Breaking News

ಬಳ್ಳಾರಿ ಘರ್ಷಣೆ: ಗುಂಡು ಹಾರಿಸಿದ್ದು ಯಾರು ಅನ್ನೋದು ತನಿಖೆಯಿಂದ ಗೊತ್ತಾಗಬೇಕು- ಪರಮೇಶ್ವರ್

Spread the love

ತುಮಕೂರು/ಬಳ್ಳಾರಿ: “ಬಳ್ಳಾರಿಯಲ್ಲಿ ಜನಾರ್ದನ್​ ರೆಡ್ಡಿ ಅವರ ಮನೆ ಮುಂಭಾಗ ನಡೆದ ಗಲಾಟೆಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಮಾಹಿತಿ ಇದೆ. ರಿವಾಲ್ವರ್​ನಿಂದ ಹಾರಿದ ಗುಂಡು ಆತನಿಗೆ ತಗುಲಿದೆ. ಆದರೆ, ಯಾರು ಗುಂಡು ಹಾರಿಸಿದ್ದಾರೆ ಎಂಬುದು ತನಿಖೆಯಿಂದ ಗೊತ್ತಾಗಬೇಕು” ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.PARAMESHWARA REACTS ON CLASH

ತುಮಕೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ವಾಲ್ಮೀಕಿ ಪುತ್ಥಳಿ ಅನಾವರಣ ಮಾಡಲೂ ಕೂಡ ಈ ರೀತಿ ಗೊಂದಲ ಮಾಡುತ್ತಾರೆಂದರೆ ಅದು ರಾಜಕೀಯ ದುರುದ್ದೇಶ. ಇದನ್ನು ನಾವು ಸಹಿಸುವುದಿಲ್ಲ.

 

ಆ ಭಾಗದ ಹೆಚ್ಚು ಮಂದಿ ಮಹರ್ಷಿ ವಾಲ್ಮೀಕಿ ಅವರನ್ನು ಪೂಜಿಸುವಂತಹವರು. ಘಟನೆಯ ಕುರಿತಂತೆ ವರದಿ ಕೇಳಿದ್ದೇನೆ. ವರದಿ ಬಂದ ನಂತರ ಕ್ರಮ ತೆಗೆದುಕೊಳ್ಳುತ್ತೇನೆ. ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿದ್ದು, ಎಲ್ಲ ರೀತಿಯ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ” ಎಂದರು.

 

ಘಟನೆ ನಡೆದ ವೇಳೆ ಇದ್ದಂತಹ ವ್ಯಕ್ತಿಗಳನ್ನು ಕ್ಯಾಮೆರಾಗಳಲ್ಲಿ ಪರಿಶೀಲಿಸಿ ವಶಕ್ಕೆ ತೆಗೆದುಕೊಂಡಿದ್ದಾರೆ. ಸಂಪೂರ್ಣ ವರದಿ ಬಂದ ನಂತರ ವಿಷಯ ಬೆಳಕಿಗೆ ಬರುತ್ತದೆ. ಗುಂಪಿನಲ್ಲಿದ್ದವರು ಗುಂಡು ಹಾರಿಸಿದ್ದಾರೆ ಎಂಬ ವಿಚಾರ ಪ್ರಾಥಮಿಕ ಮಾಹಿತಿಯಿಂದ ಲಭ್ಯವಾಗಿದೆ. ಅಲ್ಲಿದ್ದ ಗನ್ ಮ್ಯಾನ್​ಗಳ ಗನ್​ಗಳನ್ನು ವಶಕ್ಕೆ ಪಡೆಯಲಾಗಿದೆ” ಎಂದು ಹೇಳಿದರು.


Spread the love

About Laxminews 24x7

Check Also

ರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ

Spread the loveರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ ಬೆಳಗಾವಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ