ತುಮಕೂರು: ಸಿಎಂ ಡಿ.ಕೆ ಶಿವಕುಮಾರ್ ಅವರ ವಕ್ತಿತ್ವ ವಜ್ರಕ್ಕಿಂತ ಕಠಿಣವಾಗಿದ್ದರೂ, ಹೃದಯದಿಂದ ಮೃದು ಸ್ವಭಾವದವರು ಎಂದು ನೂಣನವಿನಕೆರೆಯ ಶಿವಯೋಗಿಶ್ವರ್ ಶ್ರೀಗಳು ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್ ಅವರು ಮಠದ ಆರ್ಶಿವಾದದಿಂದ ಬೆಳೆದಿದ್ದಾರೆ. ತಮಗೆ ಕಷ್ಟಗಳು ಬಂದ ಸಮಯದಲ್ಲೂ ಮಠದ ಆರ್ಶಿವಾದ ಪಡೆದಿದ್ದಾರೆ. ಅವರು ಮಠದ ಮಗನಾಗಿ ಬಂದಿದ್ದಾರೆ ಎಂದರು.
ಪ್ರಜೆಗಳನ್ನು, ಸೈನಿಕರನ್ನು ಒಳ್ಳೆಯ ಉದ್ದೇಶಕ್ಕೆ ಕಂಡ್ಯೂಯುತ್ತಿದ್ದಾರೆ. ತಮ್ಮ ಹಿಂದಿನ ವ್ಯಕ್ತಿತ್ವದ ಬದಲಿಸಿಕೊಂಡು ಸರ್ವ ಜನರ ಆತ್ಮೀಯ ನಾಯಕರಾಗಿ ಮಿಂಚುತ್ತಿದ್ದಾರೆ. ತಾಯಿ ವಾತ್ಸಲ್ಯದಂತೆ ರಾಜ್ಯದ ಎಲ್ಲಾ ಜನರನ್ನು ಪ್ರೀತಿಸುತ್ತಿದ್ದಾರೆ. ಅವರು ಇನ್ನಷ್ಟು ಉನ್ನತ ಸ್ಥಾನಕ್ಕೇರುತ್ತಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಮಠ ಎಂದಿಗೂ ರಾಜಕೀಯವಾಗಿ ಯಾರಿಗೂ ಸಲಹೆ ನೀಡಿಲ್ಲ. ರಾಜಕೀಯದಲ್ಲಿ ಧರ್ಮ ಭಾಗಿಯಾಗುದಿಲ್ಲ. ನಾವು ಮಾನವ ಸೇವೆ ಮಾಡುವ ಸಲಹೆ ಮಾತ್ರ ನೀಡುತ್ತೇವೆ. ಡಿಕೆಶಿ ಸರಳ ಸಜ್ಜಿನಿಕೆ ಮಾತೃ ಹೃದಯಿ ವ್ಯಕ್ತಿಯಾಗಿದ್ದಾರೆ ಎಂದು ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.
Laxmi News 24×7