Breaking News

ಆಂಟಿ ಖಾಸಗಿ ಫೋಟೋ ಇಟ್ಕೊಂಡು 9 ಲಕ್ಷ ಸುಲಿಗೆ ಆರೋಪ – ಟ್ಯಾಟೂ ಅರ್ಜುನ್‌ ವಿರುದ್ಧ FIR

Spread the love

ಬೆಂಗಳೂರು: ಟ್ಯಾಟೂ ಆರ್ಟಿಸ್ಟ್  ಕಮ್ ನಟ ಅರ್ಜುನ್‌ ವಿರುದ್ಧ ಮಹಿಳೆ ದೂರು ನೀಡಿದ್ದು, ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುವ ಆರೋಪದಡಿ ಎಫ್‌ಐಆರ್‌ ದಾಖಲಾಗಿದೆ.

ಮಹಿಳೆಯ ಖಾಸಗಿ ಫೋಟೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್‌ ಮಾಡಿ ಹಣ ಪಡೆದಿದ್ದಾನೆ ಎಂದು ಟ್ಯಾಟೂ ಅರ್ಟಿಸ್ಟ್ ಅರ್ಜುನ್‌ ವಿರುದ್ಧ ಮಹಿಳೆ ಆರೋಪ ಮಾಡಿದ್ದಾಳೆ.

ಮಹಿಳೆ 2 ವರ್ಷಗಳ ಹಿಂದೆ ಟ್ಯಾಟೂ ಹಾಕಿಸಿಕೊಳ್ಳಲು ಹೋದಾಗ ಅರ್ಜುನ್ ಪರಿಚಯವಾಗಿದ್ದಾನೆ. ನಂತರ ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿದೆ. ಸಂತ್ರಸ್ತೆಯ ಗಂಡ ಮರಣ ಹೊಂದಿರುವ ವಿಚಾರ ತಿಳಿದು ಬಾಳು ಕೊಡ್ತೇನೆ ಎಂದಿದ್ದ ಟ್ಯಾಟೂ ಆರ್ಟಿಸ್ಟ್‌ ಆಕೆಯೊಂದಿಗೆ ಹತ್ತಿರವಾಗಿದ್ದಾನೆ.

ಪ್ರೀತಿ ಹೆಸರಿನಲ್ಲಿ ಆಕೆಯ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. 2024ನೇ ನವಂಬರ್ ತಿಂಗಳಿನಿಂದ ಹಣ ಕೊಡುವಂತೆ ಮಹಿಳೆಗೆ ಕಿರುಕುಳ ನೀಡುತ್ತಿದ್ದಾನೆ. ಹಣವಿಲ್ಲವೆಂದಾಗ ಸಂತ್ರಸ್ತೆ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಹರಿ ಬಿಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ.

ಹಂತ-ಹಂತವಾಗಿ ಮಹಿಳೆಯಿಂದ 9 ಲಕ್ಷ ಹಣ ಪಡೆದುಕೊಂಡಿದ್ದ ಅರ್ಜುನ್, ಮತ್ತೆ ಹಣಕ್ಕಾಗಿ ಬೇಡಿಕೆ ಇಟ್ಟಾಗ ಸಂತ್ರಸ್ತೆ ಹಣ ಕೊಡಲು ನಿರಾಕರಿಸಿದ್ದಾಳೆ. ಮಹಿಳೆ ಆತನ ಕರೆ ಸ್ವೀಕರಿಸದಿದ್ದಾಗ ಸೆ.2ರಂದು ಆಕೆಯ ಮನೆಗೆ ಬಂದಿದ್ದಾನೆ. ನನ್ನ ಫೋನ್‌ ಏಕೆ ಸ್ವೀಕರಿಸುತ್ತಿಲ್ಲ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ನಿನಗೆ ಬೇರೆಯವರ ಜೊತೆ ಸಂಬಂಧವಿದೆ ಎಂದು ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ.

ಕೆಲ ದಿನಗಳ ಹಿಂದೆಯಷ್ಟೇ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುವುದಾಗಿ ಟ್ಯಾಟೂ ಆರ್ಟಿಸ್ಟ್‌ ಕೇಸ್‌ ದಾಖಲಿಸಿದ್ದ. ಆದರೆ, ಈಗ ಅರ್ಜುನ್‌ ವಿರುದ್ಧವೇ ಮಹಿಳೆ ದೂರು ನೀಡಿದ್ದಾಳೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಹಾಗೂ ಪ್ರತಿದೂರು ದಾಖಲಾಗಿದೆ.


Spread the love

About Laxminews 24x7

Check Also

2028ಕ್ಕೂ ಡಿಕೆಶಿ ಸಿಎಂ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ: ಸತೀಶ್ ಜಾರಕಿಹೊಳಿ

Spread the loveಮೈಸೂರು: 2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ ಎಂದು ಸತೀಶ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ