ಕೋರೆ ನಿವಾಸಕ್ಕೆ ಕೇರಳ ರಾಜ್ಯಪಾಲ ಆರಲೇಕರ ಭೇಟಿ
ಕೋರೆ ನಿವಾಸಕ್ಕೆ ಕೇರಳ ರಾಜ್ಯಪಾಲ ಆರಲೇಕರ ಭೇಟಿ
ಪ್ರಸ್ತುತ ಆರೋಗ್ಯ ಸೇವೆಯ ಕೊಡುಗೆ ಕುರಿತು ವಿಚಾರ ವಿನಿಮಯ
ಕುಶಲೋಪರಿ ವಿಚಾರಿಸಿದ ಉಭಯ ನಾಯಕರು
ಕೆ.ಎಲ್.ಇ ಸಂಸ್ಥೆಯ ಕಾರ್ಯಕ್ಕೆ ರಾಜ್ಯಪಾಲರ ಪ್ರಶಂಸೆ
ಕೇರಳ ರಾಜ್ಯದ ಗೌರವಾನ್ವಿತ ರಾಜ್ಯಪಾಲರಾದ ರಾಜೇಂದ್ರ ವಿಶ್ವನಾಥ್ ಆರಲೇಕರ್ ಅವರು ಕೆಎಲ್ಇ ಕಾರ್ಯಧ್ಯಕ್ಷರಾದ ಡಾ. ಪ್ರಭಾಕರ್ ಕೋರೆಯವರ ಸ್ವಗೃಹಕ್ಕೆ ಆಗಮಿಸಿ ಕುಶಲೋಪರಿ ವಿಚಾರಿಸಿದರು.
ಈ ಸಂದರ್ಭದಲ್ಲಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಕೆಎಲ್ಇ ಸಂಸ್ಥೆಯ ಸಾಧನೆ, ಅಭಿವೃದ್ಧಿ, ಪ್ರಸ್ತುತ ಆರೋಗ್ಯ ಸೇವೆಯ ಕೊಡುಗೆಗಳನ್ನು ಕುರಿತು ಹಲವಾರು ವಿಚಾರಗಳನ್ನು ವಿನಿಮಯ ಮಾಡಿಕೊಂಡರು.
ಡಾ ಪ್ರಭಾಕರ್ ಕೋರೆ ಅವರು ಕಳೆದ ನಾಲ್ಕು ದಶಕಗಳಿಂದ ಕೆ ಎಲ್ ಈ ಸಂಸ್ಥೆಯನ್ನು ಅಗಾಧವಾಗಿ ಕಟ್ಟಿ ಬೆಳೆಸಿರುವುದನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅನಘಾ ಆರಲೇಕರ್, ಪ್ರಸನ್ನ ಘೋಟಗೆ ಮತ್ತು ಇತರರು ಉಪಸ್ಥಿತರಿದ್ದರು.
Laxmi News 24×7