Breaking News

ಜಮೀನು ವಿವಾದದಲ್ಲಿ ಮಾಜಿ ಸೈನಿಕನ ಕೊಲೆ: ಒಬ್ಬನಿಗೆ ಜೀವಾವಧಿ, ನಾಲ್ವರಿಗೆ 10 ವರ್ಷ ಜೈಲುಶಿಕ್ಷೆ

Spread the love

ಬೆಳಗಾವಿ: ಜಮೀನು ಪಾಲು-ವಾಟೆ ವಿಚಾರವಾಗಿ ನಡೆದ ಗಲಾಟೆಯಲ್ಲಿ ಮಾಜಿ ಸೈನಿಕನನ್ನು ಕೊಲೆ ಮಾಡಿ, ಆತನ ಸಹೋದರನ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ ಬೈಲಹೊಂಗಲದ 10ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

2023ರ ಜೂನ್ 4ರಂದು ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ ಘಟನೆ ನಡೆದಿತ್ತು. ಜಮೀನಿನ ಪಾಲು-ವಾಟೆ ಆಗುವವರೆಗೆ ಗಳೆ ಹೊಡೆಯಬೇಡಿ ಎಂದು ಕಸ್ತೂರೆವ್ವ ಖನಗಾಂವಿ, ಅವರ ಪತಿ ಸದಾಶಿವ ಖನಗಾಂವಿ ಹಾಗೂ ಮೈದುನ ಸುರೇಶ ಖನಗಾಂವಿ ಆರೋಪಿಗಳಿಗೆ ತಿಳಿಸಿದ್ದರು. ಈ ವೇಳೆ ಮಾತಿನ ಚಕಮಕಿ ನಡೆದು, ಶಂಕ್ರಪ್ಪ ಮಲ್ಲಸರ್ಜ, ಶಶಿಧರ ಮಲ್ಲಸರ್ಜ ಹಾಗೂ ಮಲ್ಲಸರ್ಜ ಶಂಕ್ರೆಪ್ಪ ಅವರು ಕುಡಗೋಲು, ಗುದ್ದಲಿ ಹಾಗೂ ಸಲಿಕೆಯಿಂದ ಸದಾಶಿವ ಮತ್ತು ಸುರೇಶ ಅವರ ಮೇಲೆ ಹಲ್ಲೆ ನಡೆಸಿದ್ದರು.

ಹಲ್ಲೆಯಲ್ಲಿ ಸುರೇಶ ಖನಗಾಂವಿ ಮೃತಪಟ್ಟಿದ್ದು, ಸದಾಶಿವ ಖನಗಾಂವಿ ಗಂಭೀರವಾಗಿ ಗಾಯಗೊಂಡಿದ್ದರು. ಆರೋಪಿ ಮೀನಾಕ್ಷಿ ಮಲ್ಲಸರ್ಜ ಪ್ರಚೋದನೆ ನೀಡಿದ ಆರೋಪ ಎದುರಿಸಿದ್ದರು.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಆರ್.ಪಿ. ಗೌಡ ಅವರು ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಸೆ.22ರಂದು ತೀರ್ಪು ಪ್ರಕಟಿಸಿದರು.

ಆರೋಪಿ ಶಂಕ್ರಪ್ಪ ಮಲ್ಲಸರ್ಜ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಶಂಕ್ರಪ್ಪ ಮಲ್ಲಸರ್ಜ, ಶಶಿಧರ ಮಲ್ಲಸರ್ಜ, ಮಲ್ಲಸರ್ಜ ಶಂಕ್ರೆಪ್ಪ ಹಾಗೂ ಮೀನಾಕ್ಷಿ ಮಲ್ಲಸರ್ಜ ಅವರಿಗೆ ತಲಾ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಲಾಗಿದೆ. ನಾಲ್ವರು ಆರೋಪಿಗಳಿಗೆ ಒಟ್ಟು ₹1.22 ಲಕ್ಷ ದಂಡ ವಿಧಿಸಲಾಗಿದೆ. ಸರ್ಕಾರದ ಪರ ಸರ್ಕಾರಿ ಅಭಿಯೋಜಕ ಆರ್.ಎ. ಬಾರಾವಲಿ ವಾದ ಮಂಡಿಸಿದ್ದರು.


Spread the love

About Laxminews 24x7

Check Also

ನಾಲೆಯಲ್ಲಿ ನವವಿವಾಹಿತೆ ಕಣ್ಮರೆ – ಪತಿ ವಿರುದ್ಧ ಕೊಲೆ ಆರೋಪ

Spread the loveಹಾಸನ: ನಾಲೆಯಲ್ಲಿ ನವವಿವಾಹಿತೆ ಕಣ್ಮರೆಯಾದ ಘಟನೆ ಚನ್ನರಾಯಪಟ್ಟಣ ತಾಲೂಕಿನ ಚಿಕ್ಕನಾಯಕನಹಳ್ಳಿ ಗ್ರಾಮದಲ್ಲಿನಡೆದಿದೆ. ಜಯಶೀಲಾ.ಬಿ.ಕೆ (ಪ್ರಿಯಾಂಕ 24) ಅನುಮಾನಾಸ್ಪದವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ