Breaking News

77,360 ಬಾಕಿ ಕಟ್ಟದ್ದಕ್ಕೆ ಕರೆಂಟ್‌ ಕಟ್‌ – ಹೆಸ್ಕಾಂ ಸಿಬ್ಬಂದಿ ಮೇಲೆ ಚನ್ನರಾಜ್‌ ಹಟ್ಟಿಹೊಳಿ ಹಲ್ಲೆ ಆರೋಪ

Spread the love

ಬೆಳಗಾವಿ: 3 ತಿಂಗಳ 77 ಸಾವಿರ ರೂ. ಕರೆಂಟ್ ಬಿಲ್ ಬಾಕಿಯಿದ್ದಿದ್ದಕ್ಕೆ ವಿದ್ಯುತ್ ಕಟ್ ಮಾಡಿದ ಹೆಸ್ಕಾಂ ಸಿಬ್ಬಂದಿ ಮೇಲೆ ಲಕ್ಷ್ಮಿ ಹೆಬ್ಬಾಳ್ಕರ್‌ ಸಹೋದರ, ಎಂಎಲ್‌ಸಿ ಚನ್ನರಾಜ್ ಹಟ್ಟಿಹೊಳಿ  ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

ಬೆಳಗಾವಿ (Belagavi) ತಾಲೂಕಿನ ತಾರಿಹಾಳ ಗ್ರಾಮದಲ್ಲಿರುವ ಚನ್ನರಾಜ್ ಆಪ್ತ ಪ್ರಮೋದ್ ಜಾಧವ್ ಅವರ ಲಕ್ಷ್ಮಿ ಸ್ಟೋನ್ ಕ್ರಷರ್‌ನ ಮೂರು ತಿಂಗಳ 77,360 ರೂ. ಕರೆಂಟ್ ಬಿಲ್ ಬಾಕಿ ಇತ್ತು. ಹಣ ಕಟ್ಟದ ಹಿನ್ನೆಲೆ ಗುರುವಾರ (ಸೆ.24) ಹೆಸ್ಕಾಂ  ಸಿಬ್ಬಂದಿ ವಿದ್ಯುತ್ ಸಂಪರ್ಕ ಕಟ್ ಮಾಡಿದ್ದರು.

ಇಂದು (ಸೆ.25) ಎಂಎಲ್‌ಸಿ ಚನ್ನರಾಜ್ ಹಟ್ಟಿಹೊಳಿ ಹೆಸ್ಕಾಂನ ಎಇಇ ದೀಪಕ್ ಡಿ ಮತ್ತು ಸೆಕ್ಷನ್ ಆಫೀಸರ್ ರಾಜು ಚವ್ಹಾಣ್ ಅವರನ್ನು ತಮ್ಮ ಮನೆಗೆ ಕರೆಯಿಸಿ, ಯಾಕೆ ವಿದ್ಯುತ್ ಕಟ್ ಮಾಡಿದೀರಿ ಎಂದು ಎದೆ ಮೇಲಿನ ಶರ್ಟ್ ಹಿಡಿದು ಅವಾಚ್ಯವಾಗಿ ನಿಂದಿಸಿ, ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.

ಹಲ್ಲೆ ನಡೆಸಿದ್ದಕ್ಕಾಗಿ ಹೆಸ್ಕಾಂ ಸಿಬ್ಬಂದಿ ಎಪಿಎಂಸಿ ಪೊಲೀಸ್ ಠಾಣೆಗೆ ಬಂದು, ಎಂಎಲ್‌ಸಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆಗ್ರಹಿಸಿ ಧರಣಿ ನಡೆಸಿದ್ದಾರೆ. ಕೊನೆಗೆ ಪೊಲೀಸರು ಎಫ್‌ಐಆರ್ ದಾಖಲಿಸುವ ಭರವಸೆ ನೀಡಿದ್ದಾರೆ. ಸದ್ಯ ಎಪಿಎಂಸಿ ಪೊಲೀಸ್ ಠಾಣೆಗೆ ಡಿಸಿಪಿ ಭೇಟಿ ನೀಡಿದ್ದಾರೆ.


Spread the love

About Laxminews 24x7

Check Also

ಚುನಾವಣಾ ಆಯೋಗದ ಪರ ಸಮರ್ಥನೆ – ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ

Spread the loveಬೆಂಗಳೂರು: ಕೇಂದ್ರ ಚುನಾವಣಾ ಆಯೋಗದ ಆಯುಕ್ತರ ನಡುವೆ ಭಿನ್ನಾಭಿಪ್ರಾಯವಿರುವ ಕಾರಣ ಚುನಾವಣಾ ಆಯೋಗವನ್ನು ಸಮರ್ಥನೆ ಮಾಡಿಕೊಳ್ತಿರುವ ಬಿಜೆಪಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ