Breaking News

ಕಾಂಗ್ರೆಸ್​ನ ಎಟಿಎಂ ಕಲೆಕ್ಷನ್ ಮಾಡೆಲ್ ಪ್ರದರ್ಶಿಸಿ ಜನರನ್ನು ಎಚ್ಚರಿಸುವ ಕೆಲಸ ಮಾಡುತ್ತೇವೆ: ಅಶ್ವತ್ಥನಾರಾಯಣ

Spread the love

ಬೆಂಗಳೂರು: ”ಅಮಾಯಕ, ಪ್ರಾಮಾಣಿಕ ಗುತ್ತಿಗೆದಾರರ ಹಣ ಲೂಟಿ ಮಾಡಿ, ಐದು ರಾಜ್ಯಗಳ ಚುನಾವಣೆಗೆ ಕೊಡುವ ಕೆಲಸವನ್ನು ರಾಜ್ಯ ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ಇದರ ವಿರುದ್ಧ ಬಿಜೆಪಿ ಪ್ರತಿಭಟನೆ ಮಾಡುತ್ತಿದೆ. ಎಟಿಎಂ ಕಲೆಕ್ಷನ್ ಮಾಡೆಲ್ ಪ್ರದರ್ಶನ ಮಾಡಿ ಜನರನ್ನು ಎಚ್ಚರಿಸುವ ಕೆಲಸ ಮಾಡುತ್ತೇವೆ” ಎಂದು ಮಾಜಿ ಡಿಸಿಎಂ ಅಶ್ವತ್ಥನಾರಾಯಣ ಆರೋಪಿಸಿದ್ದಾರೆ.

ಮಲ್ಲೇಶ್ವರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ”ಲೂಟಿಕೋರರು ಸೇರಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಆದರೆ, ಬೆಂಗಳೂರು ನಗರದಲ್ಲಿ ಐಟಿ ದಾಳಿಗೆ ಒಳಗಾಗಿರುವ ಕೆಲ ವ್ಯಕ್ತಿಗಳು, ಕಾಂಟ್ರಾಕ್ಟರ್ ಅಸೋಸಿಯೇಷನ್ ಪದಾಧಿಕಾರಿಗಳು ಬಿಜೆಪಿ ಸರ್ಕಾರದ ಮೇಲೆ 40% ಆರೋಪ ಮಾಡಿದ್ದರು. ಈಗ ಆ ವ್ಯಕ್ತಿಯ ಮನೆಯಲ್ಲಿ 42 ಕೋಟಿ ಸಿಕ್ಕಿದೆ. ಬೇರೆ ಕಡೆ ನಡೆದ ಐಟಿ ದಾಳಿ ವೇಳೆಯಲ್ಲೂ ಕೋಟ್ಯಂತರ ರೂಪಾಯಿ ಸಿಕ್ಕಿದೆ‌” ಎಂದರು.

”ಪೇ ಸಿಎಂ, 40% ಕಮೀಷನ್ ಆಪಾದನೆ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈ ಹಣದಲ್ಲಿ ಭಾಗಿಯಾಗಿರುವುದು ಸ್ಪಷ್ಟವಾಗಿದೆ. ಐಟಿ ದಾಳಿ ವೇಳೆ ಹಣ ಸಿಕ್ಕಿರುವುದನ್ನು ಕಾನೂನಾತ್ಮಕವಾಗಿ ಸ್ವಾಗತ ಮಾಡಬೇಕಿತ್ತು. ಆದರೆ, ಅದನ್ನು ಬಿಟ್ಟು ರಾಜಕೀಯ ಪ್ರೇರಿತ ಅಂತ ಹೇಳಿದ್ದಾರೆ. ಭ್ರಷ್ಟಾಚಾರದ ಹಣ ಸಿಕ್ಕಿದೆ. ಈ ರೀತಿ ಹಣ ಸಂಗ್ರಹಿಸಿಟ್ಟುಕೊಂಡಿದ್ದು ತಪ್ಪು ಅಂತ ಹೇಳದೇ ರಾಜಕೀಯ ಪ್ರೇರಿತ ಅಂತ ಎಲ್ಲರೂ ಹೇಳುತ್ತಿದ್ದಾರೆ” ಎಂದು ಕಿಡಿಕಾರಿದರು.

 


Spread the love

About Laxminews 24x7

Check Also

ರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ

Spread the loveರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ ಬೆಳಗಾವಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ