Breaking News

ಹಾಸನದಲ್ಲಿ ಸಿನಿಮೀಯ ಟ್ವಿಸ್ಟ್ ಪಡೆದ ಪ್ರೇಮಕಥೆ

Spread the love

ಎಂಟು ವರ್ಷಗಳ ಸಂಸಾರ, 7 ವರ್ಷದ ಮಗನನ್ನು ಬಿಟ್ಟು ಪ್ರಿಯಕರನೊಂದಿಗೆ ಕಾರಿನಲ್ಲೇ ತಾಳಿ ಕಟ್ಟಿಸಿಕೊಂಡ ವಿವಾಹಿತೆ… ಇದೀಗ ಪಶ್ಚಾತ್ತಾಪದಿಂದ ಪತಿಯ ಬಳಿ ಮರಳಲು ಬೇಡಿಕೆ!

ಮುಕುಂದೂರು ಗ್ರಾಮದಲ್ಲಿ ನಡೆದ ಈ ಘಟನೆ ಸಾರ್ವಜನಿಕರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ  ಆಸ್ಪತ್ರೆ ಹೆಸರಿನಲ್ಲಿ ಮನೆಯಿಂದ ಹೊರಟ ಮಹಿಳೆ, ಸಾಂತ್ವನ ಕೇಂದ್ರದಿಂದಲೂ ಹೊರಬಂದು ಪ್ರಿಯಕರನೊಂದಿಗೆ ಮದುವೆಯಾಗಿದ್ದಾಳೆ.

ಇಷ್ಟೆಲ್ಲ ನಡೆದ ಬಳಿಕವೂ ಪತಿ ದೊಡ್ಡ ಮನಸ್ಸು ತೋರಿಸಿ ಮನೆಗೆ ಕರೆದುಕೊಂಡು ಬಂದರೂ, ಮತ್ತೊಮ್ಮೆ ಪ್ರಿಯಕರನ ಜೊತೆ ಎಸ್ಕೇಪ್ ಆಗಿದ್ದಾಳೆ. ಇದೀಗ ನಡೆದ ಎಲ್ಲಾ ಘಟನೆಗಳ ಬಗ್ಗೆ ಪತಿಯ ಮುಂದೆ ತಪ್ಪೊಪ್ಪಿಕೊಂಡು, “ನನ್ನನ್ನು ವಾಪಸ್ ಕರೆದುಕೊಂಡು ಹೋಗಿ” ಎಂದು ಕಣ್ಣೀರಿಟ್ಟಿದ್ದಾಳೆ ಎನ್ನಲಾಗಿದೆ

ಈ ಸಂಬಂಧ ಪತಿ-ಪತ್ನಿಯ ನಡುವಿನ ಆಡಿಯೋ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಘಟನೆಗೆ ಹೊಸ ತಿರುವು ನೀಡಿದೆ.

ಪ್ರೀತಿ, ವಿಶ್ವಾಸ ಮತ್ತು ಕುಟುಂಬ ಮೌಲ್ಯಗಳ ಬಗ್ಗೆ ಮತ್ತೆ ಚರ್ಚೆ ಹುಟ್ಟಿಸಿರುವ ಈ ಘಟನೆಗೆ ನೀವು ಏನು ಹೇಳ್ತೀರಾ?


Spread the love

About Laxminews 24x7

Check Also

ಜು.17 ರಂದು ಪ್ರಧಾನಿ ಮೋದಿಯಿಂದ ಕರ್ನಾಟಕದ 4 ‘ಅಮೃತ ಭಾರತ್ʼ ನಿಲ್ದಾಣಗಳ ಉದ್ಘಾಟನೆ

Spread the loveಬೆಂಗಳೂರು: ಭಾರತೀಯ ರೈಲ್ವೆ ಇಲಾಖೆಯು ನಿಲ್ದಾಣಗಳು, ರೈಲುಗಳು, ಹಳಿಗಳು ಹಾಗೂ ಸಿಗ್ನಲಿಂಗ್ ವ್ಯವಸ್ಥೆಗಳನ್ನು ಜಾಗತಿಕ ಮಾನದಂಡಗಳಿಗೆ ತಕ್ಕಂತೆ ಆಧುನೀಕರಿಸುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ