Breaking News

ಸರ್ಕಾರಿ ಶಾಲೆಯಲ್ಲಿ ನಿಗೂಢ ಸ್ಫೋಟ – ಗೋಡೆ ಕುಸಿದು ಅಡುಗೆ ಸಿಬ್ಬಂದಿಗೆ ಗಾಯ

Spread the love

ತುಮಕೂರು: ಸರ್ಕಾರಿ ಶಾಲೆಯ  ಅಡುಗೆ ಕೋಣೆಯಲ್ಲಿ ನಿಗೂಢ ಸ್ಫೋಟ  ಸಂಭವಿಸಿ, ಅಡುಗೆ ಸಹಾಯಕಿ ಗಾಯಗೊಂಡ ಘಟನೆ ಚಿಕ್ಕನಾಯಕನಹಳ್ಳಿ ತಾಲೂಕಿನ ಕಂದಿಕೆರೆ ಗ್ರಾಮದಲ್ಲಿ ನಡೆದಿದೆ. ಸಿಲಿಂಡರ್‌ ಹಾಗೂ ಕುಕ್ಕರ್‌ ಸುರಕ್ಷಿತವಾಗಿದ್ದು, ಯಾವ ವಸ್ತು ಸ್ಫೋಟಗೊಂಡಿದೆ ಎಂದು ತಿಳಿದುಬಂದಿಲ್ಲ.

ಶಾಲೆಯ ದಾಸೋಹದ ಅಡುಗೆ ಕೋಣೆಯಲ್ಲಿ ಈ ಸ್ಫೋಟ ಸಂಭವಿಸಿದೆ. ಸ್ಫೋಟದ ರಭಸಕ್ಕೆ ಗೋಡೆ ಕುಸಿದುಬಿದ್ದು, ಅಡುಗೆ ಸಹಾಯಕಿ ಲತಾ ಅವರಿಗೆ ಗಾಯವಾಗಿದೆ. ಇಂದು (ಸೆ.24) ಮಧ್ಯಾಹ್ನ ಅಡುಗೆ ಕೋಣೆಯಲ್ಲಿ ಕೆಲಸ ಮಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಗಾಯಾಳುವನ್ನ ಚಿಕ್ಕನಾಯಕನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಚಿಕ್ಕನಾಯಕನಹಳ್ಳಿ ಪೊಲೀಸರು ಹಾಗೂ ತಹಶೀಲ್ದಾರ್ ಮಮತಾ, ಬಿಇಒ ಕಾಂತರಾಜು ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Spread the love

About Laxminews 24x7

Check Also

ಸಾವಿರಾರು ಮತದಾರರ ಹೆಸರು ತೆಗೆಯಲು ಅಭಯ್ ಪಾಟೀಲ್ ಪತ್ರ: ಬಂಧನಕ್ಕೆ ಹರಿಪ್ರಸಾದ್ ಆಗ್ರಹ

Spread the loveಬೆಂಗಳೂರು: ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ್ ಪಾಟೀಲ್ ಅವರು ಅಕ್ರಮವಾಗಿ ಸಾವಿರಾರು ಮತದಾರರ ಹೆಸರುಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ