Breaking News

ಹುಬ್ಬಳ್ಳಿ- ಕಾರೈಕ್ಕುಡಿ ನಡುವೆ ವಿಶೇಷ ರೈಲು ಸಂಚಾರ: ತಾಳಗುಪ್ಪ– ಯಶವಂತಪುರ ರೈಲು ಸಮಯ ಬದಲು

Spread the love

ಹುಬ್ಬಳ್ಳಿ: ಸ್ವಾತಂತ್ರ್ಯ ದಿನಾಚರಣೆ ಮತ್ತು ನಂತರದ ರಜಾ ದಿನಗಳ ಹಿನ್ನೆಲೆ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು, ನೈಋತ್ಯ ರೈಲ್ವೆಯು ಎಸ್ಎಸ್ಎಸ್ ಹುಬ್ಬಳ್ಳಿ ಮತ್ತು ತಮಿಳುನಾಡಿನ ಕಾರೈಕ್ಕುಡಿ ಜಂಕ್ಷನ್ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್​ಪ್ರೆಸ್ ರೈಲು ಸೇವೆಯನ್ನು ಆರಂಭಿಸಿದೆ.

ಎಸ್ಎಸ್ಎಸ್ ಹುಬ್ಬಳ್ಳಿ – ಕಾರೈಕ್ಕುಡಿ ಜಂಕ್ಷನ್ ನಡುವೆ 07331 ಸಂಖ್ಯೆಯ ಈ ವಿಶೇಷ ಎಕ್ಸ್​ಪ್ರೆಸ್ ರೈಲು ಆಗಸ್ಟ್ 14 ರಂದು (ಗುರುವಾರ) ಮಧ್ಯಾಹ್ನ 4 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು ಮರುದಿನ ಬೆಳಗ್ಗೆ 11 ಗಂಟೆಗೆ ಕಾರೈಕ್ಕುಡಿಯನ್ನು ತಲುಪಲಿದೆ. ಅಲ್ಲಿಂದ ವಾಪಸ್ ಆಗಸ್ಟ್​​ 15 ರಂದು ಸಂಜೆ 6.45 ನಿಮಿಷಕ್ಕೆ ಹೊರಟು​ (07332) ಮರುದಿನ ಮಧ್ಯಾಹ್ನ 2:40 ನಿಮಿಷಕ್ಕೆ ಹುಬ್ಬಳ್ಳಿಗೆ ಆಗಮಿಸಲಿದೆ.

ಈ ರೈಲು ಎರಡೂ ಮಾರ್ಗದಲ್ಲಿ ಹಾವೇರಿ, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು, ಚಿಕ್ಕಬಾಣಾವರ, ಎಸ್ಎಂವಿಟಿ ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ನಮಕ್ಕಲ್, ಕರೂರು, ತಿರುಚ್ಚಿರಾಪಳ್ಳಿ ಮತ್ತು ಪುದುಕೊಟ್ಟೈ ನಿಲ್ದಾಣಗಳಲ್ಲಿ ನಿಲುಗಡೆ ಆಗಲಿದೆ.

ಈ ರೈಲು ಒಟ್ಟು 17 ಬೋಗಿಗಳನ್ನು ಹೊಂದಿದೆ. ಅವುಗಳಲ್ಲಿ 1 ಎಸಿ 2 ಟೈರ್, 1 ಎಸಿ 3-ಟೈರ್, 10 ಸ್ಲೀಪರ್ ಕ್ಲಾಸ್, 3 ಸಾಮಾನ್ಯ ದರ್ಜೆ ಮತ್ತು 2 ಎಸ್ಎಲ್ಆರ್​​ಡಿ ಬೋಗಿಗಳು ಇರಲಿವೆ.

ತಾಳಗುಪ್ಪ– ಯಶವಂತಪುರ ವಿಶೇಷ ರೈಲು ಸಮಯದಲ್ಲಿ ಬದಲಾವಣೆ: ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆಯು ತಾಳಗುಪ್ಪ – ಯಶವಂತಪುರ ನಡುವಿನ (ರೈಲು ಸಂಖ್ಯೆ 06544) ಎಕ್ಸ್​ಪ್ರೆಸ್​ ವಿಶೇಷ ರೈಲು ಆಗಸ್ಟ್​ 14 ರಂದು ಹೊರಡುವ ಸಮಯವನ್ನು ಪರಿಷ್ಕರಿಸಿದೆ.

ಹಿಂದಿನ ವೇಳಾಪಟ್ಟಿಯ ಪ್ರಕಾರ, ಈ ರೈಲು ತಾಳಗುಪ್ಪ ನಿಲ್ದಾಣದಿಂದ ಬೆಳಿಗ್ಗೆ 08:15 ಗಂಟೆಗೆ ಹೊರಡುವುದಾಗಿ ನಿಗದಿಯಾಗಿತ್ತು. ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಈಗ ಇದು ಬೆಳಿಗ್ಗೆ 10 ಗಂಟೆಗೆ ತಾಳಗುಪ್ಪ ನಿಲ್ದಾಣದಿಂದ ಹೊರಡುತ್ತದೆ. ಮಧ್ಯದಲ್ಲಿನ ನಿಲ್ದಾಣಗಳ ಆಗಮನ/ನಿರ್ಗಮನ ಸಮಯಗಳು ಹೀಗಿವೆ.

ಸಾಗರ ಜಂಬಗಾರು ನಿಲ್ದಾಣಕ್ಕೆ 10:16 ನಿಮಿಷಕ್ಕೆ ತಲುಪಿದೆ. ಆನಂದಪುರಂಗೆ 10:48 ನಿಮಿಷ, ಶಿವಮೊಗ್ಗ ನಗರ ನಿಲ್ದಾಣಕ್ಕೆ 11:55, ಭದ್ರಾವತಿಗೆ 12:20, ತರೀಕೆರೆಗೆ 12:38, ಬೀರೂರು ನಿಲ್ದಾಣಕ್ಕೆ 1:10, ಅರಸೀಕೆರೆಗೆ 2:00, ತಿಪಟೂರಿಗೆ 2:25, ತುಮಕೂರಿಗೆ 3:43 ಹಾಗೂ ಯಶವಂತಪುರ ನಿಲ್ದಾಣಕ್ಕೆ 5:15ಕ್ಕೆ ತಲುಪುತ್ತದೆ ಎಂದು ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ