Breaking News

ನಟ ದರ್ಶನ್ ಅವರ ಮಾಜಿ ಮ್ಯಾನೇಜರ್ ಪ್ರತ್ಯಕ್ಷ..!!

Spread the love

ಆಳಕ್ಕೆ ಗೂಳಿ ಬಿದ್ದಾಗ ಆಳಿಗೊಂದು ಕಲ್ಲು, ಅನ್ನುವಂತೆ, ರೇಣುಕಾಸ್ವಾಮಿ ಕೊ*ಲೆ ಪ್ರಕರಣದಲ್ಲಿ ದರ್ಶನ್ ಅವರು ಆರೋಪಿ ಅಂತಾದಾಗ, ಈ ಮಾಜಿ ಮ್ಯಾನೇಜರ್ ಹೆಸರು ಕೂಡ ಮುನ್ನೆಲೆಗೆ ಬಂತು. ಮಲ್ಲಿ ಅಲಿಯಾಸ್ ಮಲ್ಲಿಕಾರ್ಜುನ ನನ್ನೂರಿನವರು. ದರ್ಶನ್ ಅವರಿಗೆ ಮ್ಯಾನೇಜರ್ ಆಗೋಕು ಮುಂಚೆ ನಿರ್ಮಾಪಕ. ಯಶ್ ನಟನೆಯ ಮೊದಲಾ ಸಲ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರು. ಬೆಂಗಳೂರಿನ ವಿಜಯ ನಗರದಲ್ಲಿ ಉತ್ತರ ಕರ್ನಾಟಕ ಹೋಟೆಲ್ ನಡೆಸುತ್ತಿದ್ದರು. ಆಮೇಲೆ ದರ್ಶನ್ ಸರ್ ಮ್ಯಾನೇಜರ್ ಆದರು. ದರ್ಶನ್ ಸರ್ ತಿಂಗಳಿಗೊಂದು ಸಲ ನಂಬರ್ ಬದಲಾಯಿಸುವಾಗ, ಅವರನ್ನು ಸಂಪರ್ಕ ಮಾಡೋಕೆ ಏಕೈಕ ಕೊಂಡಿ ಇವರೆ. ಆನಂತರ ವಿತರಕ ಆದರು. ಅಲ್ಲಿಂದ ಅವರ ಫಾಲ್ ಡೌನ್ ಶುರು ಆಯಿತು. ದರ್ಶನ್ ಸರ್ ಹೆಸರಿನಲ್ಲಿ ಹಣ ಮಾಡಿದರು. ನಿರ್ಮಾಪಕರಿಗೆ ಕೊಡಬೇಕಾದ ಹಣ ಕೊಡಲಿಲ್ಲ ಇತ್ಯಾದಿ ಆರೋಪಗಳು. ಆರೇಳು ವರ್ಷಗಳಿಂದ ನಾಪತ್ತೆ. ರೇಣುಕಾ ಸ್ವಾಮಿ ಕೊಲೆಯಾದಾಗ, ಇವರನ್ನು ಕೊ *ಲೆ ಮಾಡಲಾಗಿದೆ ಅನ್ನುವ ಚರ್ಚೆ ಶುರುವಾಯಿತು. ಅವರು ಬದುಕಿದ್ದಾರೆ. ನಾಳೆ ಒಂದಷ್ಟು ವಿಷ್ಯ ಮಾತಾಡ್ತಾರೆ ಅನ್ನೋ ವಿಷ್ಯ ಬಂದಿದೆ. ನೋಡೋಣ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಸಿಗಬಹುದು.


Spread the love

About Laxminews 24x7

Check Also

ಜು.17 ರಂದು ಪ್ರಧಾನಿ ಮೋದಿಯಿಂದ ಕರ್ನಾಟಕದ 4 ‘ಅಮೃತ ಭಾರತ್ʼ ನಿಲ್ದಾಣಗಳ ಉದ್ಘಾಟನೆ

Spread the loveಬೆಂಗಳೂರು: ಭಾರತೀಯ ರೈಲ್ವೆ ಇಲಾಖೆಯು ನಿಲ್ದಾಣಗಳು, ರೈಲುಗಳು, ಹಳಿಗಳು ಹಾಗೂ ಸಿಗ್ನಲಿಂಗ್ ವ್ಯವಸ್ಥೆಗಳನ್ನು ಜಾಗತಿಕ ಮಾನದಂಡಗಳಿಗೆ ತಕ್ಕಂತೆ ಆಧುನೀಕರಿಸುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ