Breaking News

ಅಪರಿಚಿತರಿಂದ ಮನೆ ಮೇಲೆ ಮಾರಕಾಸ್ತ್ರಗಳಿಂದ ಅಟ್ಯಾಕ್ – ಮನೆ ಕಿಟಕಿ, ಕಾರಿನ ಗಾಜು ಪುಡಿಪುಡಿ

Spread the love

ಬೆಂಗಳೂರು: ಕಾರಿನಲ್ಲಿ ಎಂಟ್ರಿ ಕೊಟ್ಟ ನಾಲ್ವರು ದುಷ್ಕರ್ಮಿಗಳು ಮನೆಯೊಂದರ ಮೇಲೆ ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್  ತಾಲೂಕಿನ ಬನ್ನೇರುಘಟ್ಟ ಸಮೀಪದ ಮೈಲಸಂದ್ರ  ದಿಣ್ಣೆಪಾಳ್ಯದಲ್ಲಿ ನಡೆದಿದೆ.

ಅಲ್ಲಿನ ನಿವಾಸಿ ವಿಶ್ವನಾಥ ರೆಡ್ಡಿ ಎಂಬುವವರ ಮನೆ ಮೇಲೆ ದಾಳಿ ನಡೆಸಲಾಗಿದೆ. ಆಗ ತಾನೇ ಊಟ ಮಾಡಿ ಪತ್ನಿ ಮತ್ತು ಸೊಸೆ ಜೊತೆ ಮನೆಯ ಹೊರಗಡೆ ವಿಶ್ವನಾಥ ರೆಡ್ಡಿ ವಿಶ್ರಾಂತಿ ಪಡೆಯುತ್ತಿದ್ದರು. ಆಗ ಕಾರಿನಲ್ಲಿ ಬಂದ ನಾಲ್ವರು ಲಾಂಗು ಮಚ್ಚುಗಳೊಂದಿಗೆ ಮನೆಯತ್ತ ನುಗ್ಗಿದ್ದಾರೆ. ವಿಶ್ವನಾಥ್ ರೆಡ್ಡಿ ಕುಟುಂಬ ಲಾಂಗು ಮಚ್ಚುಗಳನ್ನು ಕಂಡು ಓಡಿ ಹೋಗಿ ಬಾಗಿಲು ಬಂದ್ ಮಾಡಿಕೊಂಡಿದ್ದಾರೆ.

ಈ ವೇಳೆ ಲಾಂಗು ಮಚ್ಚಿನಿಂದ ಬಾಗಿಲು ಧ್ವಂಸಗೊಳಿಸಲು ಯತ್ನಿಸಿದ್ದಾರೆ. ಸಾಧ್ಯವಾಗದಿದ್ದಾಗ ಮನೆಯ ಕಿಟಕಿ ಗಾಜುಗಳನ್ನು ಪುಡಿಗೈದಿದ್ದಾರೆ. ಮನೆ ಮುಂದೆ ನಿಲ್ಲಿಸಿದ್ದ ಇನ್ನೋವಾ ಕಾರಿನ ಗಾಜು ಪುಡಿಪುಡಿ ಮಾಡಿದ್ದಾರೆ. ಬೈಕ್ ಸೇರಿದಂತೆ ಸಿಕ್ಕ ಸಿಕ್ಕ ವಸ್ತುಗಳನ್ನು ನಾಶ ಮಾಡಿದ್ದಾರೆ. ಅಲ್ಲದೆ ಸಮೀಪದ ಬಟ್ಟೆ ಅಂಗಡಿ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದು, ಅಂಗಡಿ ಮಾಲೀಕ ಸೇರಿದಂತೆ ಬೈಕ್ ಸವಾರನ ಮೇಲೆ ಹಲ್ಲೆ ಮಾಡಿ ನಾಲ್ವರು ಎಸ್ಕೇಪ್ ಆಗಿದ್ದಾರೆ.

ಅಪರಿಚಿತರ ದಾಳಿಯಿಂದ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಇನ್ನೂ ಬಾಗಿಲು ಓಪನ್ ಆಗಿದ್ರೆ ಕೊಲೆ ಮಾಡುತ್ತಿದ್ದರು. ಕೊಲೆ ಮಾಡಲು ಬಂದಿದ್ದವರು ಯಾರು ಎಂಬುದು ಗೊತ್ತಿಲ್ಲ. ನಮಗೆ ಯಾರ ಜೊತೆಯೂ ಯಾವುದೇ ದ್ವೇಷ ಇಲ್ಲ ಎಂದು ಮನೆ ಮಾಲೀಕ ವಿಶ್ವನಾಥ ರೆಡ್ಡಿ ತಿಳಿಸಿದ್ದಾರೆ.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ