Breaking News

ಪಾಲಿಕೆ ಮೇಯರ್ ಸೀಲ್ ನಲ್ಲಿ ಇರುವ ಬೆಳಗಾಂ, ಬೆಳಗಾವಿ ಆಗಲಿ-ಕನ್ನಡ ಹೋರಾಟಗಾರ ಪ್ರೇಮ ಚೌಗುಲಾ ಆಗ್ರಹ

Spread the love

ಪಾಲಿಕೆ ಮೇಯರ್ ಸೀಲ್ ನಲ್ಲಿ ಇರುವ ಬೆಳಗಾಂ, ಬೆಳಗಾವಿ ಆಗಲಿ-ಕನ್ನಡ ಹೋರಾಟಗಾರ ಪ್ರೇಮ ಚೌಗುಲಾ ಆಗ್ರಹ
ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರ ಸೀಲ್ ನಲ್ಲಿ ಬೆಳಗಾವಿ ಎಂದಿದ್ದರೆ ಮೇಯರ್ ಸೀಲ್ ನಲ್ಲಿ ಬೆಳಗಾಂ ಎಂದು ಬರುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಕನ್ನಡ ಹೋರಾಟಗಾರ ಪ್ರೇಮ ಚೌಗುಲಾ ಆರೋಪಿಸಿದರು.
ಈ ಕುರಿತು ಗುರುವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕಳೆದ ಎರಡ್ಮೂರು ವರ್ಷಗಳಿಂದ ಮೇಯರ್ ಕಚೇರಿಯಿಂದ ಬೆಳಗಾಂ ಎಂದು ಸೀಲ್ ಹಾಕಿಕೊಡುತ್ತಿದ್ದಾರೆ. ಇದು ಬದಲಾವಣೆ ಆಗಬೇಕು.
ಮೇಯರ್ ಅವರೇ ಈ ರೀತಿಯ ಕಾನೂನು ಉಲ್ಲಂಘನೆ ಮಾಡಿ ಬೇಜವಾಬ್ದಾರಿ ತೋರಿದರೆ ಹೇಗೆ ಎಂದು ಅವರು ಪ್ರಶ್ನಿಸಿದ ಅವರು ಶೀಘ್ರವೇ ಬದಲಾವಣೆ ಮಾಡದಿದ್ದರೆ ಕನ್ನಡ ಸಂಘಟನೆಗಳಿಂದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸಮಯಕ್ಕೆ ಸರಿಯಾಗಿ ಯಾವ ಅಧಿಕಾರಿಗಳೂ ಬರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಾಲಿಕೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ಡಿಜಿಟಲ್ ಹಾಜರಾತಿ ಕಡ್ಡಾಯ ಮಾಡಬೇಕು ಎಂದು ಪ್ರೇಮ್ ಒತ್ತಾಯಿಸಿದರು.

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ