Breaking News

ರಾಹುಲ್‌, ಪ್ರಿಯಾಂಕಾ ಗಾಂಧಿ ಮತ್ತೆ ಪೊಲೀಸರ ವಶಕ್ಕೆ; ಬಸ್‌ ಟೈರ್‌ ಪಂಕ್ಚರ್‌ ಮಾಡಿದ ‘ಕೈ’ ಕಾರ್ಯಕರ್ತರು

Spread the love

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌  ರಾಜೀನಾಮೆಗೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆ ವೇಳೆ ರಾಹುಲ್‌ ಗಾಂಧಿ  ಮತ್ತು ಪ್ರಿಯಾಂಕಾ ಗಾಂಧಿ  ಸೇರಿದಂತೆ ಇಂಡಿಯಾ ಒಕ್ಕೂಟದ ಪ್ರಮುಖ ನಾಯಕರನ್ನು 2ನೇ ದಿನವೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸ್ಥಳದಲ್ಲಿದ್ದ ಇತರ ಪ್ರತಿಭಟನಾಕಾರರನ್ನೂ ಪೊಲೀಸರು ವಶಕ್ಕೆ ಪಡೆದಿದ್ದು, ವಾಹನಗಳಲ್ಲಿ ಕರೆದೊಯ್ದಿದ್ದಾರೆ. ಈ ವೇಳೆ, ಕಾಂಗ್ರೆಸ್ ಕಾರ್ಯಕರ್ತರು ಆ ಬಸ್‌ಗಳ ಪೈಕಿ ಒಂದರ ಟೈರ್‌ಗಳನ್ನು ಪಂಕ್ಚರ್ ಮಾಡಿದ್ದಾರೆ ಎಂದು ಪಕ್ಷವು ತಿಳಿಸಿದೆ.

ಚುನಾವಣಾ ಆಯೋಗದ ಪ್ರಧಾನ ಕಚೇರಿಗೆ ತೆರಳಲು ಅವಕಾಶ ನೀಡದಿದ್ದಾಗ ಆಕಾಶವಾಣಿ ಭವನದ ಬಳಿ ಹಠಾತ್ ಧರಣಿ ನಡೆಸಿದ ಗಾಂಧಿ ಕುಟುಂಬದವರನ್ನು ನಿನ್ನೆ ಕೂಡ ವಶಕ್ಕೆ ಪಡೆಯಲಾಗಿತ್ತು.

ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆಗೆ ಪ್ರಯತ್ನಿಸಿದ್ದರಿಂದ ವಶಕ್ಕೆ ಪಡೆಯಲಾಗಿದೆ. ಪ್ರತಿಭಟನೆಗೆ ಪೂರ್ವಾನುಮತಿ ಪಡೆದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿಯ ಮಧ್ಯಭಾಗದಲ್ಲಿರುವ ರೆಸ್ಟೋರೆಂಟ್ ಒಂದರಲ್ಲಿ ಕಾರ್ಯತಂತ್ರದ ಕುರಿತು ಚರ್ಚಿಸಲು ಭೋಜನ ಸಭೆ ನಡೆಸಿದ ನಂತರ ಸಂಸದರು ಜಂತರ್ ಮಂತರ್‌ನತ್ತ ತೆರಳಿದ್ದರು. ಆದರೆ, ಪೊಲೀಸರು ಅವರನ್ನು ತಡೆದರು. ಆರಂಭದಲ್ಲಿ, ರಾಹುಲ್ ಗಾಂಧಿ ಸೇರಿದಂತೆ ನಾಯಕರನ್ನು ಬಸ್ಸಿನಲ್ಲಿ ಕೂರಿಸಲಾಗಿತ್ತು. ಆದರೆ ಪೊಲೀಸರು ಇತರರನ್ನು ವಶಕ್ಕೆ ಪಡೆಯಲು ಮುಂದಾದಾಗ, ‘ಇಂಡಿಯಾ’  ಮೈತ್ರಿಕೂಟದ ನಾಯಕರು ಬಸ್ಸಿನಿಂದ ಕೆಳಗಿಳಿದು ವಾಪಸ್ ಬಂದು ರಸ್ತೆಯಲ್ಲೇ ಕುಳಿತುಕೊಂಡರು.

ಅಲ್ಲಿಂದ ತೆರಳುವಂತೆ ಪೊಲೀಸರು ಮಾಡಿದ ಮನವಿಯನ್ನು ನಿರಾಕರಿಸಿ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ರಸ್ತೆಯಲ್ಲೇ ಕುಳಿತರು. ತಮ್ಮನ್ನು ಅಲ್ಲಿಂದ ಕದಲಿಸಲು ಯಾರಾದರೂ ಧೈರ್ಯವಿದ್ದರೆ ಕದಲಿಸಲಿ ಎಂಬಂತೆ ಪ್ರಿಯಾಂಕಾ ಗಾಂಧಿ ರಸ್ತೆಯಲ್ಲೇ ಮಲಗಿದರು. ನಂತರ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದರು.


Spread the love

About Laxminews 24x7

Check Also

ನಾಳೆಯೇ ಜಿ.ಪಂ., ತಾ.ಪಂ. ಮೀಸಲು ಪ್ರಾಥಮಿಕ ಕರಡು ಅಧಿಸೂಚನೆ: ಈಶ್ವರ ಖಂಡ್ರೆ

Spread the loveಚಿಕ್ಕಮಗಳೂರು: ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿಗಳ ಕ್ಷೇತ್ರ ಪುನರ್ ವಿಂಗಡಣೆ ಹಾಗೂ ಮೀಸಲು ಪೂರ್ಣಗೊಂಡಿದ್ದು, ನಾಳೆಯೊಳಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ