Breaking News

ನಮ್ಮ ‘ಮಸಾಲ ದೋಸೆ’ ಈಗ ವಿಶ್ವ ವಿಜೇತ! ಕನ್ನಡಿಗರ ನೆಚ್ಚಿನ ತಿಂಡಿಗೆ ಜಾಗತಿಕ ಮನ್ನಣೆ! 

Spread the love

ದೋಸೆ ಪ್ರಿಯರೇ, ಸಂಭ್ರಮಿಸಲು ಇಲ್ಲಿದೆ ಒಂದು ಅದ್ಭುತ ಸುದ್ದಿ! ವಿಶ್ವದ ‘ಟಾಪ್ 50 ಅತ್ಯುತ್ತಮ ಪ್ಯಾನ್‌ಕೇಕ್‌ಗಳ’ ಪಟ್ಟಿಯಲ್ಲಿ ನಮ್ಮ ಹೆಮ್ಮೆಯ ಮಸಾಲ ದೋಸೆ ಮತ್ತು ಪೇಪರ್ ದೋಸೆ ಭರ್ಜರಿಯಾಗಿ ಸ್ಥಾನ ಪಡೆದಿವೆ!

ಏನಿದು ವಿಶೇಷ?
ಖ್ಯಾತ ಆಹಾರ ವಿಶ್ಲೇಷಣಾ ಸಂಸ್ಥೆ ‘ಟೇಸ್ಟ್ ಅಟ್ಲಾಸ್’ (TasteAtlas) ಬಿಡುಗಡೆ ಮಾಡಿರುವ ವಿಶ್ವದ ಅತ್ಯುತ್ತಮ ಪ್ಯಾನ್‌ಕೇಕ್‌ಗಳ ಪಟ್ಟಿಯಲ್ಲಿ ಭಾರತದ ದೋಸೆಗಳು ಜಗತ್ತಿನ ದಿಗ್ಗಜ ಆಹಾರ ಪದಾರ್ಥಗಳಿಗೆ ಫೈಟ್ ನೀಡಿ ಟಾಪ್ ಲಿಸ್ಟ್ ಸೇರಿವೆ.

ಪಟ್ಟಿಯಲ್ಲಿ ನಮ್ಮವರ ಹವಾ :

ಮಸಾಲ ದೋಸೆ: ಆಲೂಗಡ್ಡೆ ಪಲ್ಯ, ತುಪ್ಪದ ಘಮ ಹಾಗೂ ಕೆಂಪು ಚಟ್ನಿಯ ಮಸಾಲೆಯೊಂದಿಗೆ ವಿಶ್ವದಾದ್ಯಂತ ಫೇಮಸ್ ಆಗಿದೆ.

ಪೇಪರ್ ದೋಸೆ: ತನ್ನ ಕುರುಕುಲು ರುಚಿ ಮತ್ತು ಹರಡಿಕೊಂಡ ಆಕಾರದಿಂದ ವಿದೇಶಿಯರ ಮನ ಗೆದ್ದಿದೆ.

ನಮ್ಮ ಹೆಮ್ಮೆ:
ಬೆಂಗಳೂರಿನ ಎಂ.ಟಿ.ಆರ್ (MTR), ವಿದ್ಯಾರ್ಥಿ ಭವನದಿಂದ ಹಿಡಿದು ಹಾದಿ ಬದಿಯ ಸಣ್ಣ ಗಾಡಿಯವರೆಗೆ ನಾವು ಸವಿಯುವ ಈ ದೋಸೆ ಇಂದು ‘ಗ್ಲೋಬಲ್ ಸ್ಟಾರ್’! ಅಮೇರಿಕಾ, ಯುರೋಪ್ ಇರಲಿ ಅಥವಾ ಆಸ್ಟ್ರೇಲಿಯಾ ಇರಲಿ.. ದೋಸೆಯ ಮ್ಯಾಜಿಕ್ ಎಲ್ಲೆಡೆ ಸಾಗಿದೆ.


Spread the love

About Laxminews 24x7

Check Also

ಮೂರು ಮಕ್ಕಳ ತಾಯಿಯನ್ನು ಕತ್ತು ಸೀಳಿ ಕೊಂದ ಪ್ರಿಯಕರ

Spread the loveದಾವಣಗೆರೆ: ವ್ಯಕ್ತಿಯೊಬ್ಬ ಪ್ರಿಯತಮೆಯ ಕತ್ತು ಸೀಳಿ ಹತ್ಯೆಗೈದ  ಘಟನೆ ದಾವಣಗೆರೆಯ  ಶೇಖರಪ್ಪ ನಗರದಲ್ಲಿ ನಡೆದಿದೆ. ನಾಗರತ್ನ (45) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ