Breaking News

ನಿನ್ನ ತಲೆದಂಡ ಮಾಡಿದ್ದು ಕಾಂಗ್ರೆಸ್, ರಾಮಾಯಣದ ಕಥೆ ಹೇಳಿ ಜನರನ್ನ ದಾರಿ ತಪ್ಪಿಸಬೇಡ: ನಾಗೇಂದ್ರಗೆ ರೆಡ್ಡಿ ತಿರುಗೇಟು

Spread the love

ಬಳ್ಳಾರಿ: ನಿನ್ನ ತಲೆದಂಡ ಮಾಡಿದ್ದು ಕಾಂಗ್ರೆಸ್, ರಾಮಾಯಣದ ಕಥೆ ಹೇಳಿ ಜನರನ್ನು ದಾರಿ ತಪ್ಪಿಸಬೇಡ ಎಂದು ಬಿ.ನಾಗೇಂದ್ರವಿರುದ್ಧ ಮಾಜಿ ಸಚಿವ, ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

ಬಿ. ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಗೇಂದ್ರ ಸ್ವಯಂ ಘೋಷಿತ ಶಂಭುಕ. ನಾಗೇಂದ್ರ ಅವರು ಕಣ್ಣೀರು ಹಾಕುತ್ತಾ ನಾಟಕ ಮಾಡುತ್ತಿರುವುದನ್ನು ನೋಡಿದ್ದೇನೆ. ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ ನಾಸೀರ್ ಹುಸೇನ್ ನಿನ್ನೆ ನಾಗೇಂದ್ರ ಪಕ್ಕದಲ್ಲಿ ಕುಳಿತಿದ್ದ. ಕಲಿಯುಗದ ಷಣ್ಮುಖ ತಮ್ಮ ನಾಗೇಂದ್ರ ಎಂದು ವ್ಯಂಗ್ಯವಾಡಿದರು.

ಜನಾರ್ದನ ರೆಡ್ಡಿ ಅವರಿಂದ ನೀನು ಎಂಎಲ್‌ಎ ಆಗಿದ್ದು. ನಿನ್ನ ಇತಿಹಾಸದ ಬಗ್ಗೆ ನಮ್ಮವರು ಮಾತನಾಡುತ್ತಾರೆ. ಮನುವಾದದ ಬಗ್ಗೆ ಮಾತನಾಡುತ್ತೀಯಾ. ನಿನ್ನ ರಾಜಕೀಯ ಆರಂಭವಾಗಿದ್ದು ಬಿಜೆಪಿಯಿಂದ. ವಾಲ್ಮೀಕಿ ರಾಮಾಯಣದ ಬಗ್ಗೆ ಶಂಭುಕನ ಬಗ್ಗೆ ಮಾತನಾಡುತ್ತೀಯಾ? ರಾಜಕೀಯಕ್ಕೆ ರಾಮಾಯಣ ತರುತ್ತೀಯಾ? ಈ ಬಗ್ಗೆ ನಿನಗೆ ಮಾತನಾಡಲು ಯೋಗ್ಯತೆ ಇಲ್ಲ. ಶಂಭುಕನ ಹತ್ಯೆ ಯಾಕೆ ಆಯ್ತು ನಿನಗೆ ಗೊತ್ತಾ? ದಲಿತ ಚಂದ್ರಶೇಖರ್ ಅವರನ್ನು ನೇರವಾಗಿ ಹತ್ಯೆ ಮಾಡಿದ್ದು ನೀವು. ಚಂದ್ರಶೇಖರ್ ಆತ್ಮಹತ್ಯೆಗೆ ಕಾರಣವಾಗಿದ್ದು ನೀನು. ಬಿಜೆಪಿ ಎಂಎಲ್‌ಎ ಇದ್ದಾಗ ನಿನಗೆ ಮನುವಾದ ಗೊತ್ತಿರಲಿಲ್ವ ಎಂದು ಪ್ರಶ್ನಿಸಿದರು.

ವಾಲ್ಮೀಕಿ ನಿಗಮದ ಹಣದ ಅವ್ಯವಹಾರ ಪ್ರಕರಣವನ್ನು ಪ್ರಸ್ತಾಪಿಸಿದ ಜನಾರ್ದನ ರೆಡ್ಡಿ, 187 ಕೋಟಿ ರೂ. ಹಗರಣ ಮಾಡಿದ್ದು ನೀನು. ಇಡಿ ಮತ್ತು ಸಿಬಿಐ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ. ಈ ಹಗರಣದಲ್ಲಿ ನಾನು ಇಲ್ಲ ಇಲ್ಲ ಅಂತ ನಾಗೇಂದ್ರ ಹೇಳಿದ್ದಾನೆ. ನೀನು ಹಗರಣ ಮಾಡಿಲ್ಲ ಅಂದರೆ ಆಗಿನ ಸಿಎಂ ಸಿದ್ದರಾಮಯ್ಯ ನಿನ್ನ ರಾಜೀನಾಮೆ ಯಾಕೆ ಪಡೆದುಕೊಂಡ್ರು? 90 ಕೋಟಿ ಹಗರಣ ಆಗಿದೆ ಎಂದು ಸ್ವತಃ ಸಿದ್ದರಾಮಯ್ಯನವರು ಒಪ್ಪಿಕೊಂಡಿದ್ದರು. ಈ ಹಗರಣದಲ್ಲಿ ನೀನು ಇದ್ದೀಯಾ, ಇದ್ದೀಯಾ ಎಂದು ನಾನು ಹೇಳುತ್ತೇನೆ ಎಂದು ಕಿಡಿಕಾರಿದರು.

ನಾವೆಲ್ಲ ರಿಜೆಕ್ಟೆಡ್ ಪೀಸಾ? ಕಲಬುರಗಿಯಲ್ಲಿ ಹೀನಾಯ ಸೋಲನ್ನು ಕಂಡ ಮಲ್ಲಿಕಾರ್ಜುನ ಖರ್ಗೆಯವರನ್ನು ನೀವು ಇವತ್ತು ನಿಮ್ಮ ಎಐಸಿಸಿ ಅಧ್ಯಕ್ಷ ಮಾಡಿದ್ದೀರಿ. ಹಾಗಿದ್ರೆ ಅವರು ರಿಜಕ್ಟೆಡ್ ಪೀಸಾ? ಮಾತನಾಡುವ ಮೊದಲು ತಲೆಯಲ್ಲಿ ಸ್ವಲ್ಪ ಬುದ್ಧಿ ಇರಬೇಕು. ರಾಜಕೀಯದಲ್ಲಿ ಸೋಲು-ಗೆಲುವು ಎನ್ನುವುದು ಸರ್ವೇ ಸಾಮಾನ್ಯ. ವಾಲ್ಮೀಕಿ ನಿಗಮದ ದುಡ್ಡಿನಲ್ಲಿ ತುಕಾರಾಂ ಗೆದ್ದಿದ್ದಾನೆ.ತುಕಾರಾಂ ಕೂಡ ರಾಜೀನಾಮೆ ಕೊಡಬೇಕಿತ್ತು. ನಾಗೇಂದ್ರ ನಿನಗೆ ನಿನ್ನ ಪಕ್ಷಕ್ಕೆ ತಾಕತ್ತು ಇದ್ರೆ ತುಕಾರಾಂ ಸೇರಿ ಹತ್ತು ಶಾಸಕರಿಗೆ ರಾಜೀನಾಮೆ ಕೊಡಿಸಿ. ನಾಳೆಯೇ ಚುನಾವಣೆಗೆ ನಾವು ರೆಡಿ. 10ಕ್ಕೆ 10 ವಿಧಾನಸಭಾ ಕ್ಷೇತ್ರಗಳಲ್ಲಿ ನಿಮ್ಮ ವಿರುದ್ಧ ನಾವು ಗೆದ್ದಿಲ್ಲ ಅಂದ್ರೆ ನಾನು ಜನಾರ್ದನ ರೆಡ್ಡಿಯೇ ಅಲ್ಲ ಎಂದು ಸವಾಲೆಸೆದರು.

ವಾಲ್ಮೀಕಿ ನಿಗಮದ ಹಣ ತೆಲಂಗಾಣ, ಗೋವಾ, ಬಳ್ಳಾರಿ ಎಂಪಿ ಚುನಾವಣೆಗೆ ಬಳಕೆ ಮಾಡಿದ್ದೀರಿ. ಬಾಂಬೆಗೆ ಕೂಡ ಹಣ ಕಳುಹಿಸಿದ್ದಾರೆ. ನೇಹಾ ಮನ್ಸೂರಿ, ಜಾಹದ್ ಮನ್ಸೂರಿ, ಕಲಾಮ್ ಶೇಕೂರ್ ಮನ್ಸೂರಿ ಈ ಮೂವರಿಗೆ 6 ಕೋಟಿಗೂ ಅಧಿಕ ಹಣ ವರ್ಗಾವಣೆ ಮಾಡಿದ್ದಾರೆ. ಈ ಮೂವರ ಬಗ್ಗೆ ನಾಗೇಂದ್ರ ಸ್ಪಷ್ಟೀಕರಣ ಕೊಡಬೇಕು. ನಾಗೇಂದ್ರ ಕೇಸ್‌ನಲ್ಲಿ ಈ ಮೂವರು ಆರೋಪಿಗಳು ಬೆಂಗಳೂರು ಸಿಬಿಐ ಕೋರ್ಟ್‌ನಲ್ಲಿ ಬೇಲ್ ಪಡೆದಿದ್ದಾರೆ. ನಿಗಮದ ಖಾತೆಯಿಂದ ಈ ಮೂವರಿಗೆ ಹಣ ಹೋಗಿದೆ. ಈ ಮೂವರಿಗೂ ನಾಗೇಂದ್ರಗೂ ಇರುವ ಸಂಬಂಧ ಏನು? ಬಳ್ಳಾರಿಯ ಮುಸ್ಲಿಂ ಅವರಿಗೆ ಸ್ಪಷ್ಟೀಕರಣ ಕೊಡಬೇಕು. ಈ ಕೇಸ್‌ನಲ್ಲಿ ನಾಗೇಂದ್ರ ಸೇರಿ 26 ಜನರು ಇದ್ದಾರೆ. ಐಷಾರಾಮಿ ಕಾರು ಖರೀದಿ ಮಾಡಿದ್ದಾರೆ. ಬಳ್ಳಾರಿಯಲ್ಲಿ ಒಂದು ಲಕ್ಷ ನಾಗೇಂದ್ರ ಇದ್ದಾರೆ ಎಂದು ಹೇಳುತ್ತೀಯಾ. ನಾಗೇಂದ್ರ ನಿನಗೆ ತಲೆ ಕೆಟ್ಟೀದೀಯಾ? 3 ಲಕ್ಷ ವಾಲ್ಮೀಕಿ ಕುಟುಂಬಗಳಿಗೆ ಸೇರಬೇಕಿದ್ದ ಹಣ ಅದು. ನಾಗೇಂದ್ರ ನೀನು ದುರಂಹಕಾರದಿಂದ ಮಾತನಾಡುತ್ತೀಯಾ? ನಿನ್ನ ಕಣ್ಣೀರು ಕರ್ಮದ ಕಣ್ಣೀರು. ನೀನು ಹಾಕಿದ ಕರ್ಮದ ಕಣ್ಣೀರು ಸತ್ತು ಹೋಗಿರುವ ಚಂದ್ರಶೇಖರ್ ಆತ್ಮಕ್ಕೆ 1% ಆದ್ರೂ ಸಂತೋಷ ತಂದಿರುತ್ತೆ ಎಂದು ಹರಿಹಾಯ್ದರು.


Spread the love

About Laxminews 24x7

Check Also

ಗ್ಯಾನೇಂದ್ರ ಬೆನ್ನಲ್ಲೇ ಸಿಐಡಿ ಮತ್ತೊಂದು ಬೇಟೆ – ಸಹಾಯ ಮಾಡಿದ್ದ ಮಧ್ಯವರ್ತಿ ವಶಕ್ಕೆ

Spread the loveಬೆಂಗಳೂರು: ಕೆಪಿಎಸ್‌ಸಿ ಹಗರಣದಲ್ಲಿ ಐಎಎಸ್‌ ಅಧಿಕಾರಿ ಗ್ಯಾನೇಂದ್ರ ಕುಮಾರ್ ಬಂಧನದ ಬೆನ್ನಲ್ಲೇ ಇದೀಗ ಸಿಐಡಿ ತಂಡ ಮತ್ತೊಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ