Breaking News

ಮುರುಡೇಶ್ವರದಲ್ಲಿ ಗಾಂಜಾ ಸೇವಿಸಿ ಹಿಂದೂಗಳ ಮನೆಗೆ ಕಲ್ಲು- ಏಳು ಬಾಲಕರು ಅರೆಸ್ಟ್‌

Spread the love

ಕಾರವಾರ: ಮುರುಡೇಶ್ವರದಲ್ಲಿ ಹಿಂದೂಗಳ  ಮನೆಗಳ ಮೇಲೆ ಕಲ್ಲು ತೂರಾಟ ಮಾಡಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಬಾಲಕರು ಗಾಂಜಾ ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.

ಬಂಧಿತ ಏಳು ಬಾಲಕರನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಮುರುಡೇಶ್ವರಪೊಲೀಸ್ ಠಾಣೆಯಲ್ಲಿ ಅಪ್ರಾಪ್ತರ ಜೊತೆ  ಬೈಕ್ ನೀಡಿದ ಪೋಷಕರ ವಿರುದ್ಧವೂ ಕೇಸ್‌ ದಾಖಲು ಮಾಡಲಾಗಿದೆ.

ಈಗ ಪೊಲೀಸರು ಉದ್ದೇಶಪೂರ್ವಕವಾಗಿ ಹಿಂದೂಗಳ ಮನೆಯ ಮೇಲೆ ಕಲ್ಲುತೂರಾಟ ನಡೆಸಿದ್ದು ಯಾಕೆ ಎನ್ನುವುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಮುರುಡೇಶ್ವರದ ಬೈಲೂರುನಲ್ಲಿ ಮನೆಗಳ ಮೇಲೆ ಅಪ್ರಾಪ್ತ ಬಾಲಕರ ತಂಡ ಕಲ್ಲುತೂರಾಟ ನಡೆಸಿದ ಘಟನೆ ಸೋಮವಾರ ರಾತ್ರಿ ನಡೆದಿತ್ತು. ಬೈಲೂರು ಮಾರ್ಗದ ತೆಂಗಾರ್ ರಸ್ತೆಯ ಅಕ್ಕಪಕ್ಕದ ಕೆಲವು ಹಿಂದೂ ಮನೆಗಳ ಮೇಲೆ ಮೂರು ಬೈಕ್‌ನಲ್ಲಿ ಬಂದ ಏಳು ಮಂದಿ ಬಾಲಕರು ಏಕಾಏಕಿ ಮನೆಗಳತ್ತ ಕಲ್ಲು ತೂರಿದ್ದರು.

ಸ್ಥಳದಲ್ಲಿದ್ದ ಯುವಕರು ಕೂಡಲೇ ಇಬ್ಬರನ್ನು ಹಿಡಿದು ಮುರುಡೇಶ್ವರ ಪೊಲೀಸ್ ಠಾಣೆಗೆ ಒಪ್ಪಿಸಿದ್ದರು. ಪೊಲೀಸರಿಗೆ ಮಾಹಿತಿ ತಿಳಿಯುತ್ತಿದ್ದಂತೆ  ಉಳಿದ ಬಾಲಕರನ್ನು ಬಂಧಿಸಿದ್ದರು.

ಘಟನೆಗೆ ಸಂಬಂಧಿಸಿದಂತೆ ಹಿಂದೂ ಜಾಗರಣಾ ವೇದಿಕೆ ಮುಖಂಡರು ಹಾಗೂ ಕಾರ್ಯಕರ್ತರು ಪೊಲೀಸ್ ಠಾಣೆಗೆ ದೌಡಾಯಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ವಿಷಯ ತಿಳಿದ ಎಸ್.ಪಿ ದೀಪನ್ ರವರು ಸ್ಥಳಕ್ಕೆ ತೆರಳಿ ಮಾಹಿತಿ ಕಲೆಹಾಕಿದ್ದರು.


Spread the love

About Laxminews 24x7

Check Also

ಸರ್ಪ್ರೈಸ್ ಎಂದು ಪ್ರೇಯಸಿಯ ಕೈಕಾಲು ಕಟ್ಟಿ ಕೊಲೆ ಮಾಡಿದ ಯುವಕ

Spread the loveಮುಂಬೈನ ದ್ವಾರಕಾಪುರಿ ಪ್ರದೇಶದಲ್ಲಿ ಎಂಬಿಎ ವಿದ್ಯಾರ್ಥಿನಿಯೊಬ್ಬಳನ್ನು ಆಕೆಯ ಪ್ರೇಮಿ ಪಿಯೂಷ್ ಧಮ್ಮೋಟಿಯಾ ಕ್ರೂರವಾಗಿ ಹತ್ಯೆ ಮಾಡಿದ್ದಾನೆ. ಲೈಂಗಿಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ