ಬಾಣಂತಿ ಪತ್ನಿ ಹಾಗೂ ಮಗುವನ್ನು ಮನೆಗೆ ಕಳುಹಿಸಿ ಕೊಡಿ…
ಬೆಳಗಾವಿಯಲ್ಲಿ ಅತ್ತೆಯ ಮೈಮೇಲಿನ ಬಟ್ಟೆ ಹರಿದು ಸಾರ್ವಜನಿಕವಾಗಿ ಹಲ್ಲೆ ಆರೋಪ!!!
ಹೆರಿಗೆಯಾಗಿ 11ನೇ ದಿನಕ್ಕೆ ಪತ್ನಿಯನ್ನು ಕಳುಹಿಸಿ ಕೊಡಬೇಕೆಂದು ಅತ್ತೆಯ ಮೈಮೇಲಿನ ಬಟ್ಟೆ ಹರಿದು ಸಾರ್ವಜನಿಕವಾಗಿ ಹಲ್ಲೆ ನಡೆಸಿದ ಆರೋಪ ಬೆಳಗಾವಿ ತಾಲೂಕಿನ ಮಚ್ಛೆ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿ ತಾಲೂಕಿನ ಮಚ್ಛೆ ಗ್ರಾಮದ ಲಕ್ಷ್ಮೀ ಗಲ್ಲಿಯ ಪ್ರತೀಕ್ಷಾ (22) ಎಂಬ ಯುವತಿಯೊಂದಿಗೆ 1 ವರ್ಷದ ಹಿಂದೆ ಹೊನಗಾ ಗ್ರಾಮದ ಭೈರು ಮೇತ್ರಿ (25) ಎಂಬ ಯುವಕನೊಂದಿಗೆ ಮದುವೆಯಾಗಿತ್ತು. ಈಗ 11 ದಿನದ ಹಿಂದೆ ಈ ದಂಪತಿಗೆ ಮಗು ಜನಿಸಿದ್ದು, ಬಾಣಂತಿ ಪತ್ನಿ ಪ್ರತೀಕ್ಷಾ ತವರು ಮನೆಯಲ್ಲಿದ್ದಾಳೆ. ಕಳೆದ ಹನ್ನೊಂದು ದಿನಗಳ ಹಿಂದೆ ಮುದ್ದಾದ ಗಂಡು ಮಗುವಿಗೆ ಪ್ರತಿಕ್ಷಾ ಜನ್ಮ ನೀಡಿದ್ದು, ಮಗು ಹಾಗೂ ಹೆಂಡತಿಯನ್ನು ಮನೆಗೆ ಕಳುಹಿಸಿಕೊಡುವಂತೆ ಪತಿ ಭೈರು ಪಟ್ಟು ಹಿಡಿದಿದ್ದಾನೆ,
ನಿನ್ನೆ ಮಧ್ಯಾಹ್ನ ಪ್ರತೀಕ್ಷಾ ತವರು ಮನೆಗೆ ಬಂದು ಗಲಾಟೆ ನಡೆಸಿದ ಭೈರು ಕುಟುಂಬದವರು ಪತ್ನಿ ಪ್ರತೀಕ್ಷಾ ತಾಯಿ ಸೇರಿ 13 ಜನರ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಬಟ್ಟೆ ಹರಿದರೂ ಬಿಡದೇ ಸಾರ್ವಜನಿಕವಾಗಿ ಹಲ್ಲೆ ನಡೆಸಲಾಗಿದ್ದು, ನ್ಯಾಯ ದೊರಕಿಸಿಕೊಂಡುವಂತೆ ಹಲ್ಲೆಗೊಳಗಾದ ಕುಟುಂಬಸ್ಥರ ಒತ್ತಾಯಿಸುತ್ತಿದೆ. ಇನ್ನು ಘಟನೆಯ ಕೆಲ ದೃಶ್ಯಗಳು ಸಿಸಿಟ್ಹಿವಿಯಲ್ಲಿ ಸೆರೆಯಾಗಿವೆ.
ದಲಿತರಿಂದಲೇ ದಲಿತರ ಕುಟುಂಬಗಳ ಮೇಲೆ ಹಲ್ಲೆ ನಡೆಯುತ್ತಿವೆ. ವಡಗಾಂವ ಗ್ರಾಮೀಣ ಠಾಣೆಯಲ್ಲಿ ವಿದ್ಯುತ್ ಇಲ್ಲದ ಸಬೂಬು ಹೇಳಿ ಎಫ್.ಐ.ಆರ್. ದಾಖಲಿಸಿಕೊಳ್ಳಲಾಗುತ್ತಿಲ್ಲ. ಮನೆಯಲ್ಲಿ ಪುರುಷರು ಇಲ್ಲದಾಗ ಮಹಿಳೆಯರ ಬಟ್ಟೆ ಹರೆದು ಅವರ ಮೇಲೂ ಹಲ್ಲೆ ನಡೆಸಲಾಗಿದೆ. ಗಾಯಗೊಂಡವರಿಗೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಮಿಲೀಂದ್ ಬಡಿಗೇರ್ ತಿಳಿಸಿದರು.
ಮದುವೆಯಾದ ಕೆಲವೇ ದಿನಗಳಲ್ಲಿ ಹೆಂಡತಿ ಮೇಲೆ ಸಂಶಯ ಪಟ್ಟು ವರದಕ್ಷಿಣೆ ಕಿರುಕುಳ ನೀಡುತ್ತಿದ್ದು, ನಾಲ್ಕು ಬಾರಿ ಎರಡು ಕುಟುಂಬಗಳ ನಡುವೆ ಗ್ರಾಮದ ಹಿರಿಯರಿಂದ ರಾಜೀ ಸಂಧಾನ ಕೂಡ ನಡೆದಿದೆ.ಮದುವೆ ಖರ್ಚನ್ನು ನೀಡಿ, ತವರು ಮನೆಗೆ ಹೋಗಿ ಎಂದು ಪತ್ನಿ ಗದರಿಸುತ್ತಾನೆ. ಹಬ್ಬಕ್ಕೆ ಮಗಳನ್ನು ಕರೆದುಕೊಂಡು ಬಂದಾಗ ಅಳಿಯ ಚಾಕು ಇರಿಯಲು ಬಂದಿದ್ದ. ಹೆರಿಗೆಯಾಗಿ 11ನೇ ದಿನಕ್ಕೆ ಪತ್ನಿಯನ್ನು ಕಳುಹಿಸು ಎಂದು ತಮ್ಮ ಕುಟುಂಬದವರ ಬಟ್ಟೆಯನ್ನು ಹರಿದು ರೌಡಿಗಳ ಮೂಲಕ ಹಲ್ಲೆ ನಡೆಸಿ ಬೀದಿಯಲ್ಲಿ ರಂಪ ಮಾಡಿದ್ದಾರೆ ಎಂದು ಅತ್ತೆ ಶೈಲಾ ತಿಳಿಸಿದರು. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7