Breaking News

ಗಂಡ, ಮಕ್ಕಳಿಗೆ ನಿದ್ದೆ ಮಾತ್ರೆ ಕೊಟ್ಟು, ಕಸ ಹಾಕಿ ಬರ್ತೀನಿ ಅಂತ ಹೇಳಿ ಪ್ರಿಯಕರನ ಜೊತೆ ಪರಾರಿ…!

Spread the love

ಬೆಂಗಳೂರು: ಮನೆಯಲ್ಲಿದ್ದ ಕಸವನ್ನು ಎಸೆದು ಬರುತ್ತೇನೆ ಎಂದು ಹೇಳಿ ಹೊರಟ ಮಹಿಳೆ, ಬಳಿಕ ಪ್ರಿಯಕರನ ಜೊತೆ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ. ಪ್ರಿಯಾಂಕಾ ಎಂಬ ಯುವತಿ ತನ್ನ ಗಂಡ ಶರತ್ ಕುಮಾರ್ ಹಾಗೂ ಮಕ್ಕಳಿಗೆ ಊಟದಲ್ಲಿ ನಿದ್ದೆ ಮಾತ್ರೆ ನೀಡಿ, ರಾತ್ರಿ ವೇಳೆ ಮನೆಯಿಂದ ಓಡಿ ಹೋಗಿದ್ದಾರೆ.‌

ಮಾಹಿತಿ ಪ್ರಕಾರ, ಪ್ರಿಯಾಂಕಾಗೆ ಕೆಲವೇ ದಿನಗಳ ಹಿಂದೆ ಕಟಿಂಗ್ ಶಾಪ್ ನಡೆಸುತ್ತಿದ್ದ ಪ್ರಭು ಎಂಬಾತನೊಂದಿಗೆ ಪರಿಚಯವಾಗಿತ್ತು. ದಿನಗಳು ಕಳೆದಂತೆ ಇಬ್ಬರ ನಡುವಿನ ಸ್ನೇಹ ಪ್ರೇಮಕ್ಕೆ ತಿರುಗಿ, ಗಾಢ ಸಂಬಂಧ ಬೆಳೆದಿತ್ತು ಎನ್ನಲಾಗಿದೆ. ಗಂಡ ಕೆಲಸಕ್ಕೆ ಹೋಗುತ್ತಿದ್ದ ಸಮಯದಲ್ಲಿ ಪ್ರಿಯಾಂಕಾ ಮತ್ತು ಪ್ರಭು ಭೇಟಿಯಾಗುತ್ತಿದ್ದರು ಎಂಬುದೂ ತಿಳಿದುಬಂದಿದೆ.

ಇದಲ್ಲದೆ, ಪ್ರಭು ಪ್ರಿಯಾಂಕಾ ಮೊಬೈಲ್‌ಗೆ ರಿಚಾರ್ಜ್ ಮಾಡುತ್ತಿದ್ದ ವಿಚಾರವನ್ನು ಗಮನಿಸಿದ ಪತಿ ಶರತ್ ಕುಮಾರ್, ಈ ಸಂಬಂಧದ ಬಗ್ಗೆ ಪತ್ನಿಗೆ ಹಲವಾರು ಬಾರಿ ಎಚ್ಚರಿಕೆ ನೀಡಿದ್ದಾನೆ. ಆದರೂ, ಪ್ರಿಯಾಂಕಾ ತನ್ನ ಪ್ರಿಯಕರನೊಂದಿಗೆ ಓಡಿ ಹೋಗಿದ್ದಾಳೆ ಎಂದು ಶರತ್ ಆರೋಪಿಸಿದ್ದಾನೆ.

ಮೇ 11ರ ರಾತ್ರಿ 11.57ರ ಸುಮಾರಿಗೆ, ಒಂದು ಕೈಯಲ್ಲಿ ಕಸದ ಬಕೆಟ್ ಮತ್ತು ಇನ್ನೊಂದು ಕೈಯಲ್ಲಿ ಬ್ಯಾಗ್ ಹಿಡಿದು ಮನೆ ಬಿಟ್ಟಿರುವ ಪ್ರಿಯಾಂಕಾ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವೇಳೆ, ಗಂಡ ಮತ್ತು ಮಕ್ಕಳಿಗೆ ಊಟದಲ್ಲಿ ನಿದ್ದೆ ಮಾತ್ರೆ ಹಾಕಿದ್ದರಿಂದ, ಅವರು ಮಂಪರಿನಲ್ಲೇ ಇದ್ದರು ಎನ್ನಲಾಗಿದೆ.

ಪತ್ನಿ ಕಾಣದ ಹಿನ್ನೆಲೆಯಲ್ಲಿ, ನಿದ್ದೆಯಲ್ಲೇ ಹುಡುಕಾಟ ನಡೆಸಿದ ಶರತ್ ಕುಮಾರ್, ಬಳಿಕ ಬಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.


Spread the love

About Laxminews 24x7

Check Also

ಮೂರು ಮಕ್ಕಳ ತಾಯಿಯನ್ನು ಕತ್ತು ಸೀಳಿ ಕೊಂದ ಪ್ರಿಯಕರ

Spread the loveದಾವಣಗೆರೆ: ವ್ಯಕ್ತಿಯೊಬ್ಬ ಪ್ರಿಯತಮೆಯ ಕತ್ತು ಸೀಳಿ ಹತ್ಯೆಗೈದ  ಘಟನೆ ದಾವಣಗೆರೆಯ  ಶೇಖರಪ್ಪ ನಗರದಲ್ಲಿ ನಡೆದಿದೆ. ನಾಗರತ್ನ (45) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ