Breaking News

8 ಗ್ರಾಂ ಚಿನ್ನ, 6 ಸಿಲಿಂಡರ್‌ ಉಚಿತ, ಪದವೀಧರರಿಗೆ 4,000 ಭತ್ಯೆ – ʻವಿಜಯʼ ಭರವಸೆಯತ್ತ ಜನರ ಚಿತ್ತ!

Spread the love

ಚೆನ್ನೈ: ತಮಿಳುನಾಡಿನ ರಾಜಕೀಯದಲ್ಲಿ ದಳಪತಿ ವಿಜಯ್ ದರ್ಬಾರ್ ಶುರುವಾಗಿದೆ. ರಾಜಕೀಯಕ್ಕೆ ಧುಮುಕಿದ ಮೊದಲ ಯತ್ನದಲ್ಲೇ ಬ್ಲಾಕ್‌ಬಸ್ಟರ್ ಶೋ ಕಂಡಿದ್ದು, ಪೊಲಿಟಿಕಲ್ ಸೂಪರ್‌ಸ್ಟಾರ್ ಆಗಿ ವಿಜಯ್ ದಳಪತಿ ಹೊರಹೊಮ್ಮಿದ್ದಾರೆ. ವಿಜಯ್ `ಮಾಸ್ಟರ್’ ಸ್ಟ್ರೋಕ್‌ಗೆ ಆಡಳಿತರೂಢ ಸ್ಟಾಲಿನ್ ನೇತೃತ್ವದ ಡಿಎಂಕೆ ಗಿರಗಿಟ್ಲೆ ಹೊಡೆದಿದೆ. ಅಲ್ಲದೇ 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

ಮೊದಲ ಬಾರಿಗೇ ರಾಜಕೀಯ ಅಗ್ನಿಪರೀಕ್ಷೆಯಲ್ಲಿ ವಿಜಯ್ ಡಿಸ್ಟಿಂಕ್ಷನ್‌ನಲ್ಲಿ ಪಾಸ್ ಆಗಿದ್ದಾರೆ. ಯುವ ಮತದಾರರು. ಸಿನಿಮಾ ಕ್ರೇಜ್.. ಕರೂರು ಕಾಲ್ತುಳಿತ ಪ್ರಕರಣದ ಅನುಕಂಪವೂ ವಿಜಯ್‌ಗೆ ಫ್ಲಸ್ ಪಯಿಂಟ್ ಆಗಿದೆ. ಇನ್ನು ವಿಜಯ್ ಜೊತೆ ಸರ್ಕಾರ ರಚಿಸಲು ಜೋಡಿಸಲು ಪ್ರಾದೇಶಿಕ ಪಕ್ಷಗಳು ಮುಂದಾಗಿವೆ. ಆದ್ರೆ ಚುನಾವಣಾ ಪ್ರಚಾರ ಸಂದರ್ಭದಲ್ಲಿ ದಳಪತಿ ವಿಜಯ್‌ ನೀಡಿದ್ದ ಭರವಸೆಗಳು ಬಗ್ಗೆ ಬಿಸಿಬಿಸಿ ಚರ್ಚಾ ವಿಷಯವಾಗಿದೆ.

ಹೌದು. ಮಹಿಳೆಯರಿಗೆ ಮಾಸಿಕ 2,500 ರೂ. ಸಹಾಯಧನ, ಸಣ್ಣ ರೈತರ ಬೆಳೆ ಸಾಲಮನ್ನಾ, ವೃದ್ಧರು, ವಿಧವೆಯರು & ಅಂಗವಿಕಲರಿಗೆ 3,000 ರೂ. ಮಾಸಿಕ ಭತ್ಯೆ, ಸಹೋದರಿ, ಮಗಳ ಮದುವೆಗೆ 8 ಗ್ರಾಂ ಚಿನ್ನ, 200 ಯೂನಿಟ್ ಉಚಿತ ವಿದ್ಯುತ್, ಕೊಳವೆ ನೀರು ಸರಬರಾಜು, ಪ್ರತಿ ವರ್ಷ 6 ಉಚಿತ ಎಲ್‌ಪಿಜಿ ಸಿಲಿಂಡರ್ ಭರವಸೆ, ಮಹಿಳಾ ಸ್ವಸಹಾಯ ಗುಂಪುಗಳಿಗೆ ಬಡ್ಡಿರಹಿತ ಸಾಲ, 5 ಲಕ್ಷ ರೂ. ವರೆಗೆ ಬಡ್ಡಿರಹಿತ ಸಾಲ, ಪದವೀಧರರಿಗೆ 4,000 ರೂ. ಭತ್ಯೆ, ಡಿಪ್ಲೋಮಾ ಪಡೆದವರಿಗೆ 2,500 ರೂ. ಭತ್ಯೆ ನೀಡುವುದಾಗಿ ವಿಜಯ್‌ ಭರವಸೆ ನೀಡಿದ್ದರು.

ಸದ್ಯ ಭವಿಷ್ಯ ಅತಂತ್ರವಾಗಿದ್ದರೂ, ಅತಿದೊಡ್ಡ ಪಕ್ಷವಾಗಿ ಟಿವಿಕೆ ಹೊರಹೊಮ್ಮಿದೆ. ಒಂದು ವೇಳೆ ಮೈತ್ರಿ ಮಾಡಿಕೊಂಡರೂ ವಿಜಯ್‌ ಅವ್ರೇ ಸಿಎಂ ಆಗಲಿದ್ದಾರೆ. ಆದ್ರೆ ಚುನಾವಣೆ ವೇಳೆ ಕೊಟ್ಟ ಭರವಸೆಗಳನ್ನು ಯಾವಾಗ ಈಡೇರಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ದಳಪತಿ `ಮಾಸ್ಟರ್’ ಸ್ಟ್ರೋಕ್‌ಗೆ ಕಾರಣಗಳೇನು?
> ಈ ಬಾರಿ ಮಹಿಳೆಯರು ಹೆಚ್ಚು ಮತ ಚಲಾಯಿಸಿದ್ದಾರೆ
> ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ವಿಜಯ್‌ಗೆ ಜೈ
> 18 ರಿಂದ 29 ವಯಸ್ಸಿನ ಶೇಕಡಾ 20% ರಷ್ಟು ಮತಗಳಿಂದ ವರ
> ನಟ ವಿಜಯ್ ಚರಿಸ್ಮಾ, ಸಿನಿಮಾ ಇಮೇಜ್‌ನಿಂದ ಯುವಕರ ಸೆಳೆತ
> ವಿಜಯ್ ವಿಸಿಲ್‌ಗೆ ಭರ್ಜರಿಯಾಗಿ ವಾಲಿದ ಹೊಸ ಮತದಾರರು
> ಆಡಳಿತ ವಿರೋಧಿ ಅಲೆಯಿಂದ ಹೊಸಸತನಕ್ಕೆ ಭಾಷ್ಯ ಬರೆದ ಮತದಾರ
> ಡಿಎಂಕೆ,ಎಐಡಿಎಂಕೆ ಎರಡೇ ಪಕ್ಷಗಳ ಆಡಳಿತದಿಂದ ಬೇಸತ್ತಿದ್ದ ಮತದಾರ
> ಡಿಎಂಕೆಯನ್ನ ಹಿಂದಿಕ್ಕಿ ಎಐಡಿಎಂಕೆನಿಂದ ಮತ ವಿಭಜನೆ ಮಾಡಿದ್ದೇ ವರ


Spread the love

About Laxminews 24x7

Check Also

ರೈತರಿಗೆ ಜಮೀನುಗಳಿಗೆ ತೆರಳಲು ಸಮರ್ಪಕ ರಸ್ತೆ ಸೌಲಭ್ಯ ಕಲ್ಪಿಸಿ

Spread the loveಸವದತ್ತಿ: ಚುಳಕಿ ಗ್ರಾಮದ ರೈತರಿಗೆ ಜಮೀನುಗಳಿಗೆ ತೆರಳಲು ಸಮರ್ಪಕ ರಸ್ತೆ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಗ್ರಾಮದ ರೈತರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ