್ಕೆ ಧನ್ಯವಾದಗಳು. ನಮ್ಮ ಮುಂದಿನ ಹೊಸ ಅಧ್ಯಾಯಕ್ಕೆ ಹಾಗೂ ಎಂದೆಂದಿಗೂ ಜೊತೆಯಾಗಿರುವುದಕ್ಕೆ ಚೀರ್ಸ್! ಐ ಲವ್ ಯೂ! ನಿನ್ನನ್ನು ‘ಗಂಡ’ ಎಂದು ಕರೆಯಲು ಕಾಯುತ್ತಿದ್ದೇನೆ” ಎಂದು ಪ್ರೀತಿಯಿಂದ ಪೋಸ್ಟ್ ಮಾಡಿದ್ದಾರೆ.

ಸ್ಪಂದನಾ ಅವರ ಈ ಪೋಸ್ಟ್‌ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದೆ. ಇಷ್ಟು ದಿನ ಸಸ್ಪೆನ್ಸ್ ಆಗಿದ್ದ ಮದುವೆ ವಿಚಾರಕ್ಕೆ ಸ್ಪಂದನಾ ಅವರೇ ಫುಲ್ ಸ್ಟಾಪ್ ಹಾಕಿದ್ದು, ಅಭಿಮಾನಿಗಳೂ ಅವರಿಗೆ ಶುಭಾಶಯಗಳನ್ನು ಕೋರಿದ್ದಾರೆ.


Spread the love

About Laxminews 24x7

Check Also

ನೀರಿನ ಸಂಪಿನಲ್ಲಿ ಬಿದ್ದು 6 ವರ್ಷದ ಬಾಲಕ ಸಾವು

Spread the loveಹುಬ್ಬಳ್ಳಿ: ನೀರಿನ ಸಂಪಿನಲ್ಲಿ ಬಿದ್ದು 6 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯಲ್ಲಿ  ನಡೆದಿದೆ. ಹುಬ್ಬಳ್ಳಿ ಉಣಕಲ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ