Breaking News

ಸೇವಾದಳ ಕಾರ್ಯಕರ್ತರ ಯಡವಟ್ಟು – ಕಾಂಗ್ರೆಸ್ ಬಾವುಟ ಉಲ್ಟಾ ಹಿಡಿದು ಪಥಸಂಚಲನ

Spread the love

ಮೈಸೂರು: ಕಾಂಗ್ರೆಸ್  ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸೇವಾದಳದ ಕಾರ್ಯಕರ್ತರು ಬಾವುಟವನ್ನು ಉಲ್ಟಾ ಹಿಡಿದು ಪಥಸಂಚಲನ ನಡೆಸಿದ ಘಟನೆ ಮೈಸೂರಿನಲ್ಲಿ  ನಡೆದಿದೆ.

ನೂತನ ಜಿಲ್ಲಾಧ್ಯಕ್ಷ ಬೀರಿಹುಂಡಿ ಬಸವಣ್ಣ ಅವರಿಗೆ ಬಾವುಟ ಹಸ್ತಾಂತರಿಸುವ ವೇಳೆ ಈ ಯಡವಟ್ಟು ನಡೆದಿದೆ. ನಿರ್ಗಮಿತ ಜಿಲ್ಲಾಧ್ಯಕ್ಷ ಬಿ.ಜೆ. ವಿಜಯಕುಮಾರ್ ಅವರು ಬೀರಿಹುಂಡಿ ಬಸವಣ್ಣ ಅವರಿಗೆ ಕಾಂಗ್ರೆಸ್ ಬಾವುಟ  ನೀಡುವ ಮೂಲಕ ಅಧಿಕಾರ ಹಸ್ತಾಂತರ ಮಾಡುವ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಬಾವುಟ ಜೋಡಣೆಯಲ್ಲಿ ತಪ್ಪಾಗಿದೆ.

ಕೇಸರಿ, ಬಿಳಿ ಹಾಗೂ ಹಸಿರು ಬಣ್ಣ ಕ್ರಮದಲ್ಲಿರಬೇಕಿದ್ದ ಕಾಂಗ್ರೆಸ್ ಬಾವುಟವನ್ನು ಸೇವಾದಳದ ಕಾರ್ಯಕರ್ತರು ಹಸಿರು, ಬಿಳಿ ಹಾಗೂ ಕೇಸರಿ ಬಣ್ಣಗಳ ಕ್ರಮದಲ್ಲಿ ಉಲ್ಟಾ ಕಟ್ಟಿದ್ದರು. ಬಳಿಕ ಯಡವಟ್ಟು ಗಮನಕ್ಕೆ ಬಂದಿದ್ದು, ಸೇವಾದಳದ ಕಾರ್ಯಕರ್ತರು ಬಾವುಟವನ್ನು ಸರಿಪಡಿಸಿದ್ದಾರೆ. ಸಿದ್ದರಾಮಯ್ಯ ಅವರ ಸಮ್ಮುಖದಲ್ಲೇ ಬಾವುಟವನ್ನು ಸರಿಪಡಿಸಿ, ಮತ್ತೊಮ್ಮೆ ನೂತನ ಜಿಲ್ಲಾಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು.


Spread the love

About Laxminews 24x7

Check Also

ಡಿಸೆಂಬರ್ – ಜನವರಿಗೆ ಮೊದಲ ಹಂತದಲ್ಲಿ 5 ಲಕ್ಷ ಸೈಟು ಹಂಚಿಕೆ: ಡಿಸಿಎಂ ಪರಮೇಶ್ವರ್‌

Spread the loveಬೆಂಗಳೂರು: ರಾಜ್ಯದ ಜನರಿಗೆ ವಸತಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಸರ್ಕಾರ ರೂಪಿಸಿರುವ ಯೋಜನೆಯಡಿ ಡಿಸೆಂಬರ್‌–ಜನವರಿಯಲ್ಲಿ ಮೊದಲ ಹಂತದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ