ಬೆಂಗಳೂರು: ಯಾರು ಯಾರ ನಾಯಕತ್ವವನ್ನು ತಪ್ಪಿಸೋಕೆ ಆಗಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ಒಂದೇ ಡಿಸಿಎಂ ನಾನೇ ಮಾಡಿಸಿದ್ದು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ಒಬ್ರೆ ಇದ್ರು. ಇಗಲೂ ಒಬ್ರೆ ಡಿಸಿಎಂ ಇದ್ದಾರೆ. ಈ ಹಿಂದಿನ ಸರ್ಕಾರದಲ್ಲಿ ಒಂದೇ ಡಿಸಿಎಂ ಇತ್ತು. ಆಗಲೂ ಹೆಚ್ಚುವರಿ ಡಿಸಿಎಂ ಚರ್ಚೆ ಇತ್ತು. ಈಗಲೂ ಇದೆ, ಆದ್ರೆ ಒಂದೇ ಡಿಸಿಎಂ ಆಗಿದೆ ಎಂದು ತಿಳಿಸಿದ್ದಾರೆ.
ಹಿಂದೆಯೂ ಒಬ್ಬರೆ ಇದ್ರು. ಈಗಲೂ ಒಬ್ಬರೆ ಡಿಸಿಎಂ ಇದ್ದಾರೆ. ಸಿದ್ದರಾಮಯ್ಯ ಲೀಡರ್‌ಶಿಪ್ ತಪ್ಪಸಲು ಆಗಲಿಲ್ಲ. ಯಡಿಯೂರಪ್ಪ, ದೇವೇಗೌಡ ಕೂಡ ಲೀಡರ್ ಆಗಿದ್ದಾರೆ. ಲೀಡರ್ ಆದ ಮೇಲೆ ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
Laxmi News 24×7