ಬಾಗಲಕೋಟೆ: ಬಸವೇಶ್ವರ ಕಲಾ ಮಹಾವಿದ್ಯಾಲಯದ ಭಾಷಾ ಹಾಗೂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗಗಳ ನೂತನ ಗಣಕಯಂತ್ರ ಪ್ರಯೋಗಾಲಯವನ್ನು ಬಿವಿವಿ ಸಂಘದ ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷರಾದ ಗುರುಬಸವ ಸೂಳಿಭಾವಿ ಉದ್ಘಾಟಿಸಿದರು.

ರಿಬನ್ ಕತ್ತರಿಸುವ ಮೂಲಕ ಪ್ರಯೋಗಾಲಯವನ್ನು ಲೋಕಾರ್ಪಣೆ ಮಾಡಿ ಬಳಿಕ ಬಿಳೂರು ಗುರುಬಸವ ಮಹಾಸ್ವಾಮೀಜಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಪ್ರಯೋಗಾಲಯದಲ್ಲಿ 10 ಗಣಕಯಂತ್ರಗಳನ್ನು ಅಳವಡಿಸಲಾಗಿದ್ದು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿದ್ಯಾರ್ಥಿಗಳಿಗೆ ಡಿಜಿಟಲ್ ಮಾಧ್ಯಮ, ವಿನ್ಯಾಸ, ಸಂಪಾದನೆ ಹಾಗೂ ಇತರೆ ತಾಂತ್ರಿಕ ಕೌಶಲಗಳನ್ನು ಬೆಳೆಸಿಕೊಳ್ಳಲು ಹಾಗೂ ಎಡಿಟ್, ಟೈಪಿಂಗ್, ವಿಡಿಯೋ ಎಡಿಟಿಂಗ್, ಫೋಟೋಶಾಪ್ ಮತ್ತು ಇನ್ ಡಿಸೈನ ಸೇರಿದಂತೆ ಪತ್ರಿಕೋದ್ಯಮಕ್ಕೆ ಅಗತ್ಯವಿರುವ ತಂತ್ರಾಂಶಗಳನ್ನು ಕಲಿಯಲು ಇದು ಸಹಕಾರಿಯಾಗಲಿದೆ. ಗ್ರಾಮೀಣ ವಿದ್ಯಾರ್ಥಿಗಳ ಆಂಗ್ಲಾ ಭಾಷಾ ಸುಧಾರಣೆಗೂ ಪ್ರಯೋಗಾಲಯ ಪೂರಕವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಬಿವಿವಿ ಸಂಘದ ಕಾಲೇಜುಗಳ ಆಡಳಿತ ಮಂಡಳಿಯ ಪದನಿಮಿತ್ಯ ಕಾರ್ಯದರ್ಶಿ ಡಾ.ಎಸ್.ಎಮ್ ಗಾಂವ್ಕರ, ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಆರ್. ಮೂಗನೂರಮಠ, ಪ್ರಾಚಾರ್ಯರುಗಳಾದ ಡಾ ಜಗನ್ನಾಥ ಚವ್ಹಾನ, ಎಸ್.ಆರ್ ದೇಶಪಾಂಡೆ, ಡಾ. ವಿಜಯಲಕ್ಷ್ಮೀ ತೆಗ್ಗೆ, ಡಾ. ಎನ್.ಎಚ್ ಬೇವಿನಹಳ್ಳಿ, ಸಾಂಸ್ಕೃತಿಕ ಚಟುವಟಿಕೆಗಳ ವಿಭಾಗದ ಸಂಯೋಜಕ ಡಾ. ಕೆ.ವಿ. ಮಠ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಐ.ಬಿ. ಚಿಕ್ಕಮಠ, ಪ್ರಾಧ್ಯಾಪಕ ಮಹಾಂತೇಶ ದೊಡವಾಡ ಸೇರಿದಂತೆ ವಿವಿಧ ವಿಭಾಗಗಳ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Laxmi News 24×7