Breaking News

ಹರಿಪ್ರಸಾದ್‌ಗೆ ಪ್ರಚಾರದ ಹುಚ್ಚು ಹಿಡಿದಿದೆ, ಚುನಾವಣಾ ಪ್ರಕ್ರಿಯೆ ಜ್ಞಾನವಿಲ್ಲ: ಅಭಯ್ ಪಾಟೀಲ್

Spread the love

ಬೆಳಗಾವಿ: ಬಿ.ಕೆ. ಹರಿಪ್ರಸಾದ್ ಅವರಿಗೆ ಚುನಾವಣಾ ಪ್ರಕ್ರಿಯೆ ಬಗ್ಗೆ ಕನಿಷ್ಠ ಜ್ಞಾನವಿಲ್ಲ. ಮೊದಲು ಅವರು ನನ್ನ ಪತ್ರವನ್ನು ಸರಿಯಾಗಿ ಕನ್ನಡದಲ್ಲಿ ಓದುವುದನ್ನು ಕಲಿಯಲಿ. ಅವರಿಗೆ ಶಾಲೆ ಕಲಿಸಿಲ್ಲವೇ ಅಥವಾ ಪ್ರಚಾರದ ಹುಚ್ಚಿನಿಂದ ಹೀಗೆ ಮಾತನಾಡುತ್ತಿದ್ದಾರಾ ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ್ ಪಾಟೀಲ್ ಆಕ್ರೋಶ ಹೊರಹಾಕಿದ್ದಾರೆ.

ಅಭಯ್ ಪಾಟೀಲ್ ತನ್ನ ಕ್ಷೇತ್ರದಲ್ಲಿ ಸುಮಾರು 2,500 ಮತಗಳನ್ನು ಡಿಲೀಟ್ ಮಾಡಲು ಪತ್ರ ಬರೆದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್‌( ಆರೋಪಕ್ಕೆ ಇಂದು ಸುದ್ದಿಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡಿದರು.

ಚುನಾವಣಾಧಿಕಾರಿಯಾಗಿರುವ ಮಹಾನಗರ ಪಾಲಿಕೆ ಆಯುಕ್ತರಿಗೆ ಬರೆದ ಪತ್ರದ ಬಗ್ಗೆ ಸ್ಪಷ್ಟನೆ ನೀಡಿದ ಅವರು, ನಾನು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಬಿಎಲ್‌ಒ-1 (BLO-1) ಆಗಿ ಪತ್ರ ಬರೆದಿದ್ದೇನೆ. ಕ್ಷೇತ್ರದಲ್ಲಿ ನಕಲಿ ಮತದಾರರು ಹಾಗೂ ಮೃತಪಟ್ಟವರ ಹೆಸರುಗಳು ಪಟ್ಟಿಯಲ್ಲಿವೆ. ಇವುಗಳನ್ನು ರದ್ದುಪಡಿಸಲು ಬಿಎಲ್‌ಒ-2 ಸಲ್ಲಿಸಿರುವ ಮನವಿಗಳನ್ನು ನಿಯಮಾನುಸಾರ ಪರಿಶೀಲಿಸಿ, ನಕಲಿ ದಾಖಲೆಗಳಿದ್ದರೆ ಮಾತ್ರ ರದ್ದುಪಡಿಸುವಂತೆ ಮನವಿ ಮಾಡಿದ್ದೇನೆ. ಚುನಾವಣಾ ಆಯೋಗದ ನಿಯಮಗಳಿಗೆ ಬದ್ಧವಾಗಿಯೇ ನಾವು ಕೆಲಸ ಮಾಡುತ್ತಿದ್ದೇವೆ ಎಂದರು.

ನಮಗೆ ಕಾನೂನು ಬೆದರಿಕೆ ಹಾಕಬೇಡಿ, ನಮಗೂ ಕಾನೂನು ಹೋರಾಟ ತಿಳಿದಿದೆ ಎಂದ ಅಭಯ್ ಪಾಟೀಲ್, ಇದೇ ಸೆಪ್ಟೆಂಬರ್ 29 ರಂದು ದೆಹಲಿಗೆ ತೆರಳಿ ಕೇಂದ್ರ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ನೀಡುವುದಾಗಿ ತಿಳಿಸಿದರು. ಈ ದೂರನ್ನು ಶಾಸಕನಾಗಿ ಅಲ್ಲದೆ, ಬಿಎಲ್‌ಒ-1 ಆಗಿ ಕೇವಲ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಅಕ್ರಮಗಳ ಬಗ್ಗೆ ಮಾತ್ರ ನೀಡಲಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಇಷ್ಟೇ ಅಲ್ಲದೆ ಕಾಂಗ್ರೆಸ್‌ನಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಬಿ.ಕೆ. ಹರಿಪ್ರಸಾದ್ ನಡುವೆ ಪ್ರಚಾರಕ್ಕಾಗಿ ಪೈಪೋಟಿ ನಡೆಯುತ್ತಿದೆ ಎಂದು ವ್ಯಂಗ್ಯವಾಡಿದರು.


Spread the love

About Laxminews 24x7

Check Also

ಚುನಾವಣಾ ಆಯೋಗದ ಪರ ಸಮರ್ಥನೆ – ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ

Spread the loveಬೆಂಗಳೂರು: ಕೇಂದ್ರ ಚುನಾವಣಾ ಆಯೋಗದ ಆಯುಕ್ತರ ನಡುವೆ ಭಿನ್ನಾಭಿಪ್ರಾಯವಿರುವ ಕಾರಣ ಚುನಾವಣಾ ಆಯೋಗವನ್ನು ಸಮರ್ಥನೆ ಮಾಡಿಕೊಳ್ತಿರುವ ಬಿಜೆಪಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ