Breaking News

ಬಿಎಸ್ಎಫ್ ಯೋಧರ ಭವಿಷ್ಯದ ಜೊತೆ ಚೆಲ್ಲಾಟ: ತರಬೇತಿ ಮುಗಿದ ಬೆನ್ನಲ್ಲೇ ನೂರಾರು ಯುವಕರು ಮನೆಗೆ; ಡಾ.ಗಿರಿರಾಜ್ ಎನ್.ಶಿಂಧೆ

Spread the love

ಬಿಎಸ್ಎಫ್ ನಲ್ಲಿ ಕರೆಯಲಾದ 2023ರ ಹುದ್ದೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ತರಬೇತಿ ಪಡೆದ ಬಳಿಕ ಅರ್ಹತೆ ಪತ್ರ ತಿರಸ್ಕಾರವಾಗಿದೆ ಎಂದು ಸಾಕಷ್ಟು ಅಭ್ಯರ್ಥಿಗಳಿಗೆ ಸೇವೆಯಿಂದ ಬಿಡುಗಡೆ ಮಾಡಿ ವಂಚನೆಯಾಗಿದೆ ಎಂದು ಡಾ.ಗಿರಿರಾಜ್ ಎನ್.ಶಿಂಧೆ ಹೇಳಿದರು.

ಬುಧವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಕ್ಕಳು ಅರ್ಹತೆ ಪತ್ರದಿಂದ ನೇಮಕವಾಗಿಲ್ಲ. ಸಾಕಷ್ಟು ಶ್ರಮ ಪಟ್ಟು ಎಲ್ಲ ಪರೀಕ್ಷೆಯಲ್ಲಿ ನೇಮಕವಾಗಿರುತ್ತಾರೆ. ಆದರೆ ಸ್ಕೀಲ್ ಸರ್ಟಿಫಿಕೇಟ್ ಸಲುವಾಗಿ ಅವರನ್ನು ಸೇವೆಯನ್ನು ತೆಗೆದುಹಾಕುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಕಳೆದ ಎರಡು ವರ್ಷಗಳಿಂದ ಸೇವೆ ಸಲ್ಲಿಸಿರುವ ಅಭ್ಯರ್ಥಿಗಳನ್ನು ತಿರಸ್ಕಾರ ಮಾಡಿ ನೂರಾರು ಯುವಕರು ಬೀದಿಪಾಲಾಗಿದ್ದಾರೆ. ಸರಕಾರ ಕೂಡಲೇ ಇವರನ್ನು ಕೌನ್ಸಿಲಿಂಗ್ ಮಾಡಿ ಅವರನ್ನು ಮರು ನೇಮಕ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಬಡ ಯುವಕರಿಗೆ ಅನ್ಯಾಯವಾಗಬಾರದು. ಕೇಂದ್ರ ಸರಕಾರ ತಾಂತ್ರಿಕ ಕಾರಣದಿಂದ ಸ್ಕೀಲ್ ಸರ್ಟಿಫಿಕೇಟ್ ‌ನಿಂದ ಮಾತ್ರ ಅವರನ್ನು ಹುದ್ದೆಯನ್ನು ವಜಾ ಮಾಡಬಾರದು ಎಂದರು.


Spread the love

About Laxminews 24x7

Check Also

ಬೆಳಗಾವಿ GTTC ಡಿಪ್ಲೋಮಾ ಪ್ರವೇಶಕ್ಕೆ ಮೇ 10 ಕೊನೆಯ ದಿನ

Spread the loveತಾಂತ್ರಿಕ ಶಿಕ್ಷಣದ ಸುವರ್ಣ ಅವಕಾಶ ಬಳಸಿಕೊಳ್ಳಲು ಪ್ರಾಚಾರ್ಯ ಯಲ್ಲಪ್ಪ ಸವದತ್ತಿ ಕರೆ ಜಿಟಿಟಿಸಿ ಡಿಪ್ಲೋಮಾ ಪ್ರವೇಶಕ್ಕೆ ಮುಹೂರ್ತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ