Breaking News

ಆತ ನಂ.1 ರೇಪಿಸ್ಟ್‌, 100 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾನೆ – ವೈದ್ಯನ ವಿರುದ್ಧ ನರ್ಸ್‌ ಗಂಭೀರ ಆರೋಪ

Spread the love

ಜೈಪುರ್‌: ರಾಜಸ್ಥಾನದಲ್ಲಿ ವೈದ್ಯರಿಗೆ ಬ್ಲಾಕ್‌ಮೇಲ್‌ ಮಾಡಿ ಬಂಧನಕ್ಕೊಳಗಾದ ನರ್ಸ್‌  ಒಬ್ಬಳು ವೈದ್ಯನ ವಿರುದ್ಧ ಸರಣಿ ಅತ್ಯಾಚಾರದ ಆರೋಪ ಮಾಡಿದ್ದಾಳೆ.

65 ವರ್ಷದ ವೈದ್ಯರೊಬ್ಬರಿಂದ 2 ಕೋಟಿ ರೂ. ಸುಲಿಗೆ ಮಾಡಿದ ಆರೋಪದ ಮೇಲೆ ಕಮಲಾ ಎಂಬ ನರ್ಸ್‌ನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ. ಆಕೆಯನ್ನು ಬಾರ್ಮರ್ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಈ ವೇಳೆ ವಿಡಿಯೋ ಸಂದೇಶವನ್ನು ಹಂಚಿಕೊಂಡಿದ್ದು, ಅದರಲ್ಲಿ, ತಮ್ಮ ಆಸ್ಪತ್ರೆಗೆ ಭೇಟಿ ನೀಡಿದ ಹಲವಾರು ಮಹಿಳಾ ರೋಗಿಗಳ ಮೇಲೆ ವೈದ್ಯರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾಳೆ.

ವೈದ್ಯನನ್ನು ನಂಬರ್‌ 1 ಅತ್ಯಾಚಾರಿ ಎಂದು ಕರೆದಿರುವ ನರ್ಸ್‌, ಸುಮಾರು 100 ಮಹಿಳೆಯರನ್ನು ಆತ ರೇಪ್‌ ಮಾಡಿದ್ದಾನೆ ಎಂದು ಆಕ್ರೋಶ ಹೊರಹಾಕಿದ್ದಾಳೆ. ಅಲ್ಲದೇ ಇಬ್ಬರು ಸಿಬ್ಬಂದಿ ಮಹಿಳೆಯರನ್ನು ಖರೀದಿಸಲು ವೈದ್ಯರಿಗೆ ಸಹಾಯ ಮಾಡಿದ್ದಾರೆ. ಈ ಹಿಂದೆ ಕೆಲವು ಮಹಿಳೆಯರು ದೂರನ್ನು ಸಹ ನೀಡಿದ್ದರು ಎಂದು ಹೇಳಿಕೊಂಡಿದ್ದಾಳೆ. ಪೊಲೀಸರು ಈ ಯಾವುದೇ ಆರೋಪಗಳನ್ನು ದೃಢಪಡಿಸಿಲ್ಲ.

ವೈದ್ಯ ನೀಡಿದ ದೂರಿನಲ್ಲೇನಿದೆ?
ನರ್ಸ್ ಚಹಾ ತಯಾರಿಸುವ ನೆಪದಲ್ಲಿ ಆಸ್ಪತ್ರೆಯ ನಾಲ್ಕನೇ ಮಹಡಿಯಲ್ಲಿರುವ ತನ್ನ ಖಾಸಗಿ ಕೋಣೆಗೆ ಪ್ರವೇಶಿಸುತ್ತಿದ್ದಳು. ಹೀಗೆ ಒಂದು ದಿನ ತಮ್ಮ ಮೊಬೈಲ್ ಫೋನ್‌ನಿಂದ ವೈಯಕ್ತಿಕ ಫೋಟೋಗಳನ್ನು ತನಗೆ ಅರಿವಿಲ್ಲದಂತೆ ಆಕೆಯ ಮೊಬೈಲ್‌ಗೆ ವರ್ಗಾಯಿಸಿಕೊಂಡಿದ್ದಾಳೆ ಎಂದು ವೈದ್ಯರು ದೂರಿನಲ್ಲಿ ತಿಳಿಸಿದ್ದಾರೆ.

ಆ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡುವುದಾಗಿ, ಸುಳ್ಳು ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಸುವುದಾಗಿ ಮತ್ತು ಹಣ ನೀಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿರುವುದಾಗಿ ವೈದ್ಯರು ಆರೋಪಿಸಿದ್ದಾರೆ.

ತಮ್ಮ ವೈಯಕ್ತಿಕ ಖ್ಯಾತಿ ಮತ್ತು ಆಸ್ಪತ್ರೆಯ ಪ್ರತಿಷ್ಠೆಗೆ ಧಕ್ಕೆಯಾಗಬಹುದೆಂಬ ಭಯದಿಂದ, ವೈದ್ಯರು ಹಲವಾರು ವರ್ಷಗಳಿಂದ ಹಣ ಪಾವತಿ ಮಾಡುತ್ತಲೇ ಬಂದಿರುವುದಾಗಿ ಹೇಳಿಕೊಂಡಿದ್ದಾರೆ.

ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನರ್ಸ್
2020ರ ಬಾರ್ಮರ್ ಪಂಚಾಯತ್ ಸಮಿತಿ ಚುನಾವಣೆಯಲ್ಲಿ ಆರೋಪಿ ಸ್ಪರ್ಧಿಸಿ ಕೇವಲ 58 ಮತಗಳಿಂದ ಸೋತಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಮೂರು ವರ್ಷಗಳಿಂದ ಕಮಲಾ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಈ ಹಿಂದೆ ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಹಲ್ಲೆ ಪ್ರಕರಣವನ್ನು ದಾಖಲಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. 2010 ರಲ್ಲಿ ತನ್ನ ನರ್ಸಿಂಗ್ ಕೋರ್ಸ್ ಪೂರ್ಣಗೊಳಿಸಿ, 2016 ರಲ್ಲಿ ವೈದ್ಯರ ಖಾಸಗಿ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು.


Spread the love

About Laxminews 24x7

Check Also

3 ಲಕ್ಷದವರೆಗೆ ಆದಾಯ ಮಿತಿ ಹೆಚ್ಚಳ – ಸಿಎಂ ಜೊತೆ ಚರ್ಚಿಸಿ ತೀರ್ಮಾನ ಎಂದ ಸಚಿವ ಮುನಿಯಪ್ಪ

Spread the loveಬೆಂಗಳೂರು: ಬಿಪಿಎಲ್  ಕಾರ್ಡ್‌ಗೆ ನಿಗದಿಪಡಿಸಿರುವ ವಾರ್ಷಿಕ ಆದಾಯ ಮಿತಿಯನ್ನು 3 ಲಕ್ಷ ರೂ.ವರೆಗೆ ಹೆಚ್ಚಿಸುವ ಬಗ್ಗೆ ಸರ್ಕಾರದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ