Breaking News

ವಿವಿಧ ನಾಲ್ಕು ಪ್ರಕರಣಗಳಲ್ಲಿ 11 ಜನರ ಬಂಧನ

Spread the love

ವಿವಿಧ ನಾಲ್ಕು ಪ್ರಕರಣಗಳಲ್ಲಿ 11 ಜನರ ಬಂಧನ
ವಿವಿಧ ನಾಲ್ಕು ಪ್ರಕರಣಗಳನ್ನು ಭೇದಿಸಿರುವ ಪೊಲೀಸರು 11 ಜನರನ್ನು ಬಂಧಿಸಿ ಅವರಿಂದ ಸುಮಾರು 14.400 ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಂಡಿರುವ ಘಟನೆ ಜರುಗಿದೆ.
ಬೆಳಗಾವಿ ನಗರ ಪೊಲೀಸ್ ಆಯುಕ್ತರ ವ್ಯಾಪ್ತಿಯ ಮಚ್ಚೆಯ ಹಿಂದುಳಿದ ಕಲ್ಯಾಣ ಇಲಾಖೆಯ ವಸತಿ ನಿಲಯದ ಹಿಂದುಗಡೆ ಜೂಜಾಟ ಅಡ್ಡೆಯ ಮೇಲೆ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ ಸಂತೋಷ ದಳವಾಯಿ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿ ಮಹಾದೇವ ಬಸವಣ್ಣಿ ಕುಪಸಿ, ಜ್ಯೋತಿಭಾ ಮಾರುತಿ ದರವೇಶಿ, ಬಸವರಾಜ ಬಸಪ್ಪಾ ಗುಂಡ್ಯಾಗೋಳ, ಶ್ರೀಕಾಂತ ಜೋಮಾ ಸನದಿ, ದರ್ಶನಕುಮಾರ ವಿಜಯ ತಳವಾರ, ಯಲ್ಲಪ್ಪಾ ತಿಪ್ಪಣ್ಣ ಪೆಂಡಾರ,
ಸಿದ್ರಾಯಿ ಯಲ್ಲಪ್ಪ ಹೊನ್ನುಂಗಿ, ಪರುಶರಾಮ ಲಕ್ಷ್ಮಣ ದರವೇಶಿ, ಸತ್ಯೆಪ್ಪ ದುರ್ಗಪ್ಪಾ ಹುಂಜ್ಯಾನಟ್ಟಿ ಹಾಗೂ ಮಂಜುನಾಥ ರಮೇಶ ನಾಯ್ಕರ ಅವರನ್ನು ಬಂಧಿಸಿ ಅವರಿಂದ ಸುಮಾರು 14.400 ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಕ್ಯಾಂಪ್ ಪೊಲೀಸ್ ಠಾಣೆ ವ್ಯಾಪ್ತಿಯ ರೈಲು ನಿಲ್ದಾಣ ಹತ್ತಿರ ಗಾಂಜಾ ಸೇವಿಸಿ ಸಾರ್ವಜನಿಕ ಸ್ಥಳದಲ್ಲಿ ಅಸ್ಯಭವಾಗಿ ವರ್ತನೆ ಮಾಡುತ್ತಿದ್ದ ಪೀರನವಾಡಿಯ ಹುಸೇನ ರಾಜೇಸಾಬ ಶೇಖ ಅವರನ್ನು ಕ್ಯಾಂಪ್ ಪಿ.ಎಸ್.ಐ ರುಕ್ಷ್ಮೀಣಿ ಎ ಅವರು ಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಗಾಂಜಾ ಸೇವಿಸಿ ಸಾರ್ವಜನಿಕ ಸ್ಥಳದಲ್ಲಿ ಅಸ್ಯಭವಾಗಿ ವರ್ತನೆ ಮಾಡುತ್ತಿದ್ದ ಅಪ್ರಾಪ್ತ ಇಬ್ಬರು ಹುಡುಗರನ್ನು ಎಪಿಎಂಸಿ ಪಿ.ಎಸ್.ಐಗಳಾದ ಎಂ.ಎ.ಪಾಟೀಲ ಹಾಗೂ ಎಸ್.ಆರ್.ಮುತ್ತತ್ತಿ ಅವರುಗಳು ಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ. ದಾಳಿ ಕೈಗೊಂಡ ಸಿಬ್ಬಂದಿಯವರ ಕಾರ್ಯವನ್ನು ನಗರ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿಗಳು ಶ್ಲಾಘಿಸಿದ್ದಾರೆ.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ