Breaking News

ಆಷಾಢ ಮುಗಿದರೂ ತವರಿನಿಂದ ಬಾರದ ಪತ್ನಿ – ಮನನೊಂದು ನೇಣಿಗೆ ಶರಣಾದ ಪತಿ

Spread the love

ತುಮಕೂರು: ಆಷಾಢಕ್ಕೆ ತವರು ಮನೆಗೆ ಹೋದ ಪತ್ನಿ  ವಾಪಸ್ ಬರದೇ ಇದ್ದಿದ್ದಕ್ಕೆ ಮನನೊಂದು ಪತಿ ನೇಣಿಗೆ ಶರಣಾದ ಘಟನೆ ಕುಣಿಗಲ್ ಪಟ್ಟಣದ ಮಹಾವೀರ ನಗರದಲ್ಲಿ ನಡೆದಿದೆ.

ಅವಿನಾಶ್ (28) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಕಳೆದ 6 ತಿಂಗಳ ಹಿಂದಷ್ಟೇ ಹಾಸನದ ಅರಸೀಕೆರೆ ಮೂಲದ ಯುವತಿಯನ್ನು ಅವಿನಾಶ್‌ ಪ್ರೀತಿಸಿ ಮದುವೆಯಾಗಿದ್ದ. ಆಷಾಢಕ್ಕೆ ಪತ್ನಿ ತವರಿಗೆ ತೆರಳಿದ್ದಳು. ಕರೆ ಮಾಡಿ ಬರುವಂತೆ ಅವಿನಾಶ್‌ ತಿಳಿಸಿದ್ದ. ಆದರೆ ನಾನು ಬರಲ್ಲ ಎಂದು ಪತ್ನಿ ಹೇಳಿದ್ದಳು.

ಇದೇ ವಿಚಾರಕ್ಕೆ ಅವಿನಾಶ್ ಮನನೊಂದು ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.‌ ಘಟನಾ ಸ್ಥಳಕ್ಕೆ ಕುಣಿಗಲ್ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ.


Spread the love

About Laxminews 24x7

Check Also

ರಾಜ್ಯದಲ್ಲಿ ಬರ – 177 ತಾಲೂಕುಗಳಲ್ಲಿ 46,324 ಕೋಟಿ ಬೆಳೆ ನಷ್ಟ , 7,142 ಕೋಟಿ ನೆರವಿಗೆ ಮನವಿ

Spread the loveಬೆಂಗಳೂರು: ರಾಜ್ಯದ 240 ತಾಲೂಕುಗಳ ಪೈಕಿ 217 ತಾಲೂಕುಗಳನ್ನ ಬರಪೀಡಿತ  ಎಂದು ಘೋಷಿಸಲಾಗಿದ್ದು, ಬರ ಪರಿಸ್ಥಿತಿ ಹಿನ್ನೆಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ