Breaking News

Yearly Archives: 2026

ಈ ಹಿಂದೆ ಇದ್ದ ಪರಿಶಿಷ್ಟ ಜಾತಿಯ ಮೀಸಲಾತಿ ಶೇ. 15.ಪರಿಶಿಷ್ಟ ಪಂಗಡದ ಶೇ 3 ರಷ್ಟು ಮೀಸಲಾತಿ ಮುಂದುವರಿಯಲಿದೆ ಸಮಾಜ ಕಲ್ಯಾಣ ಸಚಿವ:- ಕೆ.ಹೆಚ್.ಮುನಿಯಪ್ಪ.

ಜನಸಂಖ್ಯೆ ಆಧಾರದ ಮೇಲೆ ಶೇ.24.1ರಷ್ಟು ಮೀಸಲಾತಿ ಕಲ್ಪಿಸಲು ಚರ್ಚೆ ಅಗತ್ಯ ಮೀಸಲಾತಿ ಮುಂದುವರಿಕೆಗೆ ಎಲ್ಲ ರಾಜಕೀಯ ಪಕ್ಷಗಳ ಒಮ್ಮತದ ನಿರ್ಧಾರ ಅತ್ಯಗತ್ಯ ನವದಹಲಿ: ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸುವ ಕುರಿತು ರಾಜ್ಯ ಸರ್ಕಾರ ಮತ್ತು ರಾಜಕೀಯ ಪಕ್ಷಗಳು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೆ.ಹೆಚ್ . ಮುನಿಯಪ್ಪ ರವರು ತಿಳಿಸಿದರು . ನವದೆಹಲಿಯಲ್ಲಿ ಮಾಧ್ಯಮ …

Read More »

Navratri Day 4: ಬ್ರಹ್ಮಾಂಡದ ಮೂಲ ಶಕ್ತಿ ಕೂಷ್ಮಾಂಡ ದೇವಿ – ಪುರಾಣ ಕಥೆ ಏನು?

ನವರಾತ್ರಿಯ ನಾಲ್ಕನೇ ದಿನ ಕೂಷ್ಮಾಂಡ ದೇವಿ ಆರಾಧನೆ ಮಾಡಲಾಗುತ್ತದೆ. ನವದುರ್ಗೆಯರಲ್ಲಿ ಕೂಷ್ಮಾಂಡ ದೇವಿ ನಾಲ್ಕನೆಯವಳು. ಈಕೆ ತನ್ನ ಮಧುರ ನಗುವಿನಿಂದ ಬ್ರಹ್ಮಾಂಡವನ್ನು ರಚಿಸಿದ ಕಾರಣ ಇವಳನ್ನು ಕೂಷ್ಮಾಂಡ ದೇವಿ ಎನ್ನಲಾಗುತ್ತದೆ. ಈ ದೇವಿಯನ್ನು ಪೂಜಿಸುವುದು ಹೇಗೆ? ಯಾವ ಬಗೆಯ ಪೂಜೆಯಿಂದ ಪ್ರಸನ್ನಳಾಗುತ್ತಾಳೆ ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ. ಕೂಷ್ಮಾಂಡ ದೇವಿಯ ಸ್ವರೂಪ ಹೇಗೆ? ಆದಿಶಕ್ತಿಯ ಪ್ರತಿರೂಪವಾದ ಕೂಷ್ಮಾಂಡ ದೇವಿಯ ರೂಪ ವಿಶೇಷವಾಗಿ ಗಮನ ಸೆಳೆಯುತ್ತದೆ. ಇವಳು ಸಿಂಹವಾಹನೆಯಾಗಿದ್ದು, ತೇಜೋಮಯಿಯಾಗಿದ್ದಾಳೆ. ಇವಳಿಗೆ …

Read More »

ಮೆರಿಟ್ ಅಭ್ಯರ್ಥಿಗಳಿಂದಲೂ ಹಣ ಪೀಕಿದ ಕೆಪಿಎಸ್‌ಸಿ ಗ್ಯಾಂಗ್!

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಅಕ್ರಮದ ಕುರಿತು ಜಾರಿ ನಿರ್ದೇಶನಾಲಯ  ನಡೆಸುತ್ತಿರುವ ತನಿಖೆಯಲ್ಲಿ ಬೆಚ್ಚಿಬೀಳಿಸುವ ಮಾಹಿತಿ ಹೊರಬಿದ್ದಿದೆ. ಪರೀಕ್ಷೆ ಮುಗಿದ ನಂತರ ಬಿಡುಗಡೆಯಾಗುವ 1:3 ಮೆರಿಟ್ ಲಿಸ್ಟ್‌ನಲ್ಲಿ ಅಭ್ಯರ್ಥಿಗಳು ಗಳಿಸಿದ ಗೌಪ್ಯ ಅಂಕಗಳ ಮಾಹಿತಿಯನ್ನು ದುರುಪಯೋಗಪಡಿಸಿಕೊಂಡು ಕೋಟಿ ಕೋಟಿ ಹಣ ದೋಚುತ್ತಿದ್ದುದು ಬಯಲಾಗಿದೆ. ಐಎಎಸ್ ಅಧಿಕಾರಿ ಹಾಗೂ ಮಾಜಿ ಪರೀಕ್ಷಾ ನಿಯಂತ್ರಕ ಗ್ಯಾನೇಂದ್ರ ಸೇರಿದಂತೆ ಹಲವು ಅಧಿಕಾರಿಗಳು ಮತ್ತು ಕೆಪಿಎಸ್‌ಸಿ ಸದಸ್ಯರು ಈ ಜಾಲದಲ್ಲಿದ್ದರು. ಮೆರಿಟ್ ಆಧಾರದಲ್ಲಿ ತಮ್ಮ …

Read More »

‘108’ ಅಂಬುಲೆನ್ಸ್‌ ಮೇಲೆ ಅವಲಂಬನೆ ಆಗಬೇಡಿ: ಆರೋಗ್ಯ ಸಚಿವ ಯು.ಟಿ.ಖಾದರ್‌ ಹೇಳಿಕೆ

ಬೆಂಗಳೂರು: 108 ಸೇವೆ ಮೇಲೆ ಅವಲಂಬನೆ ಆಗಬೇಡಿ. ನೀವೆ ವ್ಯವಸ್ಥೆ ಮಾಡಿಕೊಳ್ಳಿ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್‌  ಹೇಳಿದ್ದಾರೆ. ಎರಡು ತಿಂಗಳು ಅಂಬುಲೆನ್ಸ್‌ ಸೇವೆ ಸ್ಥಗಿತಗೊಳಿಸಿ ಮುಷ್ಕರ ಕೈಗೊಳ್ಳಲಾಗಿದೆ. ಈ ಕುರಿತು ಮಾತನಾಡಿದ ಯು.ಟಿ.ಖಾದರ್‌, 108 ಅಂಬುಲೆನ್ಸ್ ಮೇಲೆ ಅವಲಂಬನೆ ಆಗಬೇಡಿ. ಎರಡು ತಿಂಗಳು ಕಾಲ ಅಂಬುಲೆನ್ಸ್ ಮೇಲಿನ ಅವಲಂಬನೆ ತಪ್ಪಿಸಿ. ನಾವು ವ್ಯವಸ್ಥೆ ಸರಿ ಮಾಡುತ್ತಿದ್ದೇವೆ. ಹೊಸ ಅಂಬುಲೆನ್ಸ್ ಖರೀದಿ ಮಾಡಿ ಸಮಸ್ಯೆ ಸರಿ ಮಾಡುತ್ತೇವೆ ಎಂದು ತಿಳಿಸಿದರು. …

Read More »

ಸ್ಮಿತ್‌ ಮಚ್ಚಾರ್‌ ಮೇಲೆ ಹಲ್ಲೆ ನಡೆಸಿದ್ದ ವ್ಯಕ್ತಿಗೆ ಆಪ್ತರಾಗಿದ್ದ ಮಾಲ್ಡೀವ್ಸ್‌ನ ಇಬ್ಬರು ಸಹ-ಪೈಲಟ್‌ಗಳು ವಶಕ್ಕೆ

ದುಬೈ: ಕ್ಯಾಪ್ಟನ್‌ ಸ್ಮಿತ್‌ ಮಚ್ಚಾರ್‌  ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗೆ ಆಪ್ತರಾಗಿದ್ದ ಮಾಲ್ಡೀವ್ಸ್‌ನ ಇಬ್ಬರು ಸಹ-ಪೈಲಟ್‌ಗಳನ್ನು ಯುಎಇ ವಶಕ್ಕೆ ಪಡೆದಿದೆ. ಸೆಪ್ಟೆಂಬರ್ 30 ರಂದು ಫ್ಲೈದುಬೈ ವಿಮಾನ ಹಾರಾಟದ ವೇಳೆ ನಡೆದಿದ್ದ ಘಟನೆ ಸಂಬಂಧ, ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರೊಂದಿಗೆ ಕಾರ್ಯನಿರ್ವಹಿಸುತ್ತಿದ್ದ ‘ಫ್ಲೈದುಬೈ’  ಸಂಸ್ಥೆಯ ಮಾಲ್ಡೀವ್ಸ್ ಮೂಲದ ಇಬ್ಬರು ಸಹ-ಪೈಲಟ್‌ಗಳನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಮಚ್ಚಾರ್ ಅವರ ಮೇಲೆ ದಾಳಿ ನಡೆಸಿದ ಒಮಾನಿ ಸಹ-ಪೈಲಟ್ …

Read More »

ಸ್ಯಾಲರಿ ಹಣಕ್ಕೆ ಅತ್ತೆ, 1 ಕೋಟಿ ಮೌಲ್ಯದ ಫ್ಲಾಟ್‌ಗಾಗಿ ಮಾವನಿಂದ ಒತ್ತಾಯ – ಕಿರುಕುಳಕ್ಕೆ ಬೇಸತ್ತು ಟೆಕ್ಕಿ ಆತ್ಮಹತ್ಯೆ

ಮುಂಬೈ: ಅತ್ತೆ-ಮಾವನ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಟೆಕ್ಕಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ  ಪುಣೆಯಲ್ಲಿ  ನಡೆದಿದೆ. ಪೊಲೀಸರು ಆಕೆಯ ಪತಿ ಮತ್ತು ಆತನ ಕುಟುಂಬದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತ್ರಿಷ್ಣಾ ರಾಹುಲ್ ಸಕ್ಪಾಲ್ ಎಂಬ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2018ರಲ್ಲಿ ರಾಹುಲ್ ಸಕ್ಪಾಲ್ ಅವರನ್ನು ವಿವಾಹವಾಗಿದ್ದರು. ಮಹಿಳೆಯ ತಂದೆ ಬಾಲಕೃಷ್ಣ ನಿಕಮ್ ಅವರು ಪೊಲೀಸ್‌ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ದೂರು ನೀಡಿದ್ದಾರೆ. ವಿವಾಹವಾದಾಗಿನಿಂದಲೂ ತ್ರಿಷ್ಣಾಳ ಪೂರ್ತಿ ವೇತನವನ್ನು …

Read More »

ಮಾಡೆಲ್‌ ಗೆಳತಿಯಿಂದ ಬ್ಲ್ಯಾಕ್‌ಮೇಲ್? – ಫ್ಲ್ಯಾಟ್‌ನ ನಾಲ್ಕನೇ ಮಹಡಿಯಿಂದ ಬಿದ್ದು ಉದ್ಯಮಿ ಸಾವು

ಲಕ್ನೋ: ಫ್ಲ್ಯಾಟ್‌ನ ನಾಲ್ಕನೇ ಮಹಡಿಯಿಂದ ಬಿದ್ದು 28 ವರ್ಷದ ಉದ್ಯಮಿ ಶಿವ ಶರ್ಮಾ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಉದ್ಯಮಿಯ ತಾಯಿ ರಂಜನಾ ಶರ್ಮಾ, ಆತನ ಗೆಳತಿ ಮಾಡೆಲ್‌ ಶ್ರದ್ಧಾ ದುಬೆ ವಿರುದ್ಧ ಕೊಲೆ, ಹಲ್ಲೆ ಮತ್ತು ಬ್ಲ್ಯಾಕ್‌ಮೇಲ್  ಆರೋಪ ಮಾಡಿದ್ದಾರೆ. ಲಕ್ನೋದಲ್ಲಿ ಅಕ್ಟೋಬರ್‌ 9ರಂದು ಈ ಘಟನೆ ನಡೆದಿದೆ. ಉದ್ಯಮಿ ಶಿವ ಶರ್ಮಾ ಗೆಳತಿಯ ಫ್ಲ್ಯಾಟ್‌ನ ನಾಲ್ಕನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು. ಮಾಡೆಲ್‌ ಹಾಗೂ ಸೋಷಿಯಲ್‌ …

Read More »

ಬೆಂಗಳೂರಿನಲ್ಲಿ ದಾಖಲೆ ಪ್ರಮಾಣದ ಮಾದಕ ವಸ್ತು ಜಪ್ತಿ – ಇಬ್ಬರು ಅರೆಸ್ಟ್

ಬೆಂಗಳೂರು: ನಗರದಲ್ಲಿ ಕುಂಬಳಗೋಡು ಪೊಲೀಸರು ದಾಖಲೆ ಪ್ರಮಾಣದ ಗಾಂಜಾ ವಶಕ್ಕೆ ಪಡೆದು, ಇಬ್ಬರನ್ನು ಬಂಧಿಸಿದ್ದಾರೆ. ಕೇರಳ ಮತ್ತು ಒಡಿಶಾ ರಾಜ್ಯದಿಂದ ಬೆಂಗಳೂರಿಗೆ ಬರ್ತಿದ್ದ ಸುಮಾರು 1.70 ಕೋಟಿ ರೂ. ಮೌಲ್ಯದ 317 ಕೆಜಿ ಮಾದಕ ವಸ್ತುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ ಆರೋಪಿಗಳಾದ ಚಾಂದ್ ಪಾಷ, ವಿಷ್ಣುವನ್ನು ಬಂಧಿಸಿದ್ದಾರೆ.  ಇಬ್ಬರು ಆರೋಪಿಗಳು ಕಾರಿನ ಸೀಟ್‌ಗಳಲ್ಲಿ ಗಾಂಜಾವನ್ನು ಆಡಗಿಸಿ ನಗರಕ್ಕೆ ಸಾಗಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಹೊಂದಿದ್ದ …

Read More »

ಬೆಂಗಳೂರಿನಲ್ಲಿ ದಾಖಲೆ ಪ್ರಮಾಣದ ಮಾದಕ ವಸ್ತು ಜಪ್ತಿ – ಇಬ್ಬರು ಅರೆಸ್ಟ್

ಮುಂಬೈ: ಟೈರ್ ಪಂಕ್ಚರ್ ಆದ ಬಿಎಂಡಬ್ಲ್ಯೂ  ಕಾರ್‌ನ ವಿಮೆಗಾಗಿ 14 ವರ್ಷಗಳ ಕಾನೂನು ಹೋರಾಟದಲ್ಲಿ ವ್ಯಕ್ತಿಗೆ ಜಯ ಸಿಕ್ಕಿದ್ದು, 70 ಲಕ್ಷ ರೂ. ಪರಿಹಾರ ಲಭ್ಯವಾಗಿದೆ. ಕಾರು ಮಾಲೀಕ ರವಿಕಾಂತ್ ಪಾಟೀಲ್ ಅವರು ಪಂಕ್ಚರ್ ಆದ ತನ್ನ ಕಾರನ್ನು ಹಾಗೇ ಬಿಟ್ಟು ಹೋಗಬಾರದಿತ್ತು ಎಂದು ತಿಳಿಸಿ, ಇನ್ಶೂರೆನ್ಸ್ ಕ್ಲೈಮ್  ನೀಡಲು ನಿರಾಕರಿಸಿತ್ತು. ಇದಕ್ಕೆ ಗ್ರಾಹಕ ಆಯೋಗವು ಕೆಟ್ಟುಹೋದ ವಾಹನವನ್ನು ನಿರ್ಜನವಾಗಿ ಬಿಡುವುದರ ಮೇಲೆ ಪಾಲಿಸಿಯು ಯಾವುದೇ ಸಂಪೂರ್ಣ ನಿಷೇಧವನ್ನು ವಿಧಿಸಿರಲಿಲ್ಲ. …

Read More »

ಕರ್ನಾಟಕಕ್ಕೆ ಸುಧಾ ಯಾದವ್‌ ನೂತನ ರಾಜ್ಯಪಾಲರು; 6 ರಾಜ್ಯಗಳಿಗೆ ಹೊಸ ಗವರ್ನರ್‌ಗಳ ನೇಮಕ

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕರ್ನಾಟಕ ಸೇರಿದಂತೆ  ಆರು ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಬದಲಾವಣೆಯಲ್ಲಿ ನಾಲ್ವರಿಗೆ ಹೊಸದಾಗಿ ರಾಜ್ಯಪಾಲರ ಜವಾಬ್ದಾರಿ ನೀಡಲಾಗಿದ್ದು, ಇಬ್ಬರು ಹಾಲಿ ರಾಜ್ಯಪಾಲರನ್ನು ಬೇರೆ ರಾಜ್ಯಗಳಿಗೆ ವರ್ಗಾಯಿಸಲಾಗಿದೆ. ಕರ್ನಾಟಕದ ನೂತನ ರಾಜ್ಯಪಾಲರಾಗಿ ಬಿಜೆಪಿ ಹಿರಿಯ ನಾಯಕಿ ಹಾಗೂ ಪಕ್ಷದ ಸಂಸದೀಯ ಮಂಡಳಿ ಸದಸ್ಯೆ ಡಾ. ಸುಧಾ ಯಾದವ್‌ ಅವರನ್ನು ನೇಮಕ ಮಾಡಲಾಗಿದೆ. ಇನ್ನು ಸಿಕ್ಕಿಂ ರಾಜ್ಯಪಾಲರಾಗಿದ್ದ ಓಂ ಪ್ರಕಾಶ್‌ …

Read More »