Breaking News

ಎಸ್‌ಐಆರ್‌ನಲ್ಲಿ ಮ್ಯಾಪಿಂಗ್ ಆಗದೇ ಇರುವವರಿಗೆ ಜಾರಿಯಾಗಲಿದೆ ನೋಟಿಸ್

Spread the love

ಬೆಂಗಳೂರು: ಕರ್ನಾಟಕದಲ್ಲಿ ಎಸ್‌ಐಆರ್  ಮೊದಲ ಹಂತ ಮುಕ್ತಾಯ ಆಗಿದ್ದು ಈಗ ಮತ್ತೊಂದು ಹಂತದ ಪ್ರಕ್ರಿಯೆಗೆ ಮುಂದಾಗಿದೆ. ಮ್ಯಾಪಿಂಗ್  ಆಗದೆ ಗೊಂದಲಮಯವಾಗಿರುವ ಮತದಾರರಿಗೆ ನೋಟಿಸ್ ನೀಡಲಿದ್ದಾರೆ.

43.84 ಲಕ್ಷ ಮತದಾರರಿಗೆ ನೋಟಿಸ್ ಬರಲಿದೆ. ಬೆಂಗಳೂರಿನಲ್ಲಿ ಅತಿಹೆಚ್ಚು ಅಂದರೆ 23 ಲಕ್ಷ ಮತದಾರರಿಗೆ ನೋಟಿಸ್ ಬರಲಿದೆ. ನೋಟಿಸ್ ಪಡೆದ ಮತದಾರರು ನೋಟಿಸ್‌ಗೆ ಪ್ರತಿಕ್ರಿಯೆ ನೀಡಿ ಸೂಕ್ತ ದಾಖಲೆಗಳನ್ನು ಸಲ್ಲಿಕೆ ಮಾಡಬೇಕಾಗಿದೆ. ನೋಟಿಸ್ ಪಡೆದು ಪ್ರತಿಕ್ರಿಯೆ ನೀಡುವಾಗ ನಾವು ಮತದಾರರು ಅಂತಾ ಪ್ರೂವ್ ಮಾಡಬೇಕಿದೆ. ಆಗ ಮತದಾರರ ಪಟ್ಟಿಯಲ್ಲಿ ಹೆಸರು ಪಡೆಯಲು ಸಾಧ್ಯತೆ ಇದೆ.

ಎಎಸ್‌ಡಿಡಿಓ ಅಂತಾ 1.07 ಕೋಟಿ ಮತದಾರರನ್ನು ಗುರುತು ಮಾಡಲಾಗಿದೆ. 43.84 ಲಕ್ಷ ಮತದಾರರು ಗುರುತು, ಪೌರತ್ವ ಮತ್ತು ಜನ್ಮದಿನಾಂಕ ಸಾಬೀತು ಪಡಿಸಬೇಕಿದೆ. 43.84 ಲಕ್ಷ ಮತದಾರರ ಪೈಕಿ 23.45 ಲಕ್ಷ ಮತದಾರರ ಮ್ಯಾಪಿಂಗ್ ಲಭ್ಯವಿಲ್ಲ. ಜೊತೆಗೆ ಗೊಂದಲಮಯವಾಗಿರುವ 20.35 ಲಕ್ಷ ಮತದಾರರಿಗೆ ಕೂಡ ನೋಟಿಸ್ ಬರಲಿದೆ. ನೋಟಿಸ್‌ಗೂ ಉತ್ತರ ಕೊಟ್ಟು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳಬಹುದು. ಜೊತೆಗೆ ಫಾರಂ-6 ಅಡಿ ಕೂಡ ಹೆಸರು ಸೇರ್ಪಡೆಗೆ ಮಾಡಿಕೊಳ್ಳಬಹುದು.

ಯಾರಿಗೆ ಬರಲಿದೆ ನೋಟಿಸ್?
– ಮ್ಯಾಪಿಂಗ್ ಆಗದೇ ಇರುವವರಿಗೆ ನೋಟಿಸ್ ಜಾರಿ
– ಮತದಾರರ ಸ್ಥಳ, ಗ್ರಾ.ಪಂ ವ್ಯಾಪ್ತಿಯಲ್ಲಿ ನೋಟಿಸ್
– ನೋಟಿಸ್ ಜಾರಿ ಮಾಡಿ ಬಿಆರ್‌ಓಗಳಿಂದ ತನಿಖೆ
– ನಾನು ಮತದಾರ ಅಂತಾ ಪ್ರೂವ್ ಮಾಡಿಕೊಳ್ಳಬೇಕು
– ನೋಟಿಸ್ ಬಳಿಕ ದಾಖಲಾತಿ ಸಲ್ಲಿಕೆ ಮಾಡಬೇಕು
– 12 ದಾಖಲಾತಿಗಳಲ್ಲಿ ಒಂದು ದಾಖಲಾತಿ ಕೊಡಬೇಕು
– ನೋಟಿಸ್ ಪಡೆದ 7 ದಿನಗಳಲ್ಲಿ ಪ್ರತಿಕ್ರಿಯೆ ನೀಡಬೇಕು


Spread the love

About Laxminews 24x7

Check Also

ಪಾಗಲ್‌ ಪ್ರೇಮಿಯಿಂದ ಟಾರ್ಚರ್‌ – ಕೆರೆಗೆ ಹಾರಿ ಸಾಗರದ ಯುವತಿ ಆತ್ಮಹತ್ಯೆ

Spread the love ಶಿವಮೊಗ್ಗ: ಪಾಗಲ್‌ ಪ್ರೇಮಿಯ ಕಿರುಕುಳಕ್ಕೆ ಬೇಸತ್ತು ಸಾಗರ  ತಾಲೂಕಿನ ಬೆಳಮಕ್ಕಿ ಗ್ರಾಮದ ಯುವತಿಯೊಬ್ಬಳು ಬೆಂಗಳೂರಲ್ಲಿ  ಕೆರೆಗೆ ಹಾರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ