Breaking News

`ಜನನಾಯಗನ್’ ರಿಲೀಸ್‌ಗೆ ಕೌಂಟ್‌ಡೌನ್ – ಮತ್ತೊಂದು ಮಾಸ್ ವಿಜಯೋತ್ಸವಕ್ಕೆ ಸಜ್ಜಾದ್ರು ಫ್ಯಾನ್ಸ್

Spread the love

ತಮಿಳುನಾಡಿನ ಮುಖ್ಯಮಂತ್ರಿಯಾಗಿ ದಳಪತಿ ವಿಜಯ್  ಪದಗ್ರಹಣ ಮಾಡಿದ್ದಾಯ್ತು. ಇದೀಗ ರಾಜಕೀಯದಲ್ಲಿ ವಿಜಯ್ ಪರ್ವ ಶುರುವಾಗಿದೆ. ಹಾಗಂತ ಸಿನಿಮಾ ಫ್ಯಾನ್ಸ್‌ಗೆ ನಿರಾಸೆ ಮಾಡುತ್ತಿಲ್ಲ ವಿಜಯ್. ಇದೀಗ ʼಜನನಾಯಗನ್ʼ ಚಿತ್ರ  ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಈ ಮೂಲಕ ಮತ್ತೊಂದ್ ಮಾಸ್ ವಿಜಯೋತ್ಸವಕ್ಕೆ ಫ್ಯಾನ್ಸ್ ಸಜ್ಜಾಗುತ್ತಿದ್ದಾರೆ.

`ಸಿ ಜೋಸೆಫ್ ವಿಜಯ್ ಎಂಬ ನಾನು’ ಎಂದು ವಿಜಯ್ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಂತೆ ಕಾರ್ಯಕರ್ತರ ಹರ್ಷದ ಕಟ್ಟೆ ಒಡೆದಿದೆ. ಸಿನಿಮಾ ಸ್ಟೈಲ್ ಅನ್ನ ನಿಜ ಮಾಡಿದ ವಿಜಯ್ ಮೇಲೆ ಭರವಸೆಯ ಮಹಾಪೂರವೇ ಇದೆ. ಸದ್ಯಕ್ಕೆ ಇಡೀ ದೇಶ ವಿಜಯ್ ಆಳ್ವಿಕೆ ನೋಡಲು ಕಾದಿದೆ.

ರಾಜಕೀಯದ ಯುಗಾರಂಭ ಶುರು ಮಾಡಿದ್ದಾರೆ ವಿಜಯ್. ಹೀಗಂತ ಡೈಹಾರ್ಡ್ ಸಿನಿಮಾ ಫ್ಯಾನ್ಸ್ ನಿರಾಸೆ ಆಗಬೇಕಿಲ್ಲ. ಶೀಘ್ರದಲ್ಲೇ ವಿಜಯ್ ಕಟ್ಟ ಕಡೆಯ ಚಿತ್ರ ಎಂದು ಘೋಷಿಸಿರುವ ಜನನಾಯಗನ್ ಚಿತ್ರ ರಿಲೀಸ್ ಆಗಲಿದೆ.

ಪಕ್ಷ ಘೋಷಣೆ ಮಾಡಿ ರಾಜಕೀಯದಲ್ಲಿ ಸಕ್ರಿಯವಾಗಿದ್ದಾಗಲೇ ವಿಜಯ್ ಜನನಾಯಗನ್ ಚಿತ್ರ ಮಾಡಿದ್ದರು. ಇದು ಕನ್ನಡ ಮೂಲದ ಚಿತ್ರ ನಿರ್ಮಾಣ ಸಂಸ್ಥೆ ವೆಂಕಟ್ ನಾರಾಯಣ್ ನಿರ್ಮಾಣದ ಬಿಗ್ ಪ್ರಾಜೆಕ್ಟ್ ಚಿತ್ರವಾಗಿದೆ. ಕಳೆದ ಜನವರಿ 9 ರಂದೇ ಚಿತ್ರ ತೆರೆಕಾಣಬೇಕಿತ್ತು. ಆದರೆ ಈ ಚಿತ್ರವು ಜನರ ಮೇಲೆ ಪ್ರಭಾವ ಬೀರಿ ವಿಜಯ್‌ಗೆ ಪ್ಲಸ್ ಆಗಬಹುದು ಅನ್ನೋ ಕಾರಣಕ್ಕೆ ಹಿಂದಿನ ಸರ್ಕಾರದ ಕೈವಾಡದಲ್ಲಿ ಸೆನ್ಸಾರ್ ಆಗದೆ ಉಳಿದಿತ್ತು. ಹಲವು ಬಾರಿ ಸೆನ್ಸಾರ್ ಮಂಡಳಿ ಕದ ತಟ್ಟಿದ್ದರೂ ಕಾರಣಗಳನ್ನ ಕೊಟ್ಟು ಸೆನ್ಸಾರ್ ಮಂಡಳಿ ನಿರಾಕರಿಸಿತ್ತು. ಇದುವರೆಗೂ ಜನನಾಯಗನ್ ಸೆನ್ಸಾರ್ ಆಗಿಲ್ಲ. ಆದರೆ ಇದೀಗ ವಿಜಯ್ ಸರ್ಕಾರವೇ ರಚನೆ ಆಗಿದೆ.

ವಿಜಯ್ ಕೊನೆಯ ಚಿತ್ರ ಜನನಾಯಗನ್‌ಗೆ ಎದುರಾಗಿದ್ದ ವಿಘ್ನಗಳು ಅಷ್ಟಿಷ್ಟಾಗಿರಲಿಲ್ಲ. ಡಿಸ್ಟ್ರಿಬ್ಯೂಷನ್ ಹಕ್ಕುಗಳು ಸೇಲ್ ಆಗಿತ್ತು, ಓಟಿಟಿ ರೈಟ್ಸ್ ಕೂಡ ಆಗಿತ್ತು, ಹೀಗಿದ್ರೂ ಸಿನಿಮಾ ರಿಲೀಸ್ ಆಗದೆ ಉಳಿದುಬಿಟ್ಟಿತು. ಎಲೆಕ್ಷನ್‌ಗೂ ಮುನ್ನ ರಿಲೀಸ್ ಮಾಡಬೇಕು ಅನ್ನೋದು ಚಿತ್ರತಂಡ ಹಾಗೂ ವಿಜಯ್ ಪ್ಲ್ಯಾನ್ ಆಗಿತ್ತು. ಆದರೆ ರಾಜಕೀಯ ವಿಡಂಬನೆ, ನಾಯಕತ್ವ ಒಳಗೊಂಡ ಕಥೆಯ ಆಳ ಅರಿತ ಹಿಂದಿನ ಸರ್ಕಾರವೇ ಉದ್ದೇಶಪೂರ್ವಕವಾಗಿ ಷಡ್ಯಂತ್ರ ಮಾಡಿದೆ ಎನ್ನಲಾಗಿತ್ತು. ಈ ನಡುವೆ ಸಿನಿಮಾವನ್ನೂ ಲೀಕ್ ಮಾಡಲಾಯಿತು. ಇಷ್ಟೆಲ್ಲಾ ಆದಮೇಲೂ ಫ್ಯಾನ್ಸ್‌ಗೆ ಶುಭ ಸಮಯ ಬಂದಿದೆ. ಇದೀಗ ವಿಜಯ್ ಸಿನಿಮಾ ಜನನಾಯಗನ್‌ಗೆ ಎದುರಾಗಿದ್ದ ಅಡೆತಡೆ ಇಲ್ಲವಾಗಿದೆ. ಶೀಘ್ರದಲ್ಲೇ ಸೆನ್ಸಾರ್ ಆಗುವ ಜನನಾಯಗನ್ ಇದೇ ತಿಂಗಳು ಕೊನೆ ಅಥವಾ ಜೂನ್‌ನಲ್ಲಿ ತೆರೆ ಕಾಣುವ ಸಾಧ್ಯತೆ ಇದೆ.

ವಿಜಯ್ ಜೊತೆಯಲ್ಲೇ ಇರುವ ನಿರ್ಮಾಪಕ ವೆಂಕಟ್ ನಾರಾಯಣ್ ಸಿನಿಮಾ ಸೆನ್ಸಾರ್ ಮಾಡಿಯೇ ವಾಪಸ್ ಬರುವ ಸೂಚನೆ ಕಂಡುಬಂದಿದೆ. ವಿಜಯ್ ಸಿನಿಮಾ ಬಂದಿಲ್ಲ ಎಂದು ನಿರಾಸೆಯಿಂದಿದ್ದ ಫ್ಯಾನ್ಸ್‌ಗೂ ಈಗ ಹೊಸ ಉತ್ಸಾಹ ಬಂದಿದೆ. ಇದೀಗ ವಿಜಯ್ ಮುಖ್ಯಮಂತ್ರಿ ಸ್ಥಾನಕ್ಕೆ ಪದಗ್ರಹಣ ಮಾಡಿರೋ ಸಂಭ್ರಮವನ್ನ ಸೆಲೆಬ್ರೆಟ್ ಮಾಡ್ತಿರೋ ಫ್ಯಾನ್ಸ್ ಶೀಘ್ರದಲ್ಲೇ ಮತ್ತೊಂದು ಮಾಸ್ ವಿಜಯೋತ್ಸವಕ್ಕೆ ಸಜ್ಜಾಗುತ್ತಿದ್ದಾರೆ. ಜನನಾಯಗನ್ ರಿಲೀಸ್ ಆದಮೇಲೆ ಥಿಯೇಟರ್ ಹಬ್ಬ, ಬಾಕ್ಸಾಫೀಸ್ ಬ್ಲಾಸ್ಟ್, ದಾಖಲೆಗಳು ಉಡೀಸ್ ಆಗೋದು ಗ್ಯಾರಂಟಿ ಎನ್ನಲಾಗುತ್ತಿದೆ.


Spread the love

About Laxminews 24x7

Check Also

ಬರಪೀಡಿತ ಎಂದು ಘೋಷಿಸದ್ದಕ್ಕೆ ರಾಜೀನಾಮೆ ಸಲ್ಲಿಸಿದೆ – ಕ್ಷೇತ್ರದ ಜನರಿಗಾಗಿ ರಾಜಕೀಯ ನಿವೃತ್ತಿಗೂ ಸಿದ್ಧ: ಯಶವಂತರಾಯಗೌಡ

Spread the loveವಿಜಂಯಪುರ: 188 ತಾಲೂಕುಗಳು ಘೋಷಣೆ ಆದಾಗಲೂ, ವಿಜಯಪುರ ಜಿಲ್ಲೆಯ 13 ತಾಲೂಕುಗಳ ಪೈಕಿ 11 ಘೋಷಣೆ ಆದರೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ