Breaking News

ವಿಶ್ವ ಟೇಕ್ವಾಂಡೋ ಸ್ಪರ್ಧೆಯಲ್ಲಿ 3 ಚಿನ್ನದ ಪದಕ ಗೆದ್ದ ಹೆಬ್ಬಾಳದ ಎನ್‍ಎಫ್‍ಸಿ ಟೀಮ್‌

Spread the love

ಬೆಂಗಳೂರು: ಮಂಗೋಲಿಯಾದಲ್ಲಿ ನಡೆದ ವಿಶ್ವ ಟೇಕ್ವಾಂಡೋ ಸ್ಪರ್ಧೆಯಲ್ಲಿ ಬೆಂಗಳೂರಿನ ಹೆಬ್ಬಾಳದ ಎನ್‍ಎಫ್‍ಸಿ ಟೀಂ ಚಿನ್ನದ ಬೇಟೆಯಾಡಿದೆ.

ಭಾರತವನ್ನ ಪ್ರತಿನಿಧಿಸಿದ್ದ ಎನ್‍ಎಫ್‍ಸಿಯ ಇಶ್ವಾಕ್ 2 ಚಿನ್ನ ಹಾಗೂ ಮಹಿಮಾ ಪಿ.ಜಿ 1 ಚಿನ್ನದ ಪದಕವನ್ನು ಗಳಿಸಿದ್ದಾರೆ. ಧೃತಿ ದೀಪಕ್ ಶಾಸ್ತ್ರಿ, ಸ್ಮಯಾನ್ ಚೇತನ್, ಪ್ರಕೃತಿ, ಪ್ರಣಮ್ಯ ಬೆಳ್ಳಿ ಪದಕವನ್ನು ಗಳಿಸಿದ್ದಾರೆ. ಇನ್ನುಳಿದಂತೆ ಡಿ.ಸಿ. ಸಿದ್ದೇಶ್ ಹಾಗೂ ದೀಪಕ್ ಮೋಹನ್ ಕಂಚಿನ ಪದಕವನ್ನು ಗಳಿಸಿದ್ದಾರೆ.

ಒಟ್ಟಾರೆ ಎನ್‍ಎಫ್‍ಸಿ ಟೀಂ 3 ಚಿನ್ನ, 5 ಬೆಳ್ಳಿ, 2 ಕಂಚಿನ ಪದಕ ಪಡೆದಿರುವುದು ವಿಶೇಷ. ಎನ್‍ಎಫ್‍ಸಿಯ ಪವನ್ ಕೆ.ಭಾರತ ತಂಡದ ಕೋಚ್ ಆಗಿರುವುದು ವಿಶೇಷ.


Spread the love

About Laxminews 24x7

Check Also

ಮಮತಾ ಬ್ಯಾನರ್ಜಿ ಸೋದರ ಸಂಬಂಧಿ ಪುತ್ರಿ ಶವವಾಗಿ ಪತ್ತೆ

Spread the loveಕೋಲ್ಕತ್ತಾ: ಪಶ್ಚಿಮ ಬಂಗಾಳದ  ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ  ಅವರ ಸೋದರ ಸಂಬಂಧಿಯ ಪುತ್ರಿ ಬೃಷ್ಟಿ ಮುಖರ್ಜಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ