Breaking News

Yearly Archives: 2026

ವರ್ಷದೊಳಗೆ 2.30 ಕೊಟಿ ರೂಪಾಯಿ ವೆಚ್ಚದ ಅಗ್ನಿಶಾಮಕ ಠಾಣೆ ಕಾಮಗಾರಿ ಪೂರ್ಣ: ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ 9.09 ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮೂಡಲಗಿ- ತಾಲ್ಲೂಕಿನ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ಮಾಡಿದ್ದು, ವರ್ಷದೊಳಗೆ ಕಾಮಗಾರಿಯು ಪೂರ್ಣಗೊಳ್ಳಲಿದೆ ಎಂದು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು. ಬುಧವಾರ ಪಟ್ಟಣದ ದನಗಳ ಪೇಟೆಯ ಹತ್ತಿರ ಅಂದಾಜು 2.30 ಕೋಟಿ ರೂಪಾಯಿ ವೆಚ್ಚದಲ್ಲಿ (ಪಟಗುಂದಿ ರಸ್ತೆ) ನಿರ್ಮಾಣಗೊಳ್ಳಲಿರುವ ನೂತನ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ …

Read More »

ಘಟಪ್ರಭಾದಲ್ಲಿ ಕಾಶೀ ಯಾತ್ರೆಗೆ ಹೊರಟ ಭಕ್ತರಿಗೆ ಆತ್ಮೀಯ ಬೀಳ್ಕೊಡುಗೆ

ಸೋಮವಾರ ದಿನಾಂಕ 06-04-2026 ರಂದು ಘಟಪ್ರಭಾ ರೈಲು ನಿಲ್ದಾಣದಿಂದ ಹಲವಾರು ಭಕ್ತರು ಕಾಶಿ ಗಯಾ ಅಯೋಧ್ಯೆ ಸೇರಿದಂತೆ ಉತ್ತರ ಭಾರತದ ಪುಣ್ಯ ಕ್ಷೇತ್ರಗಳಿಗೆ ಭಾರತ ಸರಕಾರದ ಕ್ಷೇತ್ರ ದರ್ಶನ ಯೋಜನೆಯಲ್ಲಿ ಪ್ರಯಾಣ ಬೆಳೆಸಿದರು 14-04-2026 ರ ವರೆಗೆ ನಡೆಯುವ ಯಾತ್ರೆಯಲ್ಲಿ ಆತ್ಮೀಯರಾದ ಮಾರುತಿ ವಿಜಯನಗರ, ಮಹಾದೇವ ಯರನಾಳ, ರಾಜು ವಾಲಿಕಾರ ಮುಂತಾದವರು ಸೇರಿದಂತೆ ಹಲವಾರು ಭಕ್ತರು ಪ್ರಯಾಣ ಬೆಳೆಸಿದರು ಗುಬ್ಬಲಗುಡ್ಡ ಶ್ರೀ ಕೆಂಪಯ್ಯ ಸ್ವಾಮಿಗಳ ಮಠದ ಡಾ, ಮಲ್ಲಿಕಾರ್ಜುನ ಮಹಾಸ್ವಾಮಿಗಳು …

Read More »

ಬೆಳಗಾವಿಯ ಯೆಳ್ಳೂರ ಫಲಕ ವಿವಾದ: 10 ವರ್ಷಗಳ ಸುದೀರ್ಘ ಹೋರಾಟಕ್ಕೆ ಸಿಕ್ಕಿತು ಜಯ; ಎಲ್ಲಾ ಆರೋಪಿಗಳು ನಿರ್ದೋಷಿ ಮುಕ್ತ!

ಬೆಳಗಾವಿಯ ಯೆಳ್ಳೂರಿನಲ್ಲಿ ಹತ್ತು ವರ್ಷಗಳ ಹಿಂದೆ ನಡೆದ ‘ಮಹಾರಾಷ್ಟ್ರ ರಾಜ್ಯ ಯೆಳ್ಳೂರ’ ಫಲಕ ವಿವಾದಕ್ಕೆ ಸಂಬಂಧಿಸಿದಂತೆ ಈಗ ಮಹತ್ವದ ತೀರ್ಪು ಹೊರಬಿದ್ದಿದೆ. ಅಂದು ಗ್ರಾಮಸ್ಥರ ಮೇಲೆ ದಾಖಲಾಗಿದ್ದ ಎಲ್ಲಾ ಏಳು ಪ್ರಕರಣಗಳಲ್ಲಿಯೂ ಇದೀಗ ನ್ಯಾಯಾಲಯವು ಎಲ್ಲರನ್ನೂ ನಿರ್ದೋಷಿಗಳೆಂದು ಘೋಷಿಸಿದ್ದು, ಮರಾಠಿ ಭಾಷಿಕರ ಕಾನೂನು ಹೋರಾಟಕ್ಕೆ ದೊಡ್ಡ ಯಶಸ್ಸು ಸಿಕ್ಕಂತಾಗಿದೆ. ಜುಲೈ 27, 2014 ರಂದು ಯೆಳ್ಳೂರಿನಲ್ಲಿ ‘ಮಹಾರಾಷ್ಟ್ರ ರಾಜ್ಯ’ ಎಂಬ ಫಲಕವನ್ನು ತೆರವುಗೊಳಿಸಿದ ಹಿನ್ನಲೆ ದೊಡ್ಡ ಮಟ್ಟದ ಗದ್ದಲ ನಡೆದಿತ್ತು. …

Read More »

ಬೆಳಗಾವಿಯಲ್ಲಿ 107ನೇ ವರ್ಷದ ಶಿವಜಯಂತಿ ಸಂಭ್ರಮ: ಏಪ್ರಿಲ್ 21ಕ್ಕೆ ಭವ್ಯ ರೂಪಕಗಳ ಮೆರವಣಿಗೆ!

ಬೆಳಗಾವಿಯ ಐತಿಹಾಸಿಕ ಹಾಗೂ ಸಾಂಪ್ರದಾಯಿಕ ಶಿವಜಯಂತಿ ಉತ್ಸವದ ಪೂರ್ವಸಿದ್ಧತೆಗಾಗಿ ಶಹಾಪುರ ಕೇಂದ್ರವರ್ತಿ ಶ್ರೀ ಶಿವಜಯಂತಿ ಉತ್ಸವ ಮಹಾಮಂಡಳದ ಮಹತ್ವದ ಸಭೆ ಜರುಗಿತು. 107 ವರ್ಷಗಳ ಇತಿಹಾಸವಿರುವ ಈ ಬಾರಿಯ ಉತ್ಸವದಲ್ಲಿ ಏಪ್ರಿಲ್ 19 ರಂದು ಶಿವಜಯಂತಿ ಹಾಗೂ ಏಪ್ರಿಲ್ 21 ರಂದು ಭವ್ಯ ರೂಪಕಗಳ ಮೆರವಣಿಗೆ ನಡೆಸಲು ನಿರ್ಧರಿಸಲಾಗಿದೆ. ಶಹಾಪುರದ ಸಾಯಿಗಣೇಶ ಸೊಸೈಟಿ ಸಭಾಂಗಣದಲ್ಲಿ ಅಧ್ಯಕ್ಷ ನೇತಾಜಿ ಜಾಧವ್ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಿತು. ಈ ವೇಳೆ ಮಾತನಾಡಿದ …

Read More »

ನಂದಗಡ ಆಸ್ಪತ್ರೆಯಲ್ಲಿ ವೈದ್ಯರ ಗೈರು: ರೋಗಿಗಳ ಅಳಲು ಕೇಳುವವರೇ ಇಲ್ಲ!

ಖಾನಾಪೂರ ತಾಲೂಕಿನ ನಂದಗಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ. ಚಿಕಿತ್ಸೆಗಾಗಿ ಬರುವ ರೋಗಿಗಳು ಗಂಟೆಗಟ್ಟಲೆ ಕಾಯುವಂತಾಗಿದ್ದು, ಕೇಳುವವರು ಯಾರೂ ಇಲ್ಲದಂತಾಗಿದೆ. ಖಾನಾಪೂರ ತಾಲೂಕಿನ ನಂದಗಡದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಬರುವ ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಮುಖ್ಯವಾಗಿ ಇಲ್ಲಿನ ಪೀಡಿಯಾಟ್ರಿಷಿಯನ್ (ಮಕ್ಕಳ ವೈದ್ಯರು) ಲಭ್ಯವಿಲ್ಲದ ಕಾರಣ, ಜ್ವರ ಮತ್ತು ಇತರೆ ಕಾಯಿಲೆಗಳಿಂದ ಬಳಲುತ್ತಿರುವ ನೂರಾರು ಮಕ್ಕಳು ಸರಿಯಾದ ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆಯೆಂಬಂತೆ, ತಮಗೆ …

Read More »

KPCCಗೆ ಸಚಿವ ತಿಮ್ಮಾಪುರ ‘ದೋಖಾ’: ಬಾಗಲಕೋಟೆಯಲ್ಲಿ ‘ಬಾರ್ ಮಾಲೀಕ’ ಕಂ ಪತ್ರಕರ್ತನ ಹಗಲು ದರೋಡೆ!

ಬಾಗಲಕೋಟೆ ಉಪಚುನಾವಣೆ ಗೆಲ್ಲಲು ಕೆಪಿಸಿಸಿ ಕಳುಹಿಸಿದ 41 ಲಕ್ಷ ರೂಪಾಯಿ ಮಾಧ್ಯಮ ನಿರ್ವಹಣೆಯ ಹಣ ಈಗ ಅಬಕಾರಿ ಸಚಿವರ ಆಪ್ತ ‘ಡೀಲ್ ಮಾಸ್ಟರ್’ ಪತ್ರಕರ್ತನ ಪಾಲಾಗಿದೆಯೇ? ರಾತ್ರೋರಾತ್ರಿ ಬ್ಯಾಂಕ್‌ನಿಂದ ಹಣ ಡ್ರಾ ಮಾಡಿ, ಕಾಂಗ್ರೆಸ್ ಸಿದ್ಧಾಂತಕ್ಕೆ ವಿರುದ್ಧವಾದ ಬಲಪಂಥೀಯ ಪತ್ರಕರ್ತರಿಗೆ ಮಾತ್ರ ಲಕ್ಷಾಂತರ ರೂಪಾಯಿ ಹಂಚಿದ ಈ ‘ಬಾರ್ ಮಾಲೀಕ’ ಪತ್ರಕರ್ತನ ಅಸಲಿ ಮುಖವಾಡ ಈಗ ಕಳಚಿದೆ! ಸಂಜೆಯಾಗುತ್ತಿದ್ದಂತೆ ಮಿನಿಸ್ಟರ್ ಜೊತೆ ಪೆಗ್ ಏರಿಸುವ ಈ ಆಪ್ತ ಪತ್ರಕರ್ತ, ಅಲ್ಪಸಂಖ್ಯಾತ, …

Read More »

ನಕಲಿ ಸಿಗರೆಟ್ ಮಾರಾಟ : ಸುಮಾರು ₹40 ಲಕ್ಷ ಮೌಲ್ಯದ ಮಾಲು ವಶ

ಬೆಂಗಳೂರು,ಏ.08:-ಗಾಂಧಿನಗರದಲ್ಲಿ ಸಿಗುವ ಸಿಗರೇಟ್ ಸೇದ್ತಿದ್ರೆ ಹುಷಾರ್ ಫಾರಿನ್ ಸಿಗರೇಟ್ ಅಂತ ಸೇದಿದ್ರೆ ನಿಮ್ಮ ಆರೋಗ್ಯ ಕೆಡೋದು ಗ್ಯಾರಂಟಿ ಗಾಂಧಿನಗರದಲ್ಲಿ ತಯಾರಾಗುತ್ತಿತ್ತು ನಕಲಿ ಫಾರಿನ್ ಸಿಗರೇಟ್ ಗಾಂಧಿನಗರದ ಜಿನ್ನಾಗರಮ್ಮದೇವಿ ದೇವಸ್ಥಾನದ ಬಳಿಯೇ ನಡೆಯುತ್ತಿತ್ತು ಅಕ್ರಮ ಉಪ್ಪಾರಪೇಟೆ ಪೊಲೀಸರಿಂದ ಲಕ್ಷಾಂತರ ರೂಪಾಯಿ ಬೆಲೆಯ ನಕಲಿ ಸಿಗರೇಟ್ ಪತ್ತೆ ತಯಾರು ಮಾಡೋ ಗೋಡೌನ್ ಕಂಡು ಪೊಲೀಸರೇ ಶಾಕ್ ಕನಕನ ಕಿಂಡಿಯನ್ನು ಮೀರಿಸುವ ರೀತಿ ಇದೆ ನಕಲಿ ಸಿಗರೇಟ್ ತಯಾರು ಮಾಡುವ ಸೀಕ್ರೆಟ್ ರೂಮ್ ಬ್ರಾಂಡೆಂಡ್ …

Read More »

ಕೌಟುಂಬಿಕ ಕಲಹಕ್ಕೆ ಬಲಿಯಾದ ಪತಿ

ಬೆಂಗಳೂರು,ಏ.08:- ಕೌಟುಂಬಿಕ ಕಲಹಕ್ಕೆ ಬಲಿಯಾದ ಪತಿ ತೌಹಿದ್ ಪಾಷ ಮೃತ ವ್ಯಕ್ತಿ ತೌಹಿದ್ ಪಾಷ ಕುಟುಂಬಸ್ಥರಿಂದ ಕೊಲೆ ಆರೋಪ ಪತ್ನಿ ಸುಹಾನ, ಅತ್ತೆ, ಮಾವನ ಮೇಲೆ ಕೊಲೆ ಆರೋಪ ಕಳೆದ ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದ ಜೋಡಿ ಲವ್ ಕಮ್ ಅರೆಂಜ್ ಮ್ಯಾರೇಜ್ ಆಗಿದ್ದ ತೌಹಿಬ್ ಪಾಷ, ಸುಹಾನ ಮದುವೆಯಾಗಿ ಎರಡು ತಿಂಗಳಿನಿಂದಲೇ ಕೌಟುಂಬಿಕ ಕಲಹ ಇಬ್ಬರ ನಡುವೆ ಸಣ್ಣ ಪುಟ್ಟ ವಿಚಾರಕ್ಕೆ ಗಲಾಟೆ ಹೆಂಡತಿ, ಅತ್ತೆ ಮಾವನ ಜೊತೆ …

Read More »

ರಾಜ್ಯದಲ್ಲಿ ಆಟೋ ಗ್ಯಾಸ್ ಕೊರತೆ : ವದಂತಿಗಳಿಗೆ ಕಿವಿಗೊಡಬೇಡಿ- ಸಾರ್ವಜನಿಕರಿಗೆ ಕರೆ*

​ಬೆಂಗಳೂರು,ಏ.08:- ರಾಜ್ಯದ ವಿವಿಧ ಆಟೋ ಗ್ಯಾಸ್ ಬಂಕ್‌ಗಳಲ್ಲಿ ಅನಿಲದ ದಾಸ್ತಾನು ಕೊರತೆಯಿದೆ ಎಂಬ ತಪ್ಪು ಮಾಹಿತಿಯ ಆಧಾರದ ಮೇಲೆ, ಕಳೆದ ಕೆಲವು ದಿನಗಳಿಂದ ಆಟೋ ಮಾಲೀಕರು ಮತ್ತು ಚಾಲಕರು ಬಂಕ್‌ಗಳ ಮುಂದೆ ಸುದೀರ್ಘ ಸರತಿ ಸಾಲಿನಲ್ಲಿ ನಿಲ್ಲುತ್ತಿರುವ ಅಂಶ ಸರ್ಕಾರದ ಗಮನಕ್ಕೆ ಬಂದಿದೆ. ಈ ಕುರಿತು ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳು ಕೇವಲ ವದಂತಿಗಳಾಗಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು …

Read More »

ಅಪ್ರಾಪ್ತ ಬಾಲಕನ ಮೇಲೆ ಅತ್ಯಾಚಾರ ; ಪೋಕ್ಸೋ ಕಾಯ್ದೆಯಡಿ ವಿವಾಹಿತ ಮಹಿಳೆಯ ಬಂಧನ!

ಛತ್ತೀಸ್‌ಗಢ,ಏ.08 :- ಸಾಮಾಜಿಕ ಜಾಲತಾಣದಲ್ಲಿ ಅಪ್ರಾಪ್ತ ಬಾಲಕನೊಂದಿಗೆ ಸ್ನೇಹ ಬೆಳೆಸಿ, ಆತನನ್ನು ಹೋಟೆಲ್ ಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ ಆರೋಪದ ಮೇಲೆ ವಿವಾಹಿತ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ. ಛತ್ತೀಸ್‌ಗಢದ ಕಬೀರಧಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಬಾಲಕನ ಮೇಲೆ ಅತ್ಯಾಚಾರ ಎಸಗಿದ 26 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ ಮತ್ತು ಆಕೆಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಮಹಿಳೆ 16 ವರ್ಷದ ಬಾಲಕನ ಮೇಲೆ ಭಾವನಾತ್ಮಕ ಒತ್ತಡ ಮತ್ತು …

Read More »