Breaking News

Yearly Archives: 2026

ಕೇಂದ್ರದ ಬರ ಅಧ್ಯಯನ ತಂಡದಿಂದ ಕೆಆರ್‌ಎಸ್‌, ಬರಪೀಡಿತ ಹಳ್ಳಿಗಳ ಪರಿಶೀಲನೆ

ಮಂಡ್ಯ: ಜಿಲ್ಲೆಯಲ್ಲಿ ತಲೆದೋರಿರುವ ಬರ ಪರಿಸ್ಥಿತಿಯ ವಸ್ತುಸ್ಥಿತಿ ಅರಿಯಲು ಕೇಂದ್ರದ ಬರ ಅಧ್ಯಯನ ತಂಡ  ಭೇಟಿ ನೀಡಿ ಪರಿಶೀಲನೆ ನಡೆಸಿತು. ಕೇಂದ್ರ ಬರ ಅಧ್ಯಯನ ಸಮಿತಿ ಸದಸ್ಯ ಡಾ.ನವೀನ್ ಕುಮಾರ್ ಜೈನ್ ನೇತೃತ್ವದ ಅಧಿಕಾರಿಗಳ ತಂಡ, ಪ್ರಮುಖ ಜಲಾಶಯವಾದ ಕೆಆರ್‌ಎಸ್ ಡ್ಯಾಂ  ಸೇರಿದಂತೆ ಜಿಲ್ಲೆಯ ಹಲವೆಡೆ ಭೇಟಿ ನೀಡಿ ಬರಪೀಡಿತ ಪ್ರದೇಶಗಳ ನೈಜ ಸ್ಥಿತಿಯ ಮಾಹಿತಿ ಕಲೆಹಾಕಿತು. ಮೊದಲಿಗೆ ಕೃಷ್ಣರಾಜ ಸಾಗರ ಅಣೆಕಟ್ಟಿಗೆ ಭೇಟಿ ನೀಡಿದ ಕೇಂದ್ರ ತಂಡ, ಜಲಾಶಯದ …

Read More »

ಮಗನ ಸಾವಿನಲ್ಲೂ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಪೋಷಕರು

ಹಾಸನ: ಹೊಳೆನರಸೀಪುರದ  ಚಾಕೇನಹಳ್ಳಿ ಕಟ್ಟೆ ಗ್ರಾಮದಲ್ಲಿ ಅಪಘಾತದಿಂದ  ಮೃತಪಟ್ಟ ಪುತ್ರನ ಅಂಗಾಂಗ ದಾನ  ಮಾಡಿ ಪೋಷಕರು ಸಾರ್ಥಕತೆ ಮೆರೆದಿದ್ದಾರೆ. ಗ್ರಾಮದ ರವಿ (31) ಮೂರು ತಿಂಗಳ ಹಿಂದೆ ಪಾರಸನಹಳ್ಳಿ ಗ್ರಾಮದ ಬಳಿ ನಡೆದ ಹಿಟ್‌ & ರನ್‌ನಲ್ಲಿ ಗಂಭಿರವಾಗಿ ಗಾಯಗೊಂಡಿದ್ದರು. ಬೆಂಗಳೂರಿನ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಅ.2 ರಂದು ಸಾವನ್ನಪ್ಪಿದ್ದರು. ಮಗನ ಸಾವಿನ ಬಳಿಕ ಪೋಷಕರು ಅಂಗಾಂಗ ದಾನ ಮಾಡಿದ್ದಾರೆ. ಈ ಮೂಲಕ ಮಗನ …

Read More »

ಇಂದು ನಮ್ಮ ಮೆಟ್ರೋ ರೈಲು ಸೇವೆ ವಿಸ್ತರಣೆ

ಬೆಂಗಳೂರು: ಇಂದು ನಮ್ಮ ಮೆಟ್ರೋ ರೈಲು ಸೇವೆ ವಿಸ್ತರಣೆ ಮಾಡಲಾಗಿದೆ. ಕೊನೆಯ ರೈಲು ಹೊರಡುವ ಸಮಯ ವಿಸ್ತರಣೆಯಾಗಿದೆ. ವೈಟ್‌ಫೀಲ್ಡ್ ಹಾಗೂ ಚಲ್ಲಘಟ್ಟ ನಿಲ್ದಾಣದಿಂದ ರಾತ್ರಿ 12ಕ್ಕೆ ಕೊನೆ ಮೆಟ್ರೋ ರೈಲು ಹೊರಡಲಿದೆ. ಮಾದವಾರ ನಿಲ್ದಾಣದಿಂದ ರಾತ್ರಿ 12:15ಕ್ಕೆ ಕೊನೆ ಮೆಟ್ರೋ ಸಂಚಾರ ಮಾಡಲಿದೆ. ರೇಷ್ಮೆ ಸಂಸ್ಥೆ ನಿಲ್ದಾಣದಿಂದ ರಾತ್ರಿ 12:20ಕ್ಕೆ ಕೊನೆ ಮೆಟ್ರೋ ಹೊರಡಲಿದೆ. ಯೆಲ್ಲೋ ಮಾರ್ಗ ಆರ್.ವಿ ರಸ್ತೆ ನಿಲ್ದಾಣದಿಂದ ರಾತ್ರಿ 12:15ಕ್ಕೆ ಸಂಚರಿಸಲಿದೆ. ಬೊಮ್ಮನಹಳ್ಳಿ ನಿಲ್ದಾಣದಿಂದ ರಾತ್ರಿ …

Read More »

ಧಮ್ ಇದ್ರೆ ಅಜ್ಜಯ್ಯನ ಮೇಲೆ ಆಣೆ ಮಾಡಿ – ಚಲುವರಾಯಸ್ವಾಮಿಗೆ ಸುರೇಶ್ ಗೌಡ ಚಾಲೆಂಜ್

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ  ಆಣೆ-ಪ್ರಮಾಣ ರಾಜಕೀಯ ಶುರುವಾಗಿದೆ. ನಾಗಮಂಗಲದ  ಬಗರ್‌ಹುಕುಂ ಭೂಮಿ ( ಮಂಜೂರಾತಿ ರದ್ದು ಪ್ರಕರಣ ಈಗ ಕೈ-ದಳ ನಾಯಕರ ನಡುವಿನ ಸಮರಕ್ಕೆ ನಾಂದಿ ಹಾಡಿದೆ. ಸಚಿವ ಚಲುವರಾಯಸ್ವಾಮಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿರುವ ಮಾಜಿ ಶಾಸಕ ಸುರೇಶ್ ಗೌಡ, ಧಮ್ ಇದ್ರೆ ಅಜ್ಜಯ್ಯನ ಮೇಲೆ ಆಣೆ ಮಾಡುವಂತೆ ಬಹಿರಂಗ ಸವಾಲು ಹಾಕಿದ್ದಾರೆ. ಅಲ್ಲದೇ ರೈತರಿಂದ ಒಂದು ರೂಪಾಯಿ ಲಂಚ ಪಡೆದಿರುವುದು ಸಾಬೀತಾದರೆ ಕತ್ತು ಕೊಯ್ದುಕೊಂಡು ಆತ್ಮಹತ್ಯೆ …

Read More »

ಕರ್ನಾಟಕದಲ್ಲಿ ತೀವ್ರ ಬರ ಪರಿಸ್ಥಿತಿ; ಪ್ರಧಾನಿ ಮೋದಿಗೆ ಪತ್ರ ಬರೆದ ಖರ್ಗೆ

ನವದೆಹಲಿ: ಕರ್ನಾಟಕದಲ್ಲಿ ತೀವ್ರ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ  ಎಐಸಿಸಿ ಅಧ್ಯಕ್ಷ, ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ್‌ ಖರ್ಗೆ ಪತ್ರ ಬರೆದಿದ್ದಾರೆ. ಕರ್ನಾಟಕದಲ್ಲಿ ಸೆಪ್ಟೆಂಬರ್‌ವರೆಗೆ 58% ಮಳೆ ಕೊರತೆಯಾಗಿದೆ. ವ್ಯಾಪಕ ಬೆಳೆ ಹಾನಿಯಾಗಿ ಲಕ್ಷಾಂತರ ರೈತ ಕುಟುಂಬಗಳು ಸಂಕಷ್ಟದಲ್ಲಿವೆ. ಕರ್ನಾಟಕಕ್ಕೆ 3,705.30 ಕೋಟಿ ರೂ. NDRF- SDRF ನೆರವು ಬಿಡುಗಡೆ ಮಾಡಿ ಎಂದು ಪ್ರಧಾನಿಗೆ ಖರ್ಗೆ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಬರದಿಂದ 18,748.23 ಕೋಟಿ ರೂ. ನಷ್ಟ …

Read More »

180 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್‌ ಸ್ಮಿತ್‌ಗೆ 1 ಕೋಟಿ ರೂ. ಘೋಷಣೆ

ನವದೆಹಲಿ: ತನ್ನ ಜೀವದ ಹಂಗು ತೊರೆದು ಫ್ಲೈದುಬೈ ವಿಮಾನದಲ್ಲಿ 180 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್‌ಗೆ ‘ಮ್ಯಾನ್‌ಕೈಂಡ್‌ ಫಾರ್ಮಾ’  ಕಂಪನಿಯು 1 ಕೋಟಿ ರೂ. ಘೋಷಣೆ ಮಾಡಿದೆ. ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಸಾಹಸವನ್ನು ಇಡೀ ವಿಶ್ವವೇ ಕೊಂಡಾಡಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ದೇಶಾದ್ಯಂತದ ನಾಗರಿಕರು ಪ್ರಶಂಸೆ ಹಾಗೂ ಶುಭ ಹಾರೈಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆಯೇ ಕಂಪನಿಯು ಸ್ಮಿತ್‌ ಮಚ್ಚಾರ್‌ಗೆ 1 ಕೋಟಿ ಘೋಷಿಸಿದೆ. ದುಬೈ-ಟೆಲ್ ಅವಿವ್ …

Read More »

ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರಾಗಿ ಹಾಕಿ ದಿಗ್ಗಜ ಪರ್ಗತ್ ಸಿಂಗ್ ನೇಮಕ

ಚಂಡೀಗಢ: ಮಾಜಿ ಒಲಿಂಪಿಯನ್ ಹಾಗೂ ಭಾರತೀಯ ಹಾಕಿ ತಂಡದ ಮಾಜಿ ನಾಯಕ, ಜಲಂಧರ್ ಕಂಟೋನ್ಮೆಂಟ್ ಶಾಸಕ ಪರ್ಗತ್ ಸಿಂಗ್  ಅವರನ್ನು ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ  ಅಧ್ಯಕ್ಷರಾಗಿ ಕಾಂಗ್ರೆಸ್ ನೇಮಕ ಮಾಡಿದೆ. ಅಮರಿಂದರ್ ಸಿಂಗ್ ರಾಜಾ ವಾರಿಂಗ್ ರಾಜೀನಾಮೆ ನೀಡಿದ ಬೆನ್ನಲ್ಲೇ ಈ ನೇಮಕಾತಿ ನಡೆದಿದೆ. 2027ರ ಪಂಜಾಬ್ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ರಾಜ್ಯ ಕಾಂಗ್ರೆಸ್ ಘಟಕದಲ್ಲಿ ಈ ಮಹತ್ವದ ನಾಯಕತ್ವ ಬದಲಾವಣೆ ನಡೆದಿದೆ. ಪರ್ಗತ್ ಸಿಂಗ್ ಅವರ …

Read More »

ರಾಮ ಮಂದಿರದಲ್ಲಿ `ಮಿಲಿಟರಿ ಮಾದರಿ’ ಶಿಸ್ತು – ಆಡಳಿತದಲ್ಲಿ ಮಹತ್ವದ ಬದಲಾವಣೆ

ಲಕ್ನೋ: ಕಾಣಿಕೆ ಹಣ ಕಳ್ಳತನದ ) ಘಟನೆ ಬಳಿಕ ಅಯೋಧ್ಯೆಯ ರಾಮ ಮಂದಿರದ  ಆಡಳಿತ ವ್ಯವಸ್ಥೆಯಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ಜಾರಿಗೆ ತರಲು ಸಿದ್ಧತೆ ನಡೆದಿದೆ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿತೇಂದ್ರ ಮಿಶ್ರಾ ಅಧಿಕಾರ ವಹಿಸಿಕೊಂಡ ಬಳಿಕ ದೇವಾಲಯದ ಸಿಬ್ಬಂದಿ ನಿರ್ವಹಣೆ, ಭದ್ರತೆ, ಕಣ್ಗಾವಲು ಹಾಗೂ ಕಾಣಿಕೆ ಹಣದ ಎಣಿಕೆ ವ್ಯವಸ್ಥೆಯಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಲಾಗುತ್ತಿದೆ. ದೇವಾಲಯದಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ಸಿಬ್ಬಂದಿಗೂ ಡಿಜಿಟಲ್ ಪ್ರೊಫೈಲ್ ಸಿದ್ಧಪಡಿಸಲು ನಿರ್ಧರಿಸಲಾಗಿದೆ. ನೇಮಕಾತಿ, ಹುದ್ದೆ, ಕರ್ತವ್ಯ, …

Read More »

ಕಾವೇರಿ ತೀರ್ಥೋದ್ಭವ ಸನ್ನಿಹಿತ – ಕಾವೇರಿ ನೀರಾವರಿ ನಿಗಮದಿಂದ 2 ಕೋಟಿ ರೂ. ಬಿಡುಗಡೆ

ಮಡಿಕೇರಿ: ನಾಡಿನ ಜೀವನದಿ ತಲಕಾವೇರಿಯಲ್ಲಿ ನಡೆಯಲಿರುವ ಪವಿತ್ರ ತೀರ್ಥೋದ್ಭವಕ್ಕೆ  ಇನ್ನೇನು ಕೇವಲ 15 ದಿನಗಳಷ್ಟೇ ಬಾಕಿ ಉಳಿದಿದೆ. ಇದೀಗ ಭಾಗಮಂಡಲ-ತಲಕಾವೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಕ್ರಮವಹಿಸಲಾಗುತ್ತಿದೆ. ಇದರ ನಡುವೆ ಇಲ್ಲಿನ ಅಗತ್ಯ ಕೆಲಸ ಕಾರ್ಯಗಳಿಗಾಗಿ ಕಾವೇರಿ ನೀರಾವರಿ ನಿಗಮದ  ಮೂಲಕ 2 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ. 2 ಕೋಟಿ ರೂ. ಅನುದಾನ ಜಿಲ್ಲಾಧಿಕಾರಿಗಳ ಖಾತೆಗೆ ಬಿಡುಗಡೆಯಾಗಿದ್ದು, ಇದನ್ನು ಜಿಲ್ಲಾಧಿಕಾರಿ ಸೋಮಶೇಖರ್ ಅವರು ಖಚಿತಪಡಿಸಿದ್ದಾರೆ. ತುಲಾ …

Read More »

ಆಂಧ್ರದ ಔಷಧ ತಯಾರಿಕಾ ಘಟಕದಲ್ಲಿ ಬಾಯ್ಲರ್ ಸ್ಫೋಟ – ನಾಲ್ವರು ಸಾವು

ಅಮರಾವತಿ: ಖಾಸಗಿ ಔಷಧ ತಯಾರಿಕಾ ಘಟಕದಲ್ಲಿ  ನೀರಿನ ಬಾಯ್ಲರ್ ಸ್ಫೋಟಗೊಂಡು ನಾಲ್ವರು ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ  ತಿರುಪತಿ  ಜಿಲ್ಲೆಯಲ್ಲಿ ಶನಿವಾರ ಸಂಭವಿಸಿದೆ. ಬೆಳಗ್ಗೆ ಸುಮಾರು 8 ಗಂಟೆಗೆ ಸ್ಫೋಟ ಸಂಭವಿಸಿದ್ದು, ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು. ಅಧಿಕಾರಿಗಳ ಪ್ರಕಾರ, ಬಾಯ್ಲರ್ ಸ್ಫೋಟಗೊಂಡ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮತ್ತಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟಿದ್ದಾರೆ. ಮತ್ತೊಬ್ಬ ಗಂಭೀರವಾಗಿ ಗಾಯಗೊಂಡ ವ್ಯಕ್ತಿಗೆ ಚಿಕಿತ್ಸೆ ಮುಂದುವರಿದಿದೆ. ಸತ್ಯವೇಡು …

Read More »