Breaking News

9 ಕ್ಕೂ ಅಧಿಕ ಪ್ರಕರಣಗಳಲ್ಲಿ ಭಾಗಿ ಆಗಿದ್ದ ರೌಡಿ ಶೀಟರ್‌ನ ಬಂಧನ

Spread the love

ಬೆಳಗಾವಿ: 9 ಕ್ಕೂ ಅಧಿಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಖತರ್ನಾಕ್ ರೌಡಿ ಶೀಟರ್ ಓರ್ವನನ್ನು ಬೆಳಗಾವಿ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

ಬಾಳೇಶ @ ಬಾಳಪ್ಪ ಮಹಾದೇವಪ್ಪ ಹೊಂಡಪ್ಪನವರ (26) ಬಂಧಿತ ಆರೋಪಿ. ಇತನ ಮೇಲೆ 2 ರಾಬರಿ ಪ್ರಕರಣ, 1 ದರೋಡೆ ಪ್ರಕರಣ, 1 ಕೊಲೆ ಪ್ರಯತ್ನ ಪ್ರಕರಣ,1 ಜೂಜಾಟ ಪ್ರಕರಣ, 1 ಅಪಹರಣ ಪ್ರಕರಣ ಮತ್ತು ಎಸ್ ಸಿ ಎಸ್‌ಟಿ ದೌರ್ಜನ್ಯ ಪ್ರಕರಣ, 1 ಕೊಲೆ ಪ್ರಕರಣ, 1 ಖೋಟಾ ನೋಟ ಚಲಾವಣೆ ಪ್ರಕರಣ, 1 ಬಲವಂತದ ಸುಲಿಗೆ, ಸಾಕ್ಷ್ಯ ನಾಶ, (ಹನಿ ಟ್ರ್ಯಾಪಿಂಗ್) ಹಾಗೂ 12 ಮುಂಜಾಗೃತಾ ಕ್ರಮ ಪ್ರಕರಣಗಳಲ್ಲಿ ಈತ ಭಾಗಿ ಆಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕ ಸುರಕ್ಷತೆ ಹಾಗೂ ನೇಮ್ಮದಿ ಶಾಂತಿಗೆ ಹಾಗೂ ಸಾರಕು ಸಾಗಾಟಕ್ಕೆ ತೊಡಕಾಗುವಂತೆ ಚಟುವಟಿಕೆಯಲ್ಲಿ ತೊಡಗಿದ್ದ. ಆರೋಪಿ ಮೇಲೆ ದಾಖಲಾದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಬೆಳಗಾವಿ ಮುರಗೋಡ ಪೊಲೀಸ್ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.


Spread the love

About Laxminews 24x7

Check Also

ಎಲ್ ನಿನೋ ಎಫೆಕ್ಟ್ – ರಾಜ್ಯದ 25 ಜಿಲ್ಲೆಗಳಲ್ಲಿ ಮಳೆ ಕೊರತೆ

Spread the loveಬೆಂಗಳೂರು: ಎಲ್‌ನಿನೋ ಎಫೆಕ್ಟ್‌ನಿಂದ ರಾಜ್ಯದಲ್ಲಿ ಮಳೆ ಕೊರತೆಯಾಗಿದೆ. ದಕ್ಷಿಣ ಕನ್ನಡ, ಮೈಸೂರು, ಕೊಡಗು, ಉತ್ತರ ಕನ್ನಡ, ಉಡುಪಿ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ