Breaking News

ಮಾರಕ ಪ್ಲೇಗ್‌ಗೆ ರಷ್ಯಾ ಸಂಶೋಧಕಿ ಬಲಿ; 5 ಆಸ್ಪತ್ರೆ ಬಂದ್‌, ನೂರಾರು ಜನರು ಕ್ವಾರಂಟೈನ್‌

Spread the love

ಮಾಸ್ಕೋ: ರಷ್ಯಾದ ಸಂಶೋಧಕಿಯೊಬ್ಬರು  ಮಾರಕ ಪ್ಲೇಗ್‌ಗೆ  ಬಲಿಯಾಗಿದ್ದಾರೆ. ಪ್ರಕರಣ ವರದಿಯಾದ ಬೆನ್ನಲ್ಲೇ ಐದು ಆಸ್ಪತ್ರೆಗಳನ್ನು ಬಂದ್‌ ಮಾಡಲಾಗಿದ್ದು, ನೂರಾರು ಜನರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.

ಸೈಬೀರಿಯನ್ ಪ್ರದೇಶವಾದ ಇರ್ಕುಟ್ಸ್ಕ್‌ನಲ್ಲಿ 28 ವರ್ಷದ ಪ್ರಯೋಗಾಲಯ ತಂತ್ರಜ್ಞೆ ದಾರಿಯಾ ಶಿಪಿಲೋವಾ ಅವರು ಪ್ಲೇಗ್‌ನಿಂದ ಮೃತಪಟ್ಟಿದ್ದಾರೆ. ಶೆಲೆಖೋವ್‌ನಲ್ಲಿರುವ ‘ಆಂಟಿ-ಪ್ಲೇಗ್ ರಿಸರ್ಚ್ ಇನ್‌ಸ್ಟಿಟ್ಯೂಟ್’ನಲ್ಲಿ ಪ್ರಕರಣ ವರದಿಯಾಗಿದೆ.

ಪರೀಕ್ಷಾ ಕೊಳವೆಯಿಂದ ಒಡೆದ ಪರಿಣಾಮ ನ್ಯುಮೋನಿಕ್‌ ಪ್ಲೇಗ್‌ಗೆ ಸಂಶೋಧಕಿ ತುತ್ತಾಗಿ ಮೃತಪಟ್ಟಿದ್ದಾರೆ. ಇದು ಅತ್ಯಂತ ವೇಗವಾಗಿ ಹರಡುವ ರೋಗವಾಗಿದ್ದು, ಆರಂಭಿಕ ಹಂತದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಮಾರಣಾಂತಿಕವಾಗಬಲ್ಲದು.

ಪರೀಕ್ಷೆಗಾಗಿ ಮಾದರಿಗಳನ್ನು ಸಂಗ್ರಹಿಸುವಾಗ ಜೀವಂತ ಬ್ಯಾಕ್ಟೀರಿಯಾವನ್ನು ಹೊಂದಿದ್ದ ಪರೀಕ್ಷಾ ಕೊಳವೆ  ಆಕಸ್ಮಿಕವಾಗಿ ಒಡೆದಿತ್ತು. ಶಿಪಿಲೋವಾ ಅವರನ್ನು ಸೆಪ್ಟೆಂಬರ್ 29 ರಂದು ತೀವ್ರ ನ್ಯುಮೋನಿಯಾ ಲಕ್ಷಣಗಳೊಂದಿಗೆ ಶೆಲೆಖೋವ್‌ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅ.1 ರಂದು ಮೃತಪಡುವ ಮೊದಲು ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು.

ಸಂಶೋಧಕಿಯ ಸಂಪರ್ಕಕ್ಕೆ ಬಂದಿರಬಹುದಾದ 200ಕ್ಕೂ ಹೆಚ್ಚು ಜನರನ್ನು ಈಗ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಇರ್ಕುಟ್ಸ್ಕ್‌ನಲ್ಲಿ ಸಾರ್ವಜನಿಕ ಕಾರ್ಯಕ್ರಮಗಳನ್ನು ಕೂಡ ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ.


Spread the love

About Laxminews 24x7

Check Also

ಡಿಸೆಂಬರ್ – ಜನವರಿಗೆ ಮೊದಲ ಹಂತದಲ್ಲಿ 5 ಲಕ್ಷ ಸೈಟು ಹಂಚಿಕೆ: ಡಿಸಿಎಂ ಪರಮೇಶ್ವರ್‌

Spread the loveಬೆಂಗಳೂರು: ರಾಜ್ಯದ ಜನರಿಗೆ ವಸತಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಸರ್ಕಾರ ರೂಪಿಸಿರುವ ಯೋಜನೆಯಡಿ ಡಿಸೆಂಬರ್‌–ಜನವರಿಯಲ್ಲಿ ಮೊದಲ ಹಂತದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ