Breaking News

ಮಲ್ಪೆಯಲ್ಲಿ ಚೂರಿ ಇರಿದು ಮೀನುಗಾರನ ಬರ್ಬರ ಹತ್ಯೆ

Spread the love

ಉಡುಪಿ: ಮೀನುಗಾರ ಕಾರ್ಮಿಕನಿಗೆ ಚೂರಿ ಇರಿದು ಹತ್ಯೆ ಮಾಡಿದ ಘಟನೆ ಮಲ್ಪೆಯಲ್ಲಿ  ನಡೆದಿದೆ.

ಚಿಕ್ಕಮಗಳೂರು ಮೂಲದ ಅಭಿಷೇಕ್ (24) ಕೊಲೆಯಾದ ದುರ್ದೈವಿ. ರಾಯಚೂರು ಮೂಲದ ಗೋಂವಿಂದ ರಾಜು ಕೊಲೆ ಆರೋಪಿಯಾಗಿದ್ದಾನೆ. ಮುಂಜಾನೆ ಮಲ್ಪೆ ಬಂದರಿನಲ್ಲಿ ಯುವಕನಿಗೆ ಆರೋಪಿ ಚಾಕು ಇರಿದು ಪರಾರಿಯಾಗಿದ್ದ. ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ವಿಚಾರಣೆ ವೇಳೆ, ಕುಡಿದ ಮತ್ತಿನಲ್ಲಿ ಆರೋಪಿ ಚೂರಿ ಇರಿದಿರುವುದು ಗೊತ್ತಾಗಿದೆ. ಅಭಿಷೇಕ್‌ ಶ್ರೀ ಮಹಾಕಾಳಿ ಬೋಟ್‌ನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ- UP ವಿದ್ಯಾರ್ಥಿನಿಯ ಅರ್ಜಿ ವಜಾ

Spread the loveಲಕ್ನೋ: ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ