Breaking News

ಸರ್ಕಾರದಿಂದ ಬಾರದ ಕೋಟ್ಯಂತರ ರೂಪಾಯಿ ಅನುದಾನ – ಪತ್ರ ಬರೆದು ಕೆಆರ್‌ಐಡಿಎಲ್ ಎಇಇ ನಾಪತ್ತೆ!

Spread the love

ಗದಗ: ರಾಜ್ಯ ಸರ್ಕಾರದ ಅನುದಾನ ಬಾರದಕ್ಕೆ ಪತ್ರ ಬರೆದು KRIDL ಎಇಇ (ಸಹಾಯಕ ಕಾರ್ಯಪಾಲಕ ಎಂಜಿನಿಯರ್) ಅಧಿಕಾರಿ ನಾಪತ್ತೆಯಾದ ಘಟನೆ ಗದಗನಲ್ಲಿ ನಡೆದಿದೆ.

ರಾಜ್ಯ ಸರ್ಕಾರದಿಂದ ಅನುದಾನ  ಬಿಡುಗಡೆಯಾಗದೇ ಉಂಟಾದ ಆರ್ಥಿಕ ಸಂಕಷ್ಟವೇ ಅಧಿಕಾರಿಯ ನಾಪತ್ತೆಗೆ ಕಾರಣ ಎನ್ನುವ ಪ್ರಶ್ನೆ ಇದೀಗ ಕಾಡುತ್ತಿದೆ.

ಬೆಂಗಳೂರಿನ  ಕೆಆರ್‌ಐಡಿಎಲ್‌ನ ಇಇ ಅವರಿಗೆ ಪತ್ರ ಬರೆದು ಫರ್ವೀಜ್ ನಾಪತ್ತೆಯಾಗಿದ್ದಾರೆ. ಪತ್ರದಲ್ಲಿ ಅನುದಾನ ಬಿಡುಗಡೆಯಾಗದಿರುವ ಕುರಿತು ಉಲ್ಲೇಖಿಸಲಾಗಿದೆ. ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆಯಾಗದ ಕಾರಣ ತಾವು ತೀವ್ರವಾಗಿ ನೊಂದಿರುವುದಾಗಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅನುದಾನ ಇಲ್ಲದೇ ಪ್ರತಿದಿನ ಕಿರುಕುಳ
ಅನುದಾನ ಬಿಡುಗಡೆಯಾಗದ ಹಿನ್ನೆಲೆ ಮನೆಯ ಮುಂದೆ ಸಬ್‌-ಗುತ್ತಿಗೆದಾರರು ಬಂದು ಗಲಾಟೆ ಮಾಡುತ್ತಿದ್ದರು. ಸರ್ಕಾರದಿಂದ ಅನುದಾನ ಬಿಡುಗಡೆಯಾಗದ ಕಾರಣ ಪ್ರತಿದಿನ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದರು. ಇದರಿಂದ ತಮ್ಮ ಮಾನಸಿಕ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರಿದೆ ಎಂದು ಪತ್ರದಲ್ಲಿ ಫರ್ವೀಜ್ ಉಲ್ಲೇಖಿಸಿದ್ದಾರೆ.

ನನ್ನ ಜೀವನವನ್ನೇ ಕೊನೆಗಾಣಿಸುತ್ತಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ. ಪರಿಸ್ಥಿತಿಯನ್ನ ನಿಭಾಯಿಸುವಲ್ಲಿ ನಾನು ಸೋತಿದ್ದೇನೆ. ಸದರಿ ಉಪವಿಭಾಗಕ್ಕೆ ಅನುದಾನ ನೀಡಿ ಸಮಸ್ಯೆ ಬಗೆಹರಿಸಿ. ಬೇರೆ ಎಇಇಯನ್ನ ನಿಯೋಜಿಸಿ. ದಯವಿಟ್ಟು ನನ್ನ ಕುಟುಂಬದವರಿಗೆ ಕಿರುಕುಳ ನೀಡಬೇಡಿ ಎಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಏನಾಗಿತ್ತು?
2026ರ ಸೆಪ್ಟೆಂಬರ್ 12ರಂದು ಇಇ ಅವರಿಗೆ ಪತ್ರ ಬರೆದಿದ್ದ ಫರ್ವೀಜ್, ಮರುದಿನ ಅಂದರೆ ಸೆಪ್ಟೆಂಬರ್ 13ರಂದು ಬೆಂಗಳೂರಿನಲ್ಲಿ ಸಭೆ ಇದೆ ಎಂದು ಹೇಳಿ ತೆರಳಿದ್ದರು. ಬಳಿಕ ಸೆಪ್ಟೆಂಬರ್ 16ರಂದು ಅವರು ನಾಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ. ಪತ್ನಿ, ಓರ್ವ ಮಗಳು, ತಂದೆ-ತಾಯಿ ಹಾಗೂ ಸಹೋದರರನ್ನ ಬಿಟ್ಟು ಫರ್ವೀಜ್ ನಾಪತ್ತೆಯಾಗಿದ್ದಾರೆ. ಎಇಇ ನಾಪತ್ತೆಯಾಗಿರುವುದರಿಂದ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಅವರನ್ನು ಆದಷ್ಟು ಬೇಗ ಪತ್ತೆಹಚ್ಚುವಂತೆ ಪೊಲೀಸ್ ಇಲಾಖೆಗೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.

ಈ ಕುರಿತು ಗದಗದ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಫರ್ವೀಜ್ ಅವರನ್ನು ಪತ್ತೆಹಚ್ಚಲು ಪೊಲೀಸ್ ಇಲಾಖೆ ತಂಡಗಳನ್ನು ರಚಿಸಿರುವುದಾಗಿ ತಿಳಿದುಬಂದಿದೆ.


Spread the love

About Laxminews 24x7

Check Also

ಒಂದು ತಿಂಗಳಿಂದ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ

Spread the loveಮಂಡ್ಯ: ಜಿಲ್ಲೆಯ ಮದ್ದೂರು ತಾಲ್ಲೂಕಿನ ಹೆಚ್.ಹೊಸಹಳ್ಳಿ ಗ್ರಾಮದಲ್ಲಿ ಕಳೆದ ಒಂದು ತಿಂಗಳಿಂದ ಜನಸಾಮಾನ್ಯರು ಹಾಗೂ ರೈತರ ನಿದ್ದೆಗೆಡಿಸಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ