ಬೆಂಗಳೂರು: ರಾಜ್ಯಕ್ಕೆ, ನಮ್ಮ ದೇಶಕ್ಕೆ, ಬೆಂಗಳೂರು ಚಿನ್ನದ ಮೊಟ್ಟೆ ಇಡುವ ಕೋಳಿ. ಇದನ್ನ ಕಾಪಾಡಬೇಕಾಗಿರೋದು, ಇನ್ನಷ್ಟು ಸುಧಾರಣೆ ಮಾಡಬೇಕಾಗಿರೋದು ನಮ್ಮೆಲ್ಲರ ಕರ್ತವ್ಯ ಅಂತಾ ಸಚಿವ ಕೃಷ್ಣಬೈರೇಗೌಡ ಜಿಬಿಎ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಅಧಿಕಾರಿಗಳ ಜೊತೆ ಸಚಿವ ಕೃಷ್ಣಬೈರೇಗೌಡ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದಾರೆ. ಜಿಬಿಎ ವ್ಯಾಪ್ತಿಯ ಯೋಜನೆಗಳು, ಕಾಮಗಾರಿಗಳು, ಕಸದ ಸಮಸ್ಯೆ, ತೆರಿಗೆ ಸಂಗ್ರಹ ಸೇರಿದಂತೆ ಹಲವು ವಿಭಾಗಗಳ ಅಧಿಕಾರಿಗಳ ಜೊತೆ ಸಭೆ ಮಾಡಿ ಜಿಬಿಎ ಸುಧಾರಣೆ ಮಾಡುವ ಬಗ್ಗೆ ಚರ್ಚೆ ನಡೆಸಿದ್ದಾರೆ.
ರಸ್ತೆ ಗುಂಡಿ ಮುಚ್ಚುವ ವಿಚಾರದಲ್ಲಿ ಚರ್ಚೆ ನಡೆಸಲಾಗಿದೆ. ತೆರಿಗೆ ಸಂಗ್ರಹದಲ್ಲಿ ಸರಿಯಾದ ಉತ್ತರ ನೀಡದ ಚಾಮರಾಜಪೇಟೆ ಆರ್‌ಓ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಧಿಕಾರಿಗಳ ಜೊತೆ ಹಲವು ಮನವಿ ಮಾಡಿರುವ ಸಚಿವ ಕೃಷ್ಣಬೈರೇಗೌಡ ನನ್ನ ಜೊತೆ ಕೆಲಸ ಮಾಡುವಾಗ ಸಾರ್ವಜನಿಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು ಎಂದು ಸೂಚಿಸಿದ್ದಾರೆ.
ನಿಮ್ಮ ಅತಿ ಬುದ್ಧಿವಂತಿಕೆ ನಿಮ್ಮ ಕೆಲಸದಲ್ಲಿ ತೋರಿಸಿ, ನನ್ನ ಮೇಲೆ ಪ್ರಯೋಗ ಮಾಡಬೇಡಿ. ಎಲ್ಲೋ ಒಂದು ಕಡೆ ಎಲ್ಲಾದಕ್ಕೂ ಚೆಕ್ ಅಂಡ್ ಬ್ಯಾಲೆನ್ಸ್ ಇದ್ದೇ ಇರುತ್ತೆ. ನಾವು ಕೇಳೋದು ಸಾರ್ವಜನಿಕರ ಕೆಲಸ ಕೇಳುತ್ತೇವೆ ಬಿಟ್ಟರೆ ನಮ್ಮ ವೈಯಕ್ತಿಕ ಯಾವುದು ನನಗೆ ಬೇಕಾಗಿಲ್ಲ. ಸಾರ್ವಜನಿಕರಿಗೆ ನಾವು ಒಳ್ಳೆ ಆಡಳಿತ ಕೊಡಬೇಕು, ಬೆಂಗಳೂರು ಇನ್ನಷ್ಟು ಸುಧಾರಣೆ ಆಗಬೇಕು ಎಂದು ಪಾಠ ಮಾಡಿದ್ದಾರೆ.
ಹಿಂದೆ ನಾನು ಯಾವುದೇ ಇಲಾಖೆಯಲ್ಲಿ ಕೆಲಸ ಮಾಡಿದರು ಕೂಡ ಅಲ್ಲಿ ಆ ಇಲಾಖೆಗೆ ಗೌರವ ತರುವ ಸುಧಾರಣಾ ಕೆಲಸ ಮಾಡಿದ್ದೇನೆ. ಬಹಳ ಕಷ್ಟದ ಪರಿಸ್ಥಿತಿಯಲ್ಲಿ ಇಲಾಖೆ ಜವಾಬ್ದಾರಿ ತೆಗೆದುಕೊಂಡರೂ ಅಧಿಕಾರ ಬಿಟ್ಟುಬರುವಾಗ ನಮ್ಮ ಅಧಿಕಾರಿಗಳು ಕೂಡ ಸಮಾಜದಲ್ಲಿ ತಲೆ ಎತ್ತಿಕೊಂಡು ಗೌರವದಿಂದ ಓಡಾಡಬಹುದು. ಆ ತರ ಬದಲಾವಣೆ ತರುವ ಕೆಲಸ ಮಾಡಿದ್ದೇನೆ. ನಿಮ್ಮ ಸಹಕಾರ ಇದ್ದರೆ ಬೆಂಗಳೂರಲ್ಲೂ ಕೂಡ ನಾವೂ- ನೀವು ಸಮಾಜದಲ್ಲಿ ತಲೆ ಎತ್ತಿಕೊಂಡು ಹೆಮ್ಮೆಯಿಂದ ಓಡಾಡಬಹುದು ಆ ರೀತಿ ಸುಧಾರಣೆ ತರಬಹುದು ಎಂದು ಹೇಳಿದ್ದಾರೆ.
Laxmi News 24×7