ರಾಜಾಜಿನಗರ ವಿಧಾನಸಭಾ ಕ್ಷೇತ್ರ: ಬಸವೇಶ್ವರನಗರ ಬಸವ ಬಳಗದ , ಕಂಬಿ ಸಿದ್ದರಾಮಣ್ಣ ವಿದ್ಯಾರ್ಥಿ ನಿಲಯದಲ್ಲಿ ವತಿಯಿಂದ ಕಾಯಕ ಯೋಗಿ ಶ್ರೀ ಬಸವೇಶ್ವರ ಜಯಂತಿ ಮತ್ತು ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ 119ನೇ ಜನ್ಮದಿನಾಚರಣೆ ಅಚರಣೆ. ಕಂಬಿ ಸಿದ್ದರಾಮಣ್ಣ ವಸತಿ ನಿಲಯದಿಂದ ಶ್ರೀ ಬಸವೇಶ್ವರರು, ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿರವರ ಮೂರ್ತಿಗಳನ್ನು ಭವ್ಯ ಮರವಣಿಗೆಯಲ್ಲಿ ಬಸವೇಶ್ವರನಗರ, ಅಂಬೇಡ್ಕರ್ ಕ್ರೀಡಾಂಗಣದ ಮೂಲಕ, ಮಂಜನಾಥನಗರ, ಮೋದಿ ವೃತ್ತದಿಂದ ಸ್ವಾತಿ ಹೋಟೆಲ್ ಮೇಲು ಸೇತುವೆ ಬಳಿ ಬಸವೇಶ್ವರ ಪ್ರತಿಮೆ ಹತ್ತಿರ ಭವ್ಯ ರಥಯಾತ್ರೆ ಸಾಗಿತು. ವೀರ ಗಾಸೆ, ಕಂಸಾಳೆ ಮತ್ತು ವಿವಿಧ ಕಲಾತಂಡಗಳು ಭಾಗವಹಿಸಿದ್ದರು. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪರವರು ಮತ್ತು ಸುಪುತ್ರಿಯರು, ಕೇಂದ್ರ ಸಚಿವೆ ಶೋಭ ಕರಾಂದ್ಲಾಜೆ, ಮಾಜಿ ಸಚಿವರು, ಶಾಸಕರುಗಳಾದ ಎಸ್.ಸುರೇಶ್ ಕುಮಾರ್ , ಕೆ.ಗೋಪಾಲಯ್ಯರವರು ಬಸವೇಶ್ವರರು, ಶ್ರೀ ಶಿವಕುಮಾರ ಮಹಾಸ್ವಾಮೀಜಿರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಕ್ರಾಂತಿಯೋಗಿ ಬಸವೇಶ್ವರರ ಮತ್ತು ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಜೀವನ ಚಿರಿತ್ರೆ ಮತ್ತು ವಚನಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಿದರು. ಮಾಜಿ ಮಹಾಪೌರರಾದ ಶ್ರೀಮತಿ ಗಂಗಾಬಿಕೆ ಮಲ್ಲಿಕಾರ್ಜನ್, ಉಪಮಹಾಪೌರರುಗಳಾದ ರಂಗಣ್ಣ, ಬಿ.ಎಸ್.ಪುಟ್ಟರಾಜು, ನಿವೃತ್ತ ಐ.ಎಎಸ್.ಅಧಿಕಾರಿ ಸಿ.ಸೋಮಶೇಖರ್, ಕೇಂದ್ರ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಸಪ್ತಗಿರಿಗೌಡರು, ಬಿಜೆಪಿ ಮುಖಂಡ ಮಲ್ಲಿಕಾರ್ಜನಯ್ಯ, ಸಮಾಜ ಮುಖಂಡರಾದ ಪಾಲನೇತ್ರ, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾಧ್ಯಕ್ಷ ನವೀನ್ ಕುಮಾರ್ ಬಿಡದಿ, ಮಾಜಿ ಪಾಲಿಕೆ ಸದಸ್ಯರುಗಳಾದ ರಾಜಣ್ಣ, ರಾಜೇಂದ್ರಕುಮಾರ್, ಹೆಚ್.ಆರ್.ಕೃಷ್ಣಪ್ಪ, ಪ್ರತಿಮಾ, ಮಂಡಲದ ಅಧ್ಯಕ್ಷ ಸುದರ್ಶನ್ ಮತ್ತು ಬಸವೇಶ್ವರನಗರ ಬಸವ ಬಳಗದ ಅಧ್ಯಕ್ಷರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.
Laxmi News 24×7