Breaking News

ಬಂಗಾಳ ಫಲಿತಾಂಶದಿಂದ ಬಾಂಗ್ಲಾ, ಪಾಕಿಸ್ತಾನಕ್ಕೆ ಆಘಾತ: ಆರ್.ಅಶೋಕ್

Spread the love

ಬೆಂಗಳೂರು: ಬಂಗಾಳ ಫಲಿತಾಂಶದಿಂದ ಬಾಂಗ್ಲಾ, ಪಾಕಿಸ್ತಾನಕ್ಕೆ ಆಘಾತವಾಗಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಚೇರಿ ಜಗನ್ನಾಥ ಭವನದಲ್ಲಿ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಇಂದು ಸುದಿನ. ಪ್ರಮುಖವಾಗಿ ಪಶ್ಚಿಮ ಬಂಗಾಳ ಚುನಾವಣೆ ದೇಶದ ಗಮನ ಸೆಳೆಯುತ್ತಿದೆ. ಅಸ್ಸಾಂ, ಪುದುಚೇರಿ ಮತ್ತು ಬಂಗಾಳದಲ್ಲಿ ಬಿಜೆಪಿಗೆ ದೊಡ್ಡ ಮಟ್ಟದಲ್ಲಿ ಬಹುಮತ ಬರುತ್ತಿದೆ. ಪರಿಣಾಮ ಡಿಎಂಕೆ ಹತಾಶ ಮನೋಭಾವದಲ್ಲಿ ಗೂಡು ಸೇರಿದ್ದಾರೆ ಎಂದು ಕುಟುಕಿದರು.

ಮೋದಿ ಮೂರು ಬಾರಿ ಪ್ರಧಾನಿ ಆಗಿದ್ದಾರೆ. ಬಿಜೆಪಿ ದೊಡ್ಡ ಅಲೆ ದೇಶದಲ್ಲಿದೆ ಅನ್ನೋದು ಸಾಬೀತಾಗಿದೆ. ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲಾಗಿದೆ ಎಂದು ಟಾಂಗ್ ಕೊಟ್ಟರು.

ಮಮತಾ ಬ್ಯಾನರ್ಜಿ  ಅವರು ದೇಶದ್ರೋಹಿಗಳಿಗೆ ಬಾಗಿಲು ತೆರೆದುಕೊಟ್ಟಿದ್ದರು. ಆದರೆ ಇಂದಿನ ಫಲಿತಾಂಶ ದೇಶದ ಭದ್ರತೆಗೆ ಸುವರ್ಣ ಹಾದಿ ಮಾಡಿಕೊಟ್ಟಿದೆ. ಕೇರಳದಲ್ಲಿ ಬಿಜೆಪಿ ತನ್ನ ಖಾತೆ ಪ್ರಾರಂಭ ಮಾಡಲಿದೆ. ಬಂಗಾಳ ಮತ್ತು ಅಸ್ಸಾಂನಲ್ಲಿ ಬಿಜೆಪಿ ಸಾಧಿಸಿರುವ ಮುನ್ನಡೆ ಪ್ರಮುಖವಾಗಿದೆ ಎಂದರು.

ಬಾಗಲಕೋಟೆ ಚುನಾವಣೆಯಲ್ಲಿ ಕಾಂಗ್ರೆಸ್ ಹಣದ ಹೊಳೆ ಹರಿಸಿದೆ ಮತ್ತು ರೌಡಿಸಂ ಮೂಲಕ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ. ರೆಸಾರ್ಟ್‌ಗಳಲ್ಲಿ ಹಣ ಹಂಚಿರುವ ದಾಖಲೆ ಸಂಗ್ರಹಿಸ್ತಿದ್ದೇವೆ ಎಂದು ಅಶೋಕ್ ದೂರಿದರು.

ಕಾಂಗ್ರೆಸ್ ಪಕ್ಷವು ಮುಸ್ಲಿಮರ ಬೆನ್ನಿಗೆ ಚೂರಿ ಹಾಕಿದೆ. ಮುಸ್ಲಿಂ ಸಮುದಾಯವು ಈಗ ಕಾಂಗ್ರೆಸ್‌ಗೆ ಎಚ್ಚರಿಕೆ ಗಂಟೆ ಬಾರಿಸಿದೆ. ಇತ್ತ ಡಿ.ಕೆ. ಶಿವಕುಮಾರ್ ಅವರು ಹೋದ ಕಡೆಯಲ್ಲೆಲ್ಲಾ ಕಾಂಗ್ರೆಸ್ ಎಡವಿ ಬೀಳುತ್ತಿದೆ. ಗೆಲ್ಲುವ ಕಡೆ ಜಮೀರ್ ಅಹ್ಮದ್ ಅವರನ್ನು ಕಳುಹಿಸಿ, ಸೋಲುವ ಕಡೆ ಡಿಕೆಶಿಯವರನ್ನು ಕಳುಹಿಸುವ ಮೂಲಕ ಅವರನ್ನು ತುಳಿಯುವ ತಂತ್ರ ನಡೆಯುತ್ತಿದೆ ಎಂದು ಮಾತನಾಡಿದರು. ಚುನಾವಣಾ ಫಲಿತಾಂಶ ಮುನ್ನಡೆಯ ಹಿನ್ನಲೆ ಪ್ರಧಾನಿ ಮೋದಿ, ರಾಷ್ಟ್ರೀಯ ಅಧ್ಯಕ್ಷರು ನಿತಿನ್ ನಬಿನ್ ಮತ್ತು ಅಮಿತ್ ಶಾ ಅವರಿಗೆ ಆರ್.ಅಶೋಕ್ ಧನ್ಯವಾದ ಹೇಳಿದರು


Spread the love

About Laxminews 24x7

Check Also

ಉತ್ತಮ ಆಹಾರ ಪದ್ಧತಿ ರೂಢಿಸಿಕೊಳ್ಳಿ

Spread the loveಬೆಳಗಾವಿ: ಆಹಾರ ಪದಾರ್ಥಗಳಿಗೆ ರಾಸಾಯನಿಕ ಬಳಸುತ್ತಿರುವುದರಿಂದ ಹಲವು  ರೋಗ ಬರುತ್ತಿವೆ. ಮುಖ್ಯವಾಗಿ ಕ್ಯಾನ್ಸರ್‌ನಂತಹ ಮಾರಕ ರೋಗ ದಿನದಿಂದ ದಿನಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ