Home / ರಾಜಕೀಯ / ಬೆಳಗಾವಿ: ಕಾಲು- ಬಾಯಿ ಬೇನೆ; ಬೇಕಿದೆ ಅರಿವು

ಬೆಳಗಾವಿ: ಕಾಲು- ಬಾಯಿ ಬೇನೆ; ಬೇಕಿದೆ ಅರಿವು

Spread the love

ಬೆಳಗಾವಿ: ಕಾಲು- ಬಾಯಿ ಬೇನೆ; ಬೇಕಿದೆ ಅರಿವು

ಬೆಳಗಾವಿ: ಜಿಲ್ಲೆಯ ದನಗಳಿಗೆ ಕಾಲುಬಾಯಿ ರೋಗ ಬಾರದಂತೆ ಮುಂಜಾಗ್ರತಾ ಕ್ರಮವಾಗಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಲಸಿಕಾಕರಣ ನಡೆಸಿದೆ. ಏ.1ರಿಂದ ಲಸಿಕೆ ನೀಡಲು ಶುರು ಮಾಡಿದ್ದು 30 ದಿನಗಳವರೆಗೆ ನೀಡುವ ಗುರಿ ಹೊಂದಲಾಗಿದೆ. ಆದರೆ, ಒಂದೆಡೆ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆ, ಇನ್ನೊಂದೆಡೆ ಜಿಲ್ಲೆಯ ವ್ಯಾಪ್ತಿ ದೊಡ್ಡದಿರುವುದು ಲಸಿಕಾಕರಣಕ್ಕೆ ತುಸು ಅಡ್ಡಿಯಾಗಿದೆ.

ಕೊರತೆಗಳನ್ನು ಮೀರಿಯೂ ಇಲಾಖೆಯಿಂದ ಲಸಿಕಾ ಅಭಿಯಾನ ನಡೆಸಲಾಗಿದೆ.

ಬೆಳಗಾವಿ: ಕಾಲು- ಬಾಯಿ ಬೇನೆ; ಬೇಕಿದೆ ಅರಿವು

ಪ್ರತಿ ಬಾರಿ ಬೇಸಿಗೆಯಲ್ಲಿ ಕಾಲು- ಬಾಯಿ ರೋಗ ಅಥವಾ ಗೊರಸು- ಬಾಯಿ ರೋಗ ಹರಡುವುದು ಸಾಮಾನ್ಯ. ಮಾರ್ಚ್‌ ಕೊನೆಯ ವಾರದ ಹೊತ್ತಿಗೆ ಹುಟ್ಟು ಈ ರೋಗದ ವೈರಾಣುಗಳು ದನಗಳ ಕಾಲು ಹಾಗೂ ಬಾಯಿಗೆ ದೊಡ್ಡ ಹುಣ್ಣು ಮಾಡುತ್ತವೆ. ಇದೇ ಕಾರಣಕ್ಕೆ ಇದನ್ನು ಕಾಲು- ಬಾಯಿ ಬೇನೆ ಎಂದೇ ಕರೆಯಲಾಗುತ್ತದೆ. ಯಾವುದಾದರೂ ದನ ಐದಾರು ದಿನಗಳವರೆಗೆ ಜ್ವರದಿಂದ ಬಳಲಿದರೆ ಅದು ಕಾಲ-ಬಾಯಿ ಬೇನೆಯ ಲಕ್ಷಣ ಎಂಬುದು ಅಧಿಕಾರಿಗಳ ಮಾಹಿತಿ.

ಈ ವೈರಾಣುವಿನಿಂದ ಬಳಲುವ ದನಗಳು ಕುಂಟುತ್ತವೆ. ಅದು ಪ್ರಾಥಮಿಕ ಲಕ್ಷಣ ಎಂದು ಪರಿಗಣಿ ತಕ್ಷಣ ಚಿಕಿತ್ಸೆ ಕೊಡಿಸಬೇಕು. ನಿರ್ಲಕ್ಷ್ಯ ಮಾಡಿದರೆ ದನಗಳು ಕುಂಟಾಗುವ ಸಾಧ್ಯತೆ ಇರುತ್ತದೆ.

 


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ