Breaking News

ಈ ಬಾರಿ ದಸರಾ ಮೆರವಣಿಗೆಯ ರೂಪವನ್ನೇ ಬದಲಾಯಿಸುತ್ತೇವೆ: ಸಿಎಂ

Spread the love

ಮೈಸೂರು: ಈ ಬಾರಿಯ ದಸರಾವನ್ನುಅದ್ಧೂರಿಯಾಗಿ ಮತ್ತು ಬಹಳ ವಿಭಿನ್ನವಾಗಿ ಮಾಡುತ್ತೇವೆ ಎಂದು ಮೈಸೂರಿನಲ್ಲಿ ಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಸರಾದ ಮೆರವಣಿಗೆಯ ರೂಪವನ್ನೇ ಬದಲಾಯಿಸುತ್ತೇವೆ. ಮಿಲಿಟರಿ, ಸೇನಾ ಪಡೆ ಮೆರವಣಿಗೆಯಲ್ಲಿ ಬರಲಿದೆ. ಕನ್ನಡದ ಚಿತ್ರ ನಟ, ನಟಿಯರು ಕೂಡ ಮೆರವಣಿಗೆಯಲ್ಲಿ ಸಾಗಲಿದ್ದಾರೆ. ಒಂದೇ ಪ್ರಕಾರದ 5 ಜಾನಪದ ಕಲಾವಿದರಿಗೆ ಈ ಬಾರಿ ಅವಕಾಶ ಇಲ್ಲ. ಬದಲಾದ ಕಾಲಕ್ಕೆ ತಕ್ಕಂತೆ ಮೆರವಣಿಗೆಯ ರೂಪವನ್ನ ಬದಲಾಯಿಸುತ್ತೇನೆ ಎಂದು ತಿಳಿಸಿದರು.

ಇದೇ ವೇಳೆ, ದಸರಾ ಕಂಬಳ ನಡೆಸುವುದನ್ನು ನಾನು ಪ್ರತಿಷ್ಟೆಯಾಗಿ ತೆಗೆದುಕೊಂಡಿಲ್ಲ. ಕಂಬಳದ ಬಗ್ಗೆ ಚರ್ಚೆ ಮಾಡುತ್ತಿದ್ದೇನೆ. ಪರಿಸರ ಹಾನಿ ಎನ್ನುವುದೆಲ್ಲಾ ಸುಮ್ಮನೆ ನೆಪ. ನೀರು ಕೂಡ ಹೆಚ್ಚಾಗಿ ಬೇಕಾಗಿಲ್ಲ. ಸುಮ್ಮನೆ ಕೆಲವರು ವಿರೋಧ ಮಾಡುತ್ತಿದ್ದಾರೆ. ನಾನು ಈ ಬಗ್ಗೆ ಅಂತಿಮ ತೀರ್ಮಾನ ಮಾಡುತ್ತೇವೆ ಹೇಳಿದ್ದಾರೆ. ದಸರಾ ಉದ್ಘಾಟಕರ ವಿಚಾರದಲ್ಲೂ ಹಲವರ ಜೊತೆ ಚರ್ಚೆ ಮಾಡಿದ್ದೇನೆ. ಅಂತಿಮ ನಿರ್ಣಯ ನಾನೇ ಮಾಡುತ್ತೇನೆ ಎಂದರು.


Spread the love

About Laxminews 24x7

Check Also

ಅ.3 ಮತ್ತು 4ರಂದು ‘ಸತೀಶ್ ಅಣ್ಣಾ ಚೆಸ್ ಟೂರ್ನಾಮೆಂಟ್ ಸೀಸನ್–04’: ಸಚಿವ ಸತೀಶ್ ಜಾರಕಿಹೊಳಿ

Spread the love  ಬೆಳಗಾವಿ: ಪ್ರತಿ ವರ್ಷದಂತೆ ಈ ಬಾರಿಯೂ ನಾಲ್ಕನೇ ಬಾರಿಗೆ ‘ಸತೀಶ್ ಅಣ್ಣಾ ಚೆಸ್ ಟೂರ್ನಾಮೆಂಟ್’ ಆಯೋಜಿಸಲಾಗುತ್ತಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ