Breaking News

ರಾಜ್ಯದ 101 ತಾಲೂಕುಗಳಲ್ಲಿ ಬರ; ಸರ್ಕಾರ ಅಧಿಕೃತ ಘೋಷಣೆ – 1 ಲಕ್ಷದವರೆಗೆ ಸಾಲ ಮನ್ನಾಕ್ಕೆ ಬಿಜೆಪಿ ಆಗ್ರಹ

Spread the love

ಬೆಂಗಳೂರು: ಮುಂಗಾರು ಮಳೆ ಕೈಕೊಟ್ಟ ಕಾರಣ ರಾಜ್ಯದಲ್ಲಿ 101 ತಾಲೂಕುಗಳಲ್ಲಿ ಬರ ಇದೆ ಅಂತ ಸರ್ಕಾರ ಘೋಷಣೆ ಮಾಡಿದೆ.

ಕಂದಾಯ ಸಚಿವರೂ ಆಗಿರುವ ಡಿಸಿಎಂ ಪರಮೇಶ್ವರ್ ಸುದ್ದಿಗೋಷ್ಠಿ ನಡೆಸಿ, 102ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ತೀವ್ರ ಬರ ಇದೆ. ರಾಜ್ಯದಲ್ಲಿ ವಾಡಿಕೆಯಂತೆ 666 ಮಿ.ಮೀ. ಮಳೆ ಆಗಬೇಕಿತ್ತು. ಆದರೆ, 465 ಮಿ.ಮೀ ಅಷ್ಟೆ ಮಳೆ ಆಗಿದೆ. 134 ಬರ ತಾಲೂಕುಗಳಿಗೆ ಅಧಿಕಾರಿಗಳ ಟೀಮ್ ಕಳಿಸಿದ್ದೆವು. 101 ರಲ್ಲಿ 89 ತಾಲೂಕಿನಲ್ಲಿ ತೀವ್ರ ಬರ, 12 ತಾಲೂಕಿನಲ್ಲಿ ಬರ ಇದೆ. ಉಳಿದ ತಾಲೂಕುಗಳನ್ನು ಮಾನಿಟರ್ ಮಾಡ್ತೇವೆ ಎಂದು ತಿಳಿಸಿದರು.

ಅಂತರ್ಜಲ ಮಟ್ಟ ಸಹ 132 ತಾಲೂಕಿನಲ್ಲಿ 10 ವರ್ಷಕ್ಕಿಂತ ಹೆಚ್ಚು ಆವರೇಜ್‌ನಲ್ಲಿ 1,000 ಅಡಿ ಕೆಳಗೆ ಹೋಗಿದೆ. ಕಳೆದ ವರ್ಷ ಈ ಸಮಯದಲ್ಲಿ ಡ್ಯಾಮ್‌ಗಳಲ್ಲಿ 815.7 ಟಿಎಂಸಿ ನೀರಿತ್ತು. ಈಗ 684 ಟಿಎಂಸಿ ನೀರು ಮಾತ್ರ ಇದೆ. ಕೇಂದ್ರದಿಂದ ಹಣ ಬರಬೇಕು 1,239 ಕೋಟಿ ಎಸ್‌ಡಿಆರ್‌ಎಫ್ ಹಣ ಬರಬೇಕಿದ್ದು, ಮನವಿ ಸಲ್ಲಿಸ್ತೇವೆ ಅಂತ ಪರಮೇಶ್ವರ್ ಹೇಳಿದರು.

ಇನ್ನೂ ವಿಪಕ್ಷ ನಾಯಕ ಅಶೋಕ್ ಖಂಡಿಸಿದ್ದು, 175 ತಾಲ್ಲೂಕುಗಳನ್ನ ಬರಪೀಡಿತ ಅಂತ ಘೋಷಿಸಬೇಕಿತ್ತು. ಶಾಸಕರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ಮಾಡಬೇಕಿತ್ತು. ಗುಳೆ ಹೋಗುವರಿಗೆ ಏನು ಪರಿಹಾರ ಕೊಡ್ತೀರಾ? 1 ಲಕ್ಷದ ತನಕ ರೈತರ ಎಲ್ಲಾ ಸಾಲ ಮನ್ನಾ ಮಾಡಬೇಕು ಅಂತ ಆಗ್ರಹಿಸಿದರು.

ಮಂಡ್ಯದಲ್ಲಿ ಕಾವೇರಿ ನೀರಿಗಾಗಿ ಕನ್ನಡಪರ ಸಂಘಟನೆಗಳು, ರೈತರ ಸಂಘಟನೆಗಳು ರಾಜ್ಯ ಸರ್ಕಾರದ ವಿರುದ್ಧ ‘ಕಡಲೆಪುರಿ ಚಳವಳಿ’ ನಡೆಸುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಆರ್‌ಎಸ್‌ಗೆ 15 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ಒಳಹರಿವಿದ್ದು, 31 ಟಿಎಂಸಿ ನೀರಿದೆ.


Spread the love

About Laxminews 24x7

Check Also

180 ಕೋಟಿ ಹೈಕಮಾಂಡ್‌ಗೆ ಹೋಗಿರೋದು ಬಾಯಿಬಿಟ್ರೆ ಕಷ್ಟ ಅಂತ ನಾಗೇಂದ್ರನನ್ನ ಕ್ಯಾಬಿನೆಟ್‌ಗೆ ತಗೊಂಡ್ರಾ? – ಅಶೋಕ್ ಪ್ರಶ್ನೆ

Spread the loveಬೆಂಗಳೂರು: 180 ಕೋಟಿ ರೂ. ಕಾಂಗ್ರೆಸ್ ಹೈಕಮಾಂಡ್‌ಗೆ ಹೋಗಿದೆ ಎಂದು ನಾಗೇಂದ್ರ ಬಾಯಿಬಿಟ್ಟರೆ ಕಷ್ಟ ಆಗುತ್ತೆ ಅಂತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ