Breaking News

ಗವಿಸಿದ್ದೇಶ್ವರ ಶ್ರೀಗಳ ದರ್ಶನ ಪಡೆದ ಬಸವರಾಜ್ ರಾಯರೆಡ್ಡಿ

Spread the love

ಕೊಪ್ಪಳ: ಗವಿಸಿದ್ದೇಶ್ವರ ಸ್ವಾಮೀಜಿಗಳು ಈ ಬಾರಿ ಮೈಸೂರು ದಸರಾ  ಉದ್ಘಾಟಿಸುತ್ತಿರುವ ಹಿನ್ನೆಲೆ ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಅವರು ಗವಿಮಠಕ್ಕೆ ಭೇಟಿ ನೀಡಿದ್ದಾರೆ.

ಗವಿಸಿದ್ದೇಶ್ವರ ಶ್ರೀಗಳ ಮೌನವೃತದ ನಡುವೆಯೂ ಸಚಿವರು ಕೊಪ್ಪಳ ಗವಿಮಠಕ್ಕೆ ಭೇಟಿ ನೀಡಿ, ಶ್ರೀಗಳ ದರ್ಶನ ಪಡೆದಿದ್ದಾರೆ.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗವಿಸಿದ್ದೇಶ್ವರ ಸ್ವಾಮೀಜಿಗಳು ದಸರಾ ಉದ್ಘಾಟಿಸುತ್ತಿರುವುದು ಹೆಮ್ಮೆಯ ಸಂಗತಿ. ಮುಖ್ಯಮಂತ್ರಿಗಳು ಶ್ರೀಗಳ ಜೊತೆ ಮಾತನಾಡಿ, ಈ ವರ್ಷದ ದಸರಾ ಉದ್ಘಾಟನೆ ಕಾರ್ಯಕ್ರಮಕ್ಕೆ ಗವಿಮಠದ ಪೂಜ್ಯರನ್ನ ಆಯ್ಕೆ ಮಾಡಿದ್ದಾರೆ. ಅಧಿಕೃತವಾಗಿ ಸಂಬಂಧಪಟ್ಟ ಸಚಿವರು ಅಧಿಕಾರಿಗಳು ಆಹ್ವಾನ ಕೊಡುತ್ತಾರೆ ಎಂದು ಹೇಳಿದ್ದಾರೆ.

ಇವತ್ತು ನಾನು ಶ್ರೀಗಳನ್ನ ಭೇಟಿ ಮಾಡಿ ಗೌರವಿಸಿ, ಆಹ್ವಾನ ಬಂದಿರೋದು ಸಂತೋಷದ ಬಗ್ಗೆ ಮಾತಾಡಿದೆ. ಆಹ್ವಾನದ ಬಗ್ಗೆ ಶ್ರೀಗಳು ಮೊದಲು ಒಪ್ಪಿರಲಿಲ್ಲ, ನಂತರ ಒಪ್ಪಿಕೊಂಡಿದ್ದಾರೆ. ಇದು ಒಂದು ನಮ್ಮ ಭಾಗ ಹಾಗೂ ರಾಜ್ಯಕ್ಕೆ ಹೆಮ್ಮೆಯ ವಿಚಾರ. ನಮ್ಮ ಜಿಲ್ಲೆಗೆ ಇದು ಒಂದು ಹೆಮ್ಮೆ ಎಂದು ಅಭಿನಂದಿಸಲು ಇವತ್ತು ಮಠಕ್ಕೆ ಬಂದಿದಿನಿ. ಗವಿಸಿದ್ದೇಶ್ವರ ಶ್ರೀಗಳು ಗೌರವಸ್ಥರು, ಸಮಾಜದ ಬಗ್ಗೆ ಕಳಕಳಿ ಇರುವಂತಹವರು ಎಂದು ತಿಳಿಸಿದ್ದಾರೆ.


Spread the love

About Laxminews 24x7

Check Also

ಬರಪೀಡಿತ ಎಂದು ಘೋಷಿಸದ್ದಕ್ಕೆ ರಾಜೀನಾಮೆ ಸಲ್ಲಿಸಿದೆ – ಕ್ಷೇತ್ರದ ಜನರಿಗಾಗಿ ರಾಜಕೀಯ ನಿವೃತ್ತಿಗೂ ಸಿದ್ಧ: ಯಶವಂತರಾಯಗೌಡ

Spread the loveವಿಜಂಯಪುರ: 188 ತಾಲೂಕುಗಳು ಘೋಷಣೆ ಆದಾಗಲೂ, ವಿಜಯಪುರ ಜಿಲ್ಲೆಯ 13 ತಾಲೂಕುಗಳ ಪೈಕಿ 11 ಘೋಷಣೆ ಆದರೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ