Breaking News

ಹಿರಿಯ ಪತ್ರಕರ್ತ ಪ್ರಕಾಶ ಪರುಳೇಕರ ನಿಧನ

Spread the love

ಹಿರಿಯ ಪತ್ರಕರ್ತ ಪ್ರಕಾಶ ಪರುಳೇಕರ ನಿಧನ
ಲೋಂಡಾ ಮೂಲದ ಬೆಳಗಾವಿಯ ಹಿರಿಯ ಪತ್ರಕರ್ತ, ಇನ್ ನ್ಯೂಸ್’ನ ಮಾಜಿ ಸಂಪಾದಕ ಮತ್ತು ಟಿಳಕವಾಡಿಯ ರಹಿವಾಸಿ ಹಿರಿಯ ಪ್ರಕಾಶ ಪರುಳೇಕರ (65) ಅನಾರೋಗ್ಯದಿಂದ ನಿಧನರಾದರು.
ಬೆಳಗಾವಿಯ ಪ್ರತಿಷ್ಠಿತ ನಮ್ಮ ಇನ್ ನ್ಯೂಸ್’ನ ಸಂಪಾದಕರಾಗಿ, ಮರಾಠಿ ದಿನಪತ್ರಿಕೆ ತರುಣ್ ಭಾರತ್, ಪುಢಾರಿ, ಹಾಥವೇ ಸಿಟಿ ನ್ಯೂಸ್ ಸಂಪಾದಕರಾಗಿ ಪ್ರಕಾಶ ಪರುಳೇಕರ ಸೇವೆಯನ್ನು ಸಲ್ಲಿಸಿದ್ದಾರೆ.
ಮೃತರು ಮೂವರು ಸಹೋದರಿಯರು, ಪತ್ನಿ, ಸುಪುತ್ರಿ ಅಳಿಯ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಪತ್ರಿಕಾರಂಗದಲ್ಲಿ ಶೋಕದ ವಾತಾವರಣವಿದೆ.
ಮೃತರು ಸಾವಿನಲ್ಲಿಯೂ ಸಾರ್ಥಕತೆಯನ್ನು ಮೆರೆದಿದ್ದು, ಮರಣೋತ್ತರ ದೇಹ ದಾನ ಮಾಡಿರುವುದಾಗಿ ತಿಳಿದು ಬಂದಿದೆ.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ