Breaking News

ವಚನ ಕಂಠಪಾಠ ಚನ್ನಪ್ಪ ನರಸನ್ನವರಿಗೆ ಪ್ರಥಮ ಸ್ಥಾನ

Spread the love

ಬೆಳಗಾವಿ:ಇಲ್ಲಿನ ಮಹಾಂತೇಶ ನಗರದ ಲಿಂಗಾಯತ ಸಂಘಟನೆ ಪ್ರಾರ್ಥನಾ ಮಂದಿರ,  ಡಾ.ಎಫ್.ಜಿ.ಹಳಕಟ್ಟಿ ಭವನದಲ್ಲಿ ನಡೆದ ಜಿಲ್ಲಾಮಟ್ಟದ ಬಸವಾದಿ ಶರಣರ ಆಯ್ದ 15 ಶರಣರ ವಚನ ಕಂಠಪಾಠ ಸ್ಪರ್ಧೆಯಲ್ಲಿ 239 ವಚನಗಳನ್ನು ಕಂಠಪಾಠವಾಗಿ ಹೇಳುವ ಮೂಲಕ ಚನ್ನಪ್ಪ ನರಸನ್ನವರ  ಪ್ರಥಮ ಸ್ಥಾನ ಪಡೆದಿದ್ದಾರೆ.
 ಬೆಳಗಾವಿ ಗುರು ಬಸವ ಬಳಗ  ವತಿಯಿಂದ ವಾಗ್ದೇವಿ ತಾಯಿಯವರು ಹಾಗೂ ಕುಮುದಿನಿ ತಾಯಿಯವರ ಪ್ರೇರಣೆ ಮತ್ತು ಪ್ರೋತ್ಸಾಹದೊಂದಿಗೆ ಆಯೋಜಿಸಿದ್ದ  ಜಿಲ್ಲಾಮಟ್ಟದ ವಚನ ಕಂಠಪಾಠ ಸ್ಪರ್ಧೆಯಲ್ಲಿ ಸರಸ್ವತಿ ಯಡಾಲ 208 ವಚನಗಳನ್ನು ಹೇಳಿ ದ್ವಿತೀಯ ಸ್ಥಾನ ಪಡೆದರೆ, ಸಂಕೇತ ಎಂ. ಮೇಟಿ 184 ವಚನಗಳನ್ನು ಹೇಳಿ ತೃತೀಯ ಸ್ಥಾನ ಗಳಿಸಿದರು. ಶಕುಂತಲಾ ಚೆನ್ನಪ್ಪ ನರಸನ್ನವರ  131 ವಚನಗಳನ್ನು ಹೇಳುವ ಮೂಲಕ ಸಮಾಧಾನಕರ ಬಹುಮಾನಕ್ಕೆ ಆಯ್ಕೆಯಾದರು.
ಸ್ಪರ್ಧೆಯ ವಿಜೇತರಿಗೆ 2026 ಅಕ್ಟೋಬರ 5ರಂದು ಬೆಳಗ್ಗೆ 8 ಗಂಟೆಗೆ ಲಿಂಗಾಯತ ಸಂಘಟನೆಯ ಪ್ರಾರ್ಥನಾ ಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ  ವಾಗ್ದೇವಿ ತಾಯಿಯವರು, ಕುಮುದಿನಿ ತಾಯಿಯವರು ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನಗಳನ್ನು ವಿತರಿಸಲಿದ್ದಾರೆ ಎಂದು  ಆಯೋಜಕರು ತಿಳಿಸಿದ್ದಾರೆ.

Spread the love

About Laxminews 24x7

Check Also

ಬರ ಪರಿಸ್ಥಿತಿ ಗಂಭೀರವಾಗ್ತಿದೆ, ಅಣೆಕಟ್ಟು ನೀರು ನಂಬಿಕೊಂಡು ಬೆಳೆ ಹಾಕಬೇಡಿ – ರೈತರಿಗೆ ಡಿಕೆಶಿ ಮನವಿ

Spread the loveಬೆಂಗಳೂರು: ಮಳೆ ಕೊರತೆಯಿಂದ ರಾಜ್ಯದಲ್ಲಿ ಬರ ಪರಿಸ್ಥಿತಿ ಗಂಭೀರವಾಗ್ತಿದೆ ರಾಜ್ಯದ ಬಹುತೇಕ ಅಣೆಕಟ್ಟುಗಳಲ್ಲಿನ ಒಳಹರಿವು ಶೂನ್ಯಕ್ಕೆ ತಲುಪಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ